ಅಮೆರಿಕ ಮತ್ತು ಇರಾಕ್ ನಡುವಿನ ಸಂಘರ್ಷ ಉಲ್ಬಣಿಸಿದೆ. ತೈಲ ಟ್ಯಾಂಕರ್ ಸ್ಫೋಟಿಸಿದ ಮತ್ತು ಅಮೆರಿಕ ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿದ ಬಳಿಕ ಉಭಯ ದೇಶಗಳು ಯುದ್ಧ ಸನ್ನದ್ಧವಾಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡ್ರೋನ್ ಹೊಡೆದುರುಳಿಸಿದ ಘಟನೆಯ ಬಳಿಕ ಯುದ್ಧಕ್ಕೆ ಆದೇಶ ನೀಡಿದರೂ ಕೊನೆ ಕ್ಷಣದಲ್ಲಿ ಅದನ್ನು ಹಿಂದೆಗೆದುಕೊಂಡರು. ಬಹಳ ಕಾಲದಿಂದ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಇರಾನ್ ಮತ್ತು ಅಮೆರಿಕ ನಡುವೆ ತಿಕ್ಕಾಟ ನಡೆಯುತ್ತಿತ್ತು. ಡ್ರೋನ್ ಹೊಡೆದುರುಳಿಸಿದ ಘಟನೆ ಅದು ಇನ್ನಷ್ಟು ತೀವ್ರಗೊಳ್ಳಲು ಒಂದು ನೆಪವಾಗಿತ್ತಷ್ಟೆ.
ಇರಾನ್ ಮೇಲೆ ಯುದ್ಧ ಸಾರಲು ಅಮೆರಿಕ ಹೊಂಚು ಹಾಕಿ ಕುಳಿತಿದೆ. ಅದಾಗ್ಯೂ ಡ್ರೋನ್ ಹೊಡೆದುರುಳಿಸಿದ ಘಟನೆ ಬಳಿಕ ಟ್ರಂಪ್ ತೋರಿಸಿದ ಸಂಯಮ ಅನೇಕರಿಗೆ ಆಶ್ಚರ್ಯ ಉಂಟು ಮಾಡಿದೆ.ಇದಕ್ಕೆ ಹಲವು ಕಾರಣಗಳಿವೆ. ಮಧ್ಯ ಪೂರ್ವದಲ್ಲಿ ಈಗ ಪರಿಸ್ಥಿತಿ ಅಮೆರಿಕಕ್ಕೆ ಪೂರಕವಾಗಿಲ್ಲ. ಸೌದಿ ಅರೇಬಿಯ ಹೊರತುಪಡಿಸಿದರೆ ಉಳಿದ ದೇಶಗಳು ಅಮೆರಿಕ ಜೊತೆಗೆ ನಿಕಟ ಬಾಂಧವ್ಯ ಹೊಂದಿಲ್ಲ. ಅಲ್ಲದೆ ಅಫ್ಘಾನ್‌ನಂಥ ದೇಶಗಳಲ್ಲಿ ನಿಷ್ಪ್ರಯೋಜಕ ಯುದ್ಧಗಳನ್ನು ಮಾಡಿ ಯೋಧರನ್ನು ಬಲಿಗೊಡುವುದಕ್ಕೆ ಅಮೆರಿಕದಲ್ಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅದೇ ಮಾದರಿಯ ಇನ್ನೊಂದು ಯುದ್ಧಕ್ಕೆ ಮುಂದಾದರೆ ದೇಶದೊಳಗಿನ ವಿರೋಧಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಜಾಗತಿಕ ಆರ್ಥಿಕತೆ ಬಲಹೀನವಾಗಿದ್ದು, ಈ ಸಂದರ್ಭದಲ್ಲಿ ಯುದ್ಧವೇನಾ ದರೂ ಸಂಭವಿಸಿದರೆ ಅದನ್ನು ತಾಳಿಕೊಳ್ಳುವುದು ಅಮೆರಿಕದಂಥ ದೇಶಕ್ಕೂ ಕಷ್ಟ. ಈ ಎಲ್ಲ ಕಾರಣಗಳಿಗೆ ಟ್ರಂಪ್ ಯುದ್ಧಕ್ಕೆ ಆದೇಶ ನೀಡಿಯೂ ಅನಂತರ ಸಂಯಮ ತೋರಿಸಿದ್ದಾರೆ.
ಅಮೆರಿಕ, ರಷ್ಯಾ, ಚೀನ ಸೇರಿದಂತೆ ಎಲ್ಲ ದೈತ್ಯ ರಾಷ್ಟ್ರಗಳಿಗೆ ಕಣ್ಣಿರುವುದು ಮಧ್ಯ ಪೂರ್ವದ ಸಮೃದ್ಧ ತೈಲ ಸಂಪತ್ತಿನ ಮೇಲೆ. ರಷ್ಯಾ ಬಂದರು ಅಭಿವೃದ್ಧಿ ಮತ್ತಿತರ ಕಾರ್ಯಕ್ರಮಗಳ ಮೂಲಕ ಈಗಾಗಲೇ ಇರಾನ್ ಜತೆಗೆ ಉತ್ತಮ ಸಂಬಂಧ ಸ್ಥಾಪಿಸಿದೆ. ಚೀನ ಕೂಡಾ ಬೆಲ್r ಆ್ಯಂಡ್ ರೋಡ್ ಯೋಜನೆಯ ಮೂಲಕ ಮಧ್ಯ ಪೂರ್ವಕ್ಕೆ ನಿಕಟವಾಗಲು ಪ್ರಯ ತ್ನಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಇರಾನ್ ಜತೆಗೆ ನೇರ ಕದನಕ್ಕಿಳಿದರೆ ತಕ್ಷಣ ಅಲ್ಲದಿದ್ದರೂ ದೀರ್ಘಾವಧಿ ಯಲ್ಲಿ ಅದರಲ್ಲಿ ಇತರ ದೇಶಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸೇರಿಕೊಳ್ಳುವ ಸಾಧ್ಯತೆ ಇರು ವುದರಿಂದ ಸದ್ಯಕ್ಕೆ ಅಮೆರಿಕ ಯುದ್ಧದ ಯೋಜನೆಯನ್ನು ಕೈಬಿಟ್ಟಿರುವಂತೆ ಕಾಣಿಸುತ್ತದೆ. ಮಧ್ಯ ಪೂರ್ವದಲ್ಲಾಗುವ ಯಾವುದೇ ಅಸ್ಥಿರತೆ ತೈಲ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಸದ್ಯ ಯಾವ ದೇಶವೂ ತೈಲ ಬೆಲೆ ಏರಿಕೆ ಯ ಹೊರೆಯನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇರಾನ್ ಸೇನೆಯೂ ತೀರಾ ದುರ್ಬಲವೇನಲ್ಲ. ಇದಕ್ಕೂ ಮಿಗಿಲಾಗಿ ಜಗತ್ತಿನ ಬಹುತೇಕ ತೈಲ ಸಾಗಾಟ ಹಡಗುಗಳು ಹಾದು ಹೋಗುವ ಹೊರ್ಮುಜ್ ಜಲಸಂಧಿಯನ್ನೇನಾದರೂ ಇರಾನ್ ತಡೆದರೆ ಇಡೀ ಜಗತ್ತು ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ.
ಈ ಎಲ್ಲ ಹಿನ್ನೆಲೆಯಲ್ಲಿ ಅಮೆರಿಕ ಅದ್ಯಕ್ಷರು ಯುದ್ಧ ಕೈಬಿಟ್ಟು ಇರಾನ್ ಮೇಲೆ ಇನ್ನಷ್ಟು ಒತ್ತಡ ಹೇರುವ ಹಾದಿಯನ್ನು ಆಯ್ದುಕೊಂಡಿದ್ದಾರೆ ಮತ್ತು ಈ ಸಂದರ್ಭದಲ್ಲಿ ಇದು ಸಮುಚಿತವಾದ ನಿರ್ಧಾರವೂ ಆಗಿತ್ತು. ಇರಾನ್ ಅಣು ಬಾಂಬ್ ತಯಾರಿಸುವುದನ್ನು ತಡೆಯಬೇಕೆಂದಿದ್ದರೆ ಅದರ ಮೇಲೆ ಇನ್ನಷ್ಟು ರಾಜತಾಂತ್ರಿಕ ಒತ್ತಡಗಳನ್ನು ಹೇರುವುದು ಅಗತ್ಯ. ಜಗತ್ತಿಗೆ ಈಗ ಬೇಕಿರುವುದು ಶಾಂತಿಯೇ ಹೊರತು ಯುದ್ಧವಲ್ಲ. ಈ ವಿಚಾರವನ್ನು ಜಾಗತಿಕ ನಾಯಕರು ಅರ್ಥ ಮಾಡಿಕೊಳ್ಳಬೇಕು.
ಅಮೆರಿಕ ಹೇರಿದ ಆರ್ಥಿಕ ದಿಗ್ಬಂಧನಗಳಿಂದಾಗಿ ಈಗಾಗಲೇ ಇರಾನ್‌ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಿಯಲ್ ಮೌಲ್ಯ ಪಾತಾಳಕ್ಕಿಳಿದು ಜನರ ಪ್ರತಿರೋಧವನ್ನು ಎದುರಿಸಲಾಗಿದೆ ಸರ್ಕಾರ ಹೈರಣಾಗಿದೆ. ಅಲ್ಲದೆ ಅಣು ಬಾಂಬು ತಯಾರಿಸಲೇ ಬೇಕೆಂದು ಹಠಕ್ಕೆ ಬಿದ್ದಿರುವಂತೆ ವರ್ತಿಸುತ್ತಿರುವ ಇರಾನ್ ಕ್ರಮೇಣ ಅಂತರಾಷ್ಟ್ರೀಯ ಸಮುದಾಯದ ಬೆಂಬಲವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದೆ.
ಅಮೆರಿಕ-ಇರಾನ್ ನಡುವಿನ ಪ್ರಕ್ಷುಬ್ಧತೆ ತನ್ನದೇ ಆದ ರೀತಿಯಲ್ಲಿ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಇರಾನ್‌ನಲ್ಲಿ ಭಾರತದ ಕೆಲವು ಲಕ್ಷ ಮಂದಿ ನೌಕರಿ ಮಾಡುತ್ತಿದ್ದು, ಯುದ್ಧವೇನಾದರೂ ಸಂಭವಿಸಿದರೆ ಇವರನ್ನು ವಾಪಸು ಕರೆತರುವುದು ಅನಿವಾರ್ಯವಾಗಬಹುದು. ಅಲ್ಲದೆ ಈಗಲೂ ತೈಲಕ್ಕಾಗಿ ನಾವು ಇರಾನ್ ಅನ್ನು ಅವಲಂಬಿಸಿದ್ದೇವೆ. ಕಚ್ಚಾತೈಲ ಬೆಲೆ ಏರಿಕೆಯಾದರೆ ಅದರ ಪರಿಣಾಮ ಏನಾಗುತ್ತದೆ ಎನ್ನುವ ಧಾರಾಳ ಅನುಭವ ನಮಗಿದೆ. ಹೀಗಾಗಿ ಇರಾನ್-ಅಮೆರಿಕ ಸಂಘರ್ಷ ಉಲ್ಬಣವಾಗದಂತೆ ನೋಡಿಕೊಳ್ಳಲು ಭಾರತದ ತನ್ನದೇ ಆದ ಪಾತ್ರವನ್ನು ನಿಭಾಯಿಸುವ ಅನಿವಾರ್ಯತೆ ಇದೆ. ಉಭಯ ದೇಶಗಳನ್ನು ಸಂಧಾನಕ್ಕೆ ಮನವೊಲಿಸುವ ಕೆಲಸವನ್ನು ಈ ಸಂದರ್ಭದಲ್ಲಿ ಮೋದಿ ಸರ್ಕಾರ ಮಾಡಬಹುದು.
ಅಮೆರಿಕ, ರಷ್ಯಾ, ಚೀನ ಸೇರಿದಂತೆ ಎಲ್ಲ ದೈತ್ಯ ರಾಷ್ಟ್ರಗಳಿಗೆ ಕಣ್ಣಿರುವುದು ಮಧ್ಯ ಪೂರ್ವದ ಸಮೃದ್ಧ ತೈಲ ಸಂಪತ್ತಿನ ಮೇಲೆ. ರಷ್ಯಾ ಬಂದರು ಅಭಿವೃದ್ಧಿ ಮತ್ತಿತರ ಕಾರ್ಯಕ್ರಮಗಳ ಮೂಲಕ ಈಗಾಗಲೇ ಇರಾನ್ ಜತೆಗೆ ಉತ್ತಮ ಸಂಬಂಧ ಸ್ಥಾಪಿಸಿದೆ. ಚೀನ ಕೂಡಾ ಬೆಲ್r ಆ್ಯಂಡ್ ರೋಡ್ ಯೋಜನೆಯ ಮೂಲಕ ಮಧ್ಯ ಪೂರ್ವಕ್ಕೆ ನಿಕಟವಾಗಲು ಪ್ರಯತ್ನಿಸುತ್ತಿದೆ.