Advertisement

ಅಮೆರಿಕಕ್ಕೆ ಮತ್ತೆ ಬಿಕ್ಕಟ್ಟು ಭೀತಿ

12:15 PM Mar 03, 2018 | Team Udayavani |

ನ್ಯೂಯಾರ್ಕ್‌: ಸರಿಯಾಗಿ ಹತ್ತು ವರ್ಷಗಳ ಹಿಂದೆ ವಿಶ್ವವನ್ನೇ ನಡುಗಿಸಿದ್ದ ಆರ್ಥಿಕ ಬಿಕ್ಕಟ್ಟು ಈಗ ಇತಿಹಾಸ. ಆದರೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ ಪ್ರಕಾರ ಶೀಘ್ರದಲ್ಲಿಯೇ, ಅದೇ ಮಾದರಿಯ ಮತ್ತೂಂದು ಸವಾಲು ಅಮೆರಿಕಕ್ಕೆ ಎದುರಾಗಲಿದೆ.

Advertisement

ನ್ಯೂಯಾರ್ಕ್‌ನಲ್ಲಿ “ರೆಡ್‌ ಇಟ್‌’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಎಚ್ಚರಿಕೆ ನೀಡಿದ್ದಾರೆ. “2008ರಂ ತೆಯೇ ಮುಂದಿನ ದಿನಗಳಲ್ಲಿ ಜಗತ್ತು ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆ ಇದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಲ್‌ ಗೇಟ್ಸ್‌, ಅಂಥ ಪರಿಸ್ಥಿತಿ ಬರಲಿದೆ. ಆದರೆ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲಿದ್ದೇವೆ ಎಂದರು. ಆರ್ಥಿಕ ಹಿಂಜರಿತದ ಸವಾಲನ್ನು ಎದುರಿಸಲು ಸಾಧ್ಯವಾಗುವಂಥ ಹೊಸ ಸಂಶೋಧನೆಗಳು ಮತ್ತು ಬಂಡವಾಳ ಹೂಡಿಕೆ ಉತ್ತಮ ರೀತಿಯಲ್ಲಿ ಸುಧಾರಿಸಬಹುದು. ಇದರಿಂದಾಗಿ ಜಗತ್ತಿನಾ ದ್ಯಂತ ಜೀವನ ಕ್ರಮ ಸುಧಾರಿಸಿ, ಪರಿಸ್ಥಿತಿ ಎದುರಿ ಸುವಂತಾದೀತು ಎಂದಿದ್ದಾರೆ.

ಗೇಟ್ಸ್‌ ಮಾತ್ರವಲ್ಲದೆ ಹಣಕಾಸು ಮತ್ತು ಉದ್ದಿಮೆ ಕ್ಷೇತ್ರದ ಇತರ ಪ್ರಮುಖರೂ ಹತ್ತು ವರ್ಷಗಳ ಹಿಂದಿನ ಮಾದರಿಯ ಬಿಕ್ಕಟ್ಟು ಮರುಕಳಿಸುವ ಎಚ್ಚರಿಕೆ ನೀಡಿದ್ದಾರೆ. ಇದಲ್ಲದೆ ಉದ್ಯೋಗ ಕ್ಷೇತ್ರದಲ್ಲಿ ಸ್ವಯಂಚಾಲಿತ ವ್ಯವಸ್ಥೆ ಅಳವಡಿಸುವುದು ಉತ್ತಮ ಕ್ರಮ. ಹೀಗಾಗಿ ನಾವು ಹಿಂದಿನ ತಲೆಮಾರುಗಳಂತೆ ಕೆಲಸ ಮಾಡಬೇಕಾದ ಅಗತ್ಯ ಬರುವುದಿಲ್ಲ. ಹೊಸ ಬದಲಾವಣೆ ವಿಚಾರದಲ್ಲಿ ನಾವು ಒಂದು ತಲೆಮಾರಿನಷ್ಟು ಹಿಂದೆ ಉಳಿದಿದ್ದೇವೆ ಎಂದಿ ದ್ದಾರೆ. ಈ ಹಿಂದೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗೇಟ್ಸ್‌, ಇಂಥ ಬೆಳವಣಿಗೆ ನಡೆಯದಂತೆ ಜನರು ಹೆಚ್ಚು ಎಚ್ಚರಿಕೆ ವಹಿಸುತ್ತಾರೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next