Advertisement

ಅವಳಿ ಸಹೋದರಿಯರ ಅನನ್ಯ ಸಾಧನೆ; ನೋವಲ್ಲೂ ಪರೀಕ್ಷೆ ಬರೆದು ಶಾಲೆಗೆ ಪ್ರಥಮ

06:34 PM Aug 11, 2021 | Nagendra Trasi |

ಸಿಂದಗಿ: ಸ್ಥಳೀಯ ಸಮರ್ಥ ವಿದ್ಯಾವಿಕಾಸ ವಿವಿಧೋದ್ದೇಶಗಳ ಸಂಸ್ಥೆಯ ಪ್ರೇರಣಾ ಪಬ್ಲಿಕ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅವಳಿ ಸಹೋದರಿಯರಾದ ನಿವೇದಿತಾ ದೇಶಪಾಂಡೆ, ನಿಖಿತಾ ದೇಶಪಾಂಡೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 614 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ.

Advertisement

ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದ, ಸ್ಥಳೀಯ ನ್ಯಾಯಾಲಯದಲ್ಲಿ ಜವಾನ ಕೆಲಸ ಮಾಡುವ ಶಿವಶರಣರೆಡ್ಡಿ ದೇಶಪಾಂಡೆ ಅವರ ಅವಳಿ ಮಕ್ಕಳು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆ ದಿನ ಜು. 22ರಂದು ಅವರ ಚಿಕ್ಕ ನಿರ್ಮಲರೆಡ್ಡಿ ದೇಶಪಾಂಡೆ ತೀರಿದ್ದರು. ಈ ದುಖಃದಲ್ಲಿಯೂ ಪರೀಕ್ಷೆಯನ್ನು ಎದುರಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಕೋವಿಡ್‌ ಸೋಂಕಿನ ಅರ್ಭಟದ ಮಧ್ಯದಲ್ಲಿಯೂ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಪರೀಕ್ಷೆ ದಿನ ಜು. 22ರಂದು ಚಿಕ್ಕ ನಿರ್ಮಲರೆಡ್ಡಿ ದೇಶಪಾಂಡೆ ತೀರಿಕೊಂಡ ದುಖಃದ ಸ್ಥಿತಿಯಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದ ಅವಳಿ ಸಹೋದರಿಯರು ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ.

ಸಾಂಕ್ರಾಮಿಕ ರೋಗ ಹಿನ್ನೆಲೆ ಭೌತಿಕ ತರಗತಿಗಳು ನಡೆದದ್ದು ತೀರಾ ಕಡಿಮೆ. ಶಾಲೆಯವರಿಂದ ಆನ್‌ಲೈನ್‌ ಮೂಲಕವೇ ಪಠ್ಯ ಬೋಧನೆ ಮಾಡಲಾಗಿತ್ತು. ಅವಳಿ ಸಹೋದರಿಯರು ಮನೆಯಲ್ಲಿದ್ದು ಅಧ್ಯಯನ ಮಾಡಿದ್ದಾರೆ. ಓದಿನ ಗೊಂದಲಗಳಿದ್ದಲ್ಲಿ ಶಿಕ್ಷಕರಿಂದ ಮಾರ್ಗದರ್ಶನ ಪಡೆದಿದ್ದಾರೆ. ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಪ್ರತಿಭಾನ್ವಿತರಾಗಿದ್ದರಿಂದ ಆರಂಭದಿಂದಲೇ ಸಂಸ್ಥೆ ಅಧ್ಯಕ್ಷ ಆರ್‌ .ಡಿ. ಕುಲಕರ್ಣಿ ಪ್ರೋತ್ಸಾಹ ನೀಡಿದ್ದಾರೆ.

ಪ್ರತಿನಿತ್ಯ 5ರಿಂದ 6 ಗಂಟೆ ಓದುತ್ತಿದ್ದೇವು. ಎಲ್ಲ ವಿಷಯಗಳಿಗೂ ಸಮಾನವಾದ ಮಹತ್ವ ನೀಡಿ ವೇಳಾಪಟ್ಟಿ ಮಾಡಿಕೊಂಡು ಅಭ್ಯಸಿಸಿದೇವು. ಲಾಕ್‌ಡೌನ್‌ ಸಮಯದಲ್ಲೂ ಶಿಕ್ಷಕರಿಂದ ಆನ್‌ ಲೈನ್‌ ಮೂಲಕ ಮಾರ್ಗದರ್ಶನ ಪಡೆಯುತ್ತಿದ್ದೇವು. ಶಾಲೆಯ ಮುಖ್ಯ ಗುರುಮಾತೆ ಸಾವಿತ್ರಿ ಅಸ್ಕಿ ಅವರ ಮಾರ್ಗದರ್ಶನದಲ್ಲಿ ವಿಷಯ ಶಿಕ್ಷಕರು ತಯಾರಿಸಿದ ಪ್ರಶ್ನೆ ಪತ್ರಿಕೆಯನ್ನು ಕಳುಹಿಸುತ್ತಿದ್ದರು. ಅವುಗಳನ್ನು ಬಿಡಿಸುತ್ತಿದ್ದೇವು ಎಂದು ನಿವೇದಿತಾ ದೇಶಪಾಂಡೆ, ನಿಖಿತಾ ದೇಶಪಾಂಡೆ ಉದಯವಾಣಿಗೆ ತಿಳಿಸಿದ್ದಾರೆ.

Advertisement

ಅವಳಿ ಸಹೋದರಿಯರ ಸಾಧನೆ ಹರ್ಷ ತಂದಿದೆ. ಲಾಕ್‌ಡೌನ್‌ ಸಮಯದಲ್ಲೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಉತ್ತಮ ಮಾರ್ಗದರ್ಶನ ಮಾಡಿದ್ದಾರೆ. ಶಿಕ್ಷಕರ ಶ್ರಮ, ವಿದ್ಯಾರ್ಥಿಗಳ ಪ್ರಯತ್ನದಿಂದ ಶಾಲೆ ಫಲಿತಾಂಶ ಶೇ. 100 ಆಗಿದ್ದು ಹೆಮ್ಮೆಯ ವಿಷಯವಾಗಿದೆ.
ಆರ್‌.ಡಿ. ಕುಲಕರ್ಣಿ
ಅಧ್ಯಕ್ಷರು,
ಸಮರ್ಥ ವಿದ್ಯಾವಿಕಾಸ
ವಿವಿಧೋದ್ದೇಶಗಳ ಸಂಸ್ಥೆ,
ಸಿಂದಗಿ

ಪಿಯುಸಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದು ಅಲ್ಲಿಯೂ ಉತ್ತಮ ಸಾಧನೆ ಮಾಡಬೇಕು. ಮುಂದೆ ವೈದ್ಯಕೀಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ವೈದ್ಯರಾಗಿ ಗ್ರಾಮೀಣ ಬಡ ಜನರಿಗೆ ಸೇವೆ ಸಲ್ಲಿಸಬೇಕು ಎಂಬುದು ನಮ್ಮ ಗುರಿಯಾಗಿದೆ.
ನಿವೇದಿತಾ ದೇಶಪಾಂಡೆ
ನಿಖಿತಾ ದೇಶಪಾಂಡೆ
ಸಾಧಕ ಅವಳಿ
ಸಹೋದರಿಯರು

ನನ್ನ ಮಕ್ಕಳ ಪರೀಕ್ಷೆ ನಡೆಯುವ ದಿನ ಜು. 22ರಂದು ನನ್ನ ತಮ್ಮ ತೀರಿಕೊಂಡ. ಆ ದುಃಖದಲ್ಲಿದ್ದೇವೆ. ಇಂಥ ದುಃಖದ ಸಂದರ್ಭದಲ್ಲಿಯೂ ಮಕ್ಕಳ ಸಾಧನೆ ಸಂತಸ ತಂದಿದೆ. ಪ್ರೇರಣಾ ಪಬ್ಲಿಕ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕರ ಮಾರ್ಗದರ್ಶನ ಮಕ್ಕಳ ಸಾಧನೆಗೆ ಪುಷ್ಟಿ ತಂದಿದೆ.
ಶಿವಶರಣರೆಡ್ಡಿ ದೇಶಪಾಂಡೆ
ವಿದ್ಯಾರ್ಥಿನಿಯರ ತಂದೆ

ಅವಳಿ ಸಹೋದರಿ ಯರಾದ ನಿವೇದಿತಾ ದೇಶಪಾಂಡೆ, ನಿಖಿತಾ ದೇಶಪಾಂಡೆ ಅವರು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅಂಕ ಪಡೆಯುವಲ್ಲಿ ಸಮಾನತೆ ಕಾಪಾಡಿಕೊಂಡಿದ್ದಾರೆ. ಇವರು ಪ್ರತಿ ತರಗತಿಯಲ್ಲೂ ಪ್ರಥಮ ಸ್ಥಾನ ಪಡೆಯುತ್ತಿದ್ದರು.
ಸಾವತ್ರಿ ಅಸ್ಕಿ
ಮುಖ್ಯೋಧ್ಯಾಪಕಿ, ಪ್ರೇರಣಾ
ಪಬ್ಲಿಕ್‌ ಆಂಗ್ಲ ಮಾಧ್ಯಮ
ಪ್ರೌಢ ಶಾಲೆ, ಸಿಂದಗಿ

ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next