Advertisement

ಪಟ್ಟ ದೇವರ ಶೈಕ್ಷಣಿಕ ಸೇವೆ ಅನುಪಮ

05:58 PM Feb 06, 2022 | Team Udayavani |

ಭಾಲ್ಕಿ: ಹಿರೇಮಠ ಸಂಸ್ಥಾನದ ವತಿಯಿಂದ ಹೊರ ಬರುವ ಶಾಂತಿಕಿರಣ ಪತ್ರಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಬಿಡುಗಡೆ ಮಾಡಿದರು.

Advertisement

ಬೆಂಗಳೂರಿನ ವಿಧಾನಸೌಧ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರ ಗೌರವ ಸಂಪಾದಕತ್ವದ ಪ್ರಸ್ತುತ ವರ್ಷದ ಶಾಂತಿಕಿರಣ ದ್ವಿಮಾಸಿಕ ಪ್ರಥಮ ಸಂಚಿಕೆ ಬಿಡುಗಡೆ ಮಾಡಿದ ಶಿಕ್ಷಣ ಸಚಿವರು ಗಡಿ ಭಾಗದಲ್ಲಿ ಪಟ್ಟದ್ದೇವರು ಮಾಡುತ್ತಿರುವ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮಿಕ ಕ್ಷೇತ್ರಗಳಲ್ಲಿನ ಸೇವೆ ಮಾದರಿಯಾಗಿದೆ. ಅದರಲ್ಲಿಯೂ ಶೈಕ್ಷಣಿಕ ಕ್ಷೇತ್ರದಲ್ಲಿನ ಪಟ್ಟದ್ದೇವರ ಸೇವೆ ಅನುಪಮವಾಗಿದೆ.

ಏಮ್ಸ್‌ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆ ಸಂಸ್ಥೆಯ ವಿದ್ಯಾರ್ಥಿಗಳು ಮಾಡುತ್ತಿರುವ ಸಾಧನೆ ಅಲ್ಲಿನ ಗುಣಾತ್ಮಕ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿ. ಜತೆಗೆ ಶಾಂತಿಕಿರಣ ಮಾಸ ಪತ್ರಿಕೆ ಮೂಲಕ ಗಡಿಯಲ್ಲಿನ ಸಾಹಿತ್ಯಿಕ ಶ್ರೀಮಂತಿಕೆ, ಇತಿಹಾಸ, ಪರಂಪರೆ ಪರಿಚಯಿಸುವುದರ ಜತೆಗೆ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಖುಷಿ ತಂದು ಕೊಟ್ಟಿದೆ ಎಂದು ತಿಳಿಸಿರುವುದಾಗಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದ್ದಾರೆ.

ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next