Advertisement

ಪತ್ರಿಕಾ ವಿತರಕರಿಗೆ ಲಸಿಕೆ ನೀಡಲು ಆಗ್ರಹ

06:44 PM Jun 02, 2021 | Team Udayavani |

ಚನ್ನರಾಯಪಟ್ಟಣ: ಪತ್ರಿಕಾ ವಿತರಕರು ನಿತ್ಯವೂ ಸಮಾಜದಲ್ಲಿಎಲ್ಲರೊಂದಿಗೆ ಇರುವುದರಿಂದ ಕೊರೊನಾ ವಾರಿಯರ್ ಎಂದುಸರ್ಕಾರ ಘೋಷಣೆ ಮಾಡಬೇಕುಎಂದು ಮನೋಹರ್‌ ಸೇವಾಪ್ರತಿಷ್ಠಾನದ ಅಧ್ಯಕ್ಷ ಮನೋಹರ್‌ಕುಂಬೇನಹಳ್ಳಿ ಒತ್ತಾಯಿಸಿದರು.

Advertisement

ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾ ವಿತರಕರಿಗೆ ಔಷಧಿ ಹಾಗೂಇಮ್ಯೂನಿಟಿ ಕಿಟ್‌ ವಿತರಿಸಿ ಮಾತನಾಡಿ,ಈಗಾಗಲೇ ಸರ್ಕಾರ ಲಸಿಕೆ ನೀಡುತ್ತಿದೆ.ಸರ್ಕಾರಿ ನೌಕರರಿಗೆ ಹಾಗೂ ಕೊರೊನಾವಾರಿಯರ್ಗೆ ಮೊದಲ ಆದ್ಯತೆ ನೀಡಿದೆ.18 ವರ್ಷ ಮೇಲ್ಪಟ್ಟ ಪತ್ರಿಕಾ ವಿತರಕರಿಗೂ ಲಸಿಕೆಗೆ ನೀಡಲುಆದ್ಯತೆ ನೀಡಿಬೇಕು ಎಂದು ಮನವಿ ಮಾಡಿದರು.ತಾಲೂಕು ಆಡಳಿತವು ಪತ್ರಿಕಾ ವಿತರಕರ ಪಟ್ಟಿ ಸಿದ್ಧಪಡಿಸಿಲಸಿಕಾಕೇಂದ್ರದಮೂಲಕಲಸಿಕೆ ಕೊಡಿಸಬೇಕು.

ಕೊರೊನಾವೇಳೆಜೀವದ ಹಂಗು ತೊರೆದು ನಿತ್ಯವೂ ಬೆಳಗ್ಗೆ ಪತ್ರಿಕೆ ಹಂಚುವ ಕೆಲಸಮಾಡುವಯುವಕರುಹಾಗೂವಿತರಕರಿಗೂ ಸರ್ಕಾರದ ಸೌಲಭ್ಯನೀಡಬೇಕು ಎಂದು ಆಗ್ರಹಿಸಿದರು.ವಿತರಕ ಪುಟ್ಟಣ್ಣ ಮಾತನಾಡಿ, ಕೊರೊನಾಮೊದಲ ಅಲೆಯಲ್ಲಿ ತಾಲೂಕು ಆಡಳಿತ ಮಿನಿವಿಧಾನಸೌಧದಲ್ಲಿ ಸಭೆ ಮಾಡಿ ಹಲವು ಭರವಸೆನೀಡಿದ್ದು, ಇದುವರೆಗೆ ಭರವಸೆಯಾಗಿಉಳಿದಿದೆ.

ಸಂಕಷ್ಟದಲ್ಲಿ ಇರುವ ಪತ್ರಿಕಾವಿತರಕರಿಗೆ ಅಗತ್ಯ ಕಿಟ್‌ ವ್ಯವಸ್ಥೆ ಮಾಡಲಿಲ್ಲ.ಇನ್ನು ಮುಂದಾದರೂ ತಾಲೂಕು ಆಡಳಿತಪತ್ರಿಕಾ ವಿತರಕರ®ು° ‌ ಪರಿಗಣಿಸಬೇಕು. ಪತ್ರಿಕಾವಿತರಕರಿಗೆ ಧೈರ್ಯ ಹೇಳಿ ಕೈಲಾದ ಸಹಾಯಮಾಡಲು ಮನೋಹರ್‌ ಪ್ರತಿಷ್ಠಾನಮುಂದಾಗಿರುವುದು ಸಂತಸ ತಂದಿದೆ ಎಂದರು. ಪತ್ರಿಕಾವಿತರಕರಾದ ಎ.ಎಂ.ಜಯರಾಂ, ಕೃಷ್ಣಪ್ರಸಾದ್‌, ವೆಂಕಟೇಶ್‌,ಮಂಜುನಾಥ್‌, ಪಾಂಡುರಂಗ, ಗುರಪ್ರಸಾದ್‌, ಮನೋಹರ್‌ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಸೀಮಾ ರಮೇಶ್‌,ಕೋಟೆಸ್ವಾಮಿ, ಈಶ್ವರ್‌, ರಾಘುಕದಂಬ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next