Advertisement

ಕುರಾನ್‌ನ ನೈಜ ಮೌಲ್ಯಗಳ ಅನಾವರಣ

03:45 AM Jan 13, 2017 | Team Udayavani |

ಮಂಗಳೂರು: ಪವಿತ್ರ ಕುರಾನ್‌ನಲ್ಲಿ ತಿಳಿಸಲಾದ ಮಾನವೀಯ ಗುಣಗಳು, ಜೀವನದ ವಿವಿಧ ಘಟ್ಟಗಳು, ಕೋಮುವಾದದ ವಿರುದ್ಧ ದನಿ, ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಬೃಹತ್‌ ಪ್ರದರ್ಶನ ಮಿರಾಕಲ್‌ ಪವಾಡ ಸಮ್ಮೇಳನದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ.

Advertisement

ಮಂಗಳೂರಿನ ಕರ್ನಾಟಕ ಸಲಫಿ ಅಸೋಸಿಯೇಶನ್‌ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮ ಜ. 9ರಂದು ಅನೀಸುರ್ರಹ್ಮಾನ್‌ ಮದನಿ ಅವರಿಂದ ಉದ್ಘಾಟನೆಗೊಂಡಿತು. ಸಮ್ಮೇಳನದಲ್ಲಿ ಇಸ್ಲಾಂ ಧರ್ಮದಲ್ಲಿ ತಿಳಿಸಲಾದ ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತಿದೆ. ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ವಿವಿಧ ಧರ್ಮದ ಸಹಸ್ರಾರು ಮಂದಿ ಮೈದಾನದಲ್ಲಿ ಸೇರುತ್ತಿದ್ದಾರೆ.

500 ಪ್ಯಾನಲ್‌ಗ‌ಳ ರಚನೆ: ಇದಕ್ಕಾಗಿ 30,000ಚದರ ಅಡಿ ವಿಸೀ¤ರ್ಣದಲ್ಲಿ ಸುಮಾರು 500 ಪ್ಯಾನಲ್‌ಗಳು ರಚನೆಯಾಗಿವೆ. ಕನ್ನಡ ಹಾಗೂ ಇಂಗ್ಲಿಷ್‌ನ ಪ್ರತ್ಯೇಕ ಪ್ಯಾನೆಲ್‌ಗ‌ಳಲ್ಲಿ ಪ್ರವಾದಿಗಳ ಬೋಧನೆಗಳನ್ನು ಚಿತ್ರಗಳ ಮೂಲಕ ವಿವರಿಸಲಾಗುತ್ತಿದೆ. ಪ್ರತಿಯೊಂದು ಪ್ಯಾನೆಲ್‌ಗ‌ಳ ಮುಂದೆ ಮಾರ್ಗದರ್ಶಿಗಳು ವಿವರ ನೀಡಲು ಸಿದ್ಧರಿರುತ್ತಾರೆ. ಮಹಿಳೆಯರಿಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪೆವಿಲಿಯನ್‌ ಇದ್ದು, ಮಹಿಳೆಯರಿಗೆ ಮಹಿಳೆಯರಿಂದ ತರಗತಿ, ವೈಜ್ಞಾನಿಕ ಮಾದರಿಗಳ ವಿವರಣೆಗಳನ್ನು ನೀಡಲಾಗುತ್ತದೆ. ಸಂಜೆ ವೇಳೆಗೆ ಪ್ರಸಿದ್ಧ ವಿದ್ವಾಂಸರಿಂದ ಪ್ರವಚನಗಳು ನಡೆಯುತ್ತಿವೆ.

ಎಳೆಯರಿಗಾಗಿ ಕಿಡ್ಸ್‌ ಕಾರ್ನರ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವುದಕ್ಕೆ ವಿಶೇಷ ಒತ್ತು ನೀಡಿಲಾಗಿದೆ. ಮಾದಕ ದ್ರವ್ಯಗಳ ಚಟ ನಮ್ಮ ಜೀವನವನ್ನೇ ನಾಶ ಮಾಡುತ್ತದೆ ಎಂದು ತಿಳಿ ಹೇಳುವ ಪ್ಯಾನೆಲ್‌ಗ‌ಳು ಪ್ರದರ್ಶನದಲ್ಲಿವೆ.
 
ಧರ್ಮಗಳ ನಡುವೆ ದ್ವೇಷ ಹೊತ್ತಿ ಉರಿಯುತ್ತಿರುವ ಕಾಲಘಟ್ಟದಲ್ಲಿ ಪವಿತ್ರ ಗ್ರಂಥಗಳು ಏನು ಹೇಳುತ್ತಿವೆ ಎಂಬುದನ್ನು ಮನದಟ್ಟು ಮಾಡಿಸುವ ಕಾರ್ಯ ಪ್ರದರ್ಶನದಲ್ಲಾಗುತ್ತಿದೆ. ಕೋಮುವಾದಕ್ಕಾಗಿ ಹೋರಾಡು ವಾಗ ಮರಣ ಹೊಂದಿದರೆ ಅದು ಇಸ್ಲಾಮೇತರ ಮರಣವಾಗಿದೆ ಮುಂತಾದ ಮುಹಮ್ಮದ್‌ (ಸ) ಹೇಳಿರುವ ಮಾತುಗಳ ಬಗ್ಗೆ ಜನರಲ್ಲಿ ಮನವರಿಕೆ ಮಾಡುವ ಕೆಲಸವನ್ನು ಸಂಘಟನೆ ಮಾಡುತ್ತಿದೆ. ಪ್ರದರ್ಶನ ಜ. 15ರ ವರೆಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ನಡೆಯಲಿದ್ದು, ಎಲ್ಲ ಧರ್ಮದವರಿಗೆ ಮುಕ್ತ ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next