Advertisement

ಜಲಮಂಡಳಿಯನ್ನು ಸಾಲದ ಕೂಪಕ್ಕೆ ತಳ್ಳದಂತೆ ಆಗ್ರಹ

12:16 AM Jun 25, 2019 | Team Udayavani |

ಕಾಸರಗೋಡು: ಎ.ಡಿ.ಬಿ. ಸಾಲದ ನೆಪದಲ್ಲಿ ತಳ್ಳುವ ಕ್ರಮವನ್ನು ಹಿಂದೆಗೆದುಕೊಳ್ಳಬೇಕು, ಜಲ ಮಂಡಳಿಯನ್ನು ಅವೈಜ್ಞಾನಿಕವಾಗಿ ಕ್ರಮೀಕರಿಸುವ ನಿಲುವನ್ನು ಕೈಬಿಡಬೇಕು, ಜಲ ಮಂಡಳಿಯ ಯೋಜನೆಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹಸ್ತಾಂತರಿಸಿ ಬಳಕೆದಾರರಿಗೆ ಭಾರಿ ಹೊರೆಯನ್ನುಂಟು ಮಾಡುವ ಕ್ರಮವನ್ನು ಪುನರ್‌ ಪರಿಶೀಲಿಸಬೇಕು, ನಾನ್‌ ಪ್ಲಾನ್‌ ಗ್ರಾಂಟ್ನ್ನು ಕಡಿತಗೊಳಿಸುವ ನಿಲುವನ್ನು ಕೈಬಿಡಬೇಕು, ಪಿಂಚಣಿ ಹಾಗೂ ಸವಲತ್ತು ವಿತರಣೆಯಲ್ಲಿ ವಿಳಂಬವನ್ನು ಕೊನೆಗೊಳಿಸಬೇಕು, ಎಲ್ಲ ಸಿಬಂದಿಗೆ ಕಾಲ ಕಾಲಕ್ಕೆ ಅನುಗುಣವಾಗಿ ಭಡ್ತಿ ನೀಡಬೇಕು. ಹೆಡ್‌ ಆಪರೇಟರ್‌ ಸೂಪರ್‌ವೈಸರ್‌ ಹುದ್ದೆಯನ್ನು ಖಾತ್ರಿ ಪಡಿಸಬೇಕು, ಸ್ಟ್ಯಾಚುಟರಿ ಪಿಂಚಣಿಯನ್ನು ಮತ್ತೆ ಜಾರಿಗೆ ತರಬೇಕು, ವರ್ಗಾವಣೆಯನ್ನು ಸರಿಯಾದ ದಾರಿಯಲ್ಲಿ ನಡೆಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಕೇರಳ ವಾಟರ್‌ ಅಥಾರಿಟಿ ಸ್ಟಾಫ್‌ ಅಸೋಸಿಯೇಶನ್‌ ಐಎನ್‌ಟಿಯುಸಿ ನೇತೃತ್ವದಲ್ಲಿ ರಾಜ್ಯ ವ್ಯಾಪಕವಾಗಿ ಜಲ ಮಂಡಳಿ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಯಿತು.

Advertisement

ಕಾಸರಗೋಡು ವಿಭಾಗೀಯ ಕಚೇರಿ ಮುಂದೆ ನಡೆದ ಪ್ರತಿಭಟನ ಧರಣಿ ಸತ್ಯಾಗ್ರಹ ವನ್ನು ಡಿಸಿಸಿ ಪ್ರಧಾನ ಕಾರ್ಯ ದರ್ಶಿ ಎಂ.ಅಸೈನಾರ್‌ ಉದ್ಘಾಟಿಸಿದರು. ಸ್ಟಾಫ್‌ ಅಸೋಸಿಯೇಶನ್‌ ಜಿಲ್ಲಾ ಕಾರ್ಯಾಧ್ಯಕ್ಷ ವಿನೋದ್‌ ಕುಮಾರ್‌ ಅರಮನ ಅಧ್ಯಕ್ಷತೆ ವಹಿಸಿದರು. ಕೇರಳ ವಾಟರ್‌ ಅಥಾರಿಟಿ ಪೆನ್ಶನರ್ಸ್‌ ಕಾಂಗ್ರೆಸ್‌ ಉಪಾಧ್ಯಕ್ಷ ಬಾಬು ಮಣಯಂಕಾನಂ, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಭಾಕರನ್‌ ಕರಿಚ್ಚೇರಿ, ಕೇರಳ ವಾಟರ್‌ ಅಥಾರಿಟಿ ಸ್ಟಾಫ್‌ ಅಸೋಸಿಯೇಶನ್‌ ರಾಜ್ಯ ಕಾರ್ಯದರ್ಶಿ ಟಿ.ವಿ. ವಿನೋದ್‌ ಕುಮಾರ್‌, ಕೇಂದ್ರ ಸಮಿತಿ ಸದಸ್ಯ ಕೆ.ವಿ. ರಮೇಶ್‌, ರಾಜ್ಯ ಸಮಿತಿ ಸದಸ್ಯ ಕೆ.ವಿ. ತಾರೇಶ್‌, ಕಾಂಞಂಗಾಡ್‌ ಯೂನಿಟ್ ಪದಾಧಿಕಾರಿಗಳಾದ ಕೆ. ಹರಿ, ಪ್ರದೀಪನ್‌ ಪುವಂಗರ, ಕಾಸರಗೋಡು ಯೂನಿಟ್ ಪದಾಧಿಕಾರಿಗಳಾದ ಪಿ.ವಿ. ರಾಜೇಶ್‌, ಕೆ.ಪಿ. ಮಧುಸೂದನನ್‌, ಪಿ.ಆರ್‌. ಸುರೇಶ್‌, ಎಂ.ವಿ. ಸುರೇಂದ್ರನ್‌, ಎಂ.ವಿ. ಸುರೇಶ್‌ ಕುಮಾರ್‌ ಮೊದಲಾದವರು ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ಕೆ.ವಿ. ವೇಣುಗೋಪಾಲನ್‌ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ವಿ.ಪದ್ಮನಾಭನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next