Advertisement

ಕುಂದು ಕೊರತೆ ಪರಿಶೀಲನೆ: ಸೌಲಭ್ಯ ಒದಗಿಸಲು ಆಗ್ರಹ

06:26 PM May 29, 2022 | Team Udayavani |

ಮಾನ್ವಿ: ನಿರ್ವಹಣೆ ಇಲ್ಲದಿರುವುದರಿಂದ ಕೊಳವೆ ಬಾವಿ ಮುಚ್ಚಿ ಹೋಗಿದ್ದು, ಕೂಡಲೇ ದುರಸ್ತಿ ಮಾಡಿಸಿ ಹಾಗೂ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕು. ಕುಡಿಯುವ ನೀರಿಗಾಗಿ ಪ್ರತ್ಯೇಕ ನಳ ಹಾಕಬೇಕು ಎಂದು 19ನೇ ವಾರ್ಡ್‌ನ ಹಿರಿಯ ಸದಸ್ಯ ರಾಜಾ ಮಹೇಂದ್ರ ನಾಯಕ ಒತ್ತಾಯಿಸಿದರು.

Advertisement

ಪಟ್ಟಣದ 19ನೇ ವಾರ್ಡ್‌ನಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡ ಸಾರ್ವಜನಿಕರಿಂದ ಕುಂದು-ಕೊರತೆಗಳ ಪರಿಶೀಲನೆ ವೇಳೆ ಮಾತನಾಡಿದ ಅವರು, ವಾರ್ಡ್‌ನ ಜನರಿಗೆ ಕುಡಿಯುವ ನೀರು ಹಾಗೂ ದಿನ ಬಳಕೆಗಾಗಿ ನೀರಿನ ಕೊರತೆ ಇದ್ದು ಕಳೆದ ಕೆಲ ದಿನಗಳಿಂದ ನೀರು ಬರುತ್ತಿಲ್ಲ. ಜನರ ಅನುಕೂಲಕ್ಕಾಗಿ ಕೊಳವೆ ಬಾವಿ ಹಾಗೂ ನೀರಿನ ಸಂಗ್ರಹಣೆಗಾಗಿ ಟ್ಯಾಂಕ್‌ಗಳನ್ನು ನಿರ್ಮಿಸುವ ಮೂಲಕ ಜನರಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ವಾರ್ಡ್‌ಗಳಲ್ಲಿ ನಿರ್ಮಿಸಿರುವ ಚರಂಡಿ ಮುಚ್ಚಿ ಹೋಗಿದ್ದು ದುರಸ್ತಿ ಮಾಡಿಸಬೇಕು. ವಾರ್ಡ್‌ಗಳಲ್ಲಿ ಕಸದ ನಿರ್ವಹಣೆ ಮಾಡಬೇಕು ಎಂದರು.

ಮುಖ್ಯಾಧಿಕಾರಿ ಗಂಗಾಧರ ಮಾತನಾಡಿ, ಪ್ರತಿದಿನ ಪಟ್ಟಣದಲ್ಲಿನ ಎರಡು ವಾರ್ಡ್‌ಗಳನ್ನು ಪರಿಶೀಲಿಸಿ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ಪುರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಕಂಡುಕೊಳ್ಳಲಾಗುವುದು. ಕುಡಿಯುವ ನೀರಿನ ಸರಬರಾಜು ಸೇರಿದಂತೆ ವಾರ್ಡ್‌ಗಳ ಸ್ವಚ್ಛತೆಗಾಗಿ ಆದ್ಯತೆ ನೀಡಲಾಗುವುದು, ವಿಕಲಚೇತನರಿಗೆ ಶೇ.5ರ ಅನುದಾನದಲ್ಲಿ ತ್ರಿಚಕ್ರ ವಾಹನ ವಿತರಣೆ ಸೇರಿದಂತೆ ಆರ್ಥಿಕ ದುರ್ಬಲವಾಗಿರುವ ಜನರಿಗೆ ಮನೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಪ್ರತಿ ಎರಡು ದಿನಗಳಿಗೆ ಒಮ್ಮೆ ಕುಡಿಯುವ ನೀರು ಬಿಡಲು ಕ್ರಮ ಕೈಗೊಳ್ಳಲು ಕೊಳವೆ ಬಾವಿಗಳ ದುರಸ್ತಿ ಸೇರಿದಂತೆ ಸಾರ್ವಜನಿಕ ನಳಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಪುರಸಭೆ ಅಭಿಯಂತರರಾದ ಶರಣಪ್ಪ, ಪ್ರಿಯಾಂಕ, ಹಿರಿಯ ನೈರ್ಮಲ್ಯಧಿ ಕಾರಿ ಹಂಪಯ್ಯ, ಕಿರಿಯ ನೈರ್ಮಲ್ಯಧಿಕಾರಿ ಮಹೇಶಕುಮಾರ, ಈರಣ್ಣ, ಪುರಸಭೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next