Advertisement

ಈ ವಿವಿಯಲ್ಲಿ ಮೊಬೈಲ್‌ ನಂಬರ್‌ ಕೊಡೋದಕ್ಕೆ ನಿಷೇಧ

03:45 AM Feb 06, 2017 | Team Udayavani |

ಬಿಕಾನೇರ್‌: ಕಾಲೇಜುಗಳು ಮತ್ತು ವಿವಿಗಳಲ್ಲಿ ವಾಟ್ಸ್‌ ಆ್ಯಪ್‌ ಮೂಲಕ ಕಿಚಾಯಿಸಲಾಯಿತು ಎಂಬ ಬಗ್ಗೆ ಈಗೀಗ ದೂರುಗಳು ಸಾಮಾನ್ಯ. ಇಂಥ ಎಡವಟ್ಟುಗಳನ್ನು ತಪ್ಪಿಸಲೆಂದೇ ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಪಶುಸಂಗೋಪನಾ ವಿವಿಯಲ್ಲಿ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳನ್ನು ರಚಿಸಲಾಗಿದೆ.  ವಿದ್ಯಾರ್ಥಿಗಳ ಜತೆಗೆ ಮೊಬೈಲ್‌ ಸಂಖ್ಯೆ ಹಂಚಿಕೊಳ್ಳಬಾರದು ಎಂದು ಕಟ್ಟಾಜ್ಞೆಯನ್ನೂ ವಿಧಿಸಲಾಗಿದೆ.

Advertisement

ಅದರಲ್ಲಿ ತರಗತಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಅಪ್‌ಡೇಟ್‌ ಮಾಡಲಾಗುತ್ತದೆ. ಗಮನಾರ್ಹ ಅಂಶವೆಂದರೆ ಈ ನಿಯಮ ಕೇವಲ ಪದವಿಯ ಕೊನೆಯ ವರ್ಷದಲ್ಲಿರುವ ವಿದ್ಯಾರ್ಥಿಗಳಿಗಾಗಿ ಮಾಡಲಾಗಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಗ್ರೂಪ್‌ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿನಿಯರ ಮೊಬೈಲ್‌ ಸಂಖ್ಯೆ ವಿದ್ಯಾರ್ಥಿಗಳಿಗೆ ಸಿಕ್ಕಿ ಎಡವಟ್ಟಾಗುವುದು ವಿವಿಗೆ ಇಷ್ಟವಿಲ್ಲ ಎಂದು ಕುಲಪತಿ ಪೊ| ಎ.ಕೆ. ಗೆಹೊÉàಟ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next