Advertisement

ತಂತ್ರಜ್ಞಾನ ವರ್ಗಾವಣೆ ನೀತಿ ಸ್ಪಷ್ಟತೆಗೆ ಅಮೆರಿಕ ಆಗ್ರಹ

07:35 AM Dec 11, 2017 | Harsha Rao |

ನವದೆಹಲಿ: ಭಾರತದ ಖಾಸಗಿ ಕಂಪನಿಗಳಿಗೆ ರಕ್ಷಣಾ ತಂತ್ರಜ್ಞಾನ ವರ್ಗಾವಣೆ ನೀತಿಯಲ್ಲಿ ಸ್ಪಷ್ಟತೆ ಅಗತ್ಯವಿದೆ ಎಂದು ಅಮೆರಿಕ-ಭಾರತ ವಹಿವಾಟು ಕೌನ್ಸಿಲ್‌ನ ಹಿರಿಯ ಅಧಿಕಾರಿಗಳು ಆಗ್ರಹಿಸಿದ್ದಾರೆ. ಅಮೆರಿಕದ ಕಂಪನಿಗಳು ಭಾರತದ ಖಾಸಗಿ ಕಂಪನಿಗಳಿಗೆ ರಕ್ಷಣಾ ವಲಯದ ಸಂಕೀರ್ಣ ತಂತ್ರಜ್ಞಾನ ಮತ್ತು ಮಾಹಿತಿಯನ್ನು ವರ್ಗಾವಣೆ ಮಾಡುವಾಗ ಅದರ ದುರುಪಯೋಗ ತಡೆಗೆ ಸರ್ಕಾರ ಹೊಣೆ ಹೊರಬೇಕು ಎಂದು ಕಂಪನಿಗಳು ಬಯಸಿವೆ.

Advertisement

ಇದಕ್ಕಾಗಿ ಕೇಂದ್ರ ಸರ್ಕಾರವು ನೀತಿಯಲ್ಲಿ ಬದಲಾವಣೆ ಮಾಡಬೇಕು. ಸರ್ಕಾರದ ಜತೆಗೆ ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕು. ಬದಲಿಗೆ ಖಾಸಗಿ ಕಂಪನಿಗಳ ಜತೆ ಮಾತ್ರವೇ ವಿದೇಶಿ ಕಂಪನಿಗಳು ಒಪ್ಪಂದ ಮಾಡಿಕೊಳ್ಳುವಂತಿರಬಾರದು ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ ಎಂಬುದಾಗಿ ಕೌನ್ಸಿಲ್‌ನ ಹಿರಿಯ ನಿರ್ದೇಶಕ ಬೆಂಜಮಿನ್‌ ಶ್ವಾರ್ಜ್‌ ಹೇಳಿದ್ದಾರೆ. ಭಾರತವು ಅಮೆರಿಕ ರಕ್ಷಣಾ ಉತ್ಪಾದನೆ ವಲಯಕ್ಕೆ ಮಹತ್ವದ ಪಾಲುದಾರನಾಗಿದ್ದು, ವಿವಿಧ ಖರೀದಿ ಯೋಜನೆಗಳ ನಿಖರ ವೇಳಾಪಟ್ಟಿಯನ್ನು ಕೇಂದ್ರ ಸರ್ಕಾರ ನಿಗದಿ ಪಡಿಸಬೇಕು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next