Advertisement

ಪತ್ತೆಯಾಗದ ಚಿರತೆ: ಕಾರ್ಯಾಚರಣೆ ಸ್ಥಗಿತ

07:18 PM Jun 04, 2021 | Team Udayavani |

ಜಮಖಂಡಿ: ಕಳೆದ 9 ದಿನಗಳ ಹಿಂದೆ ಕುಂಬಾರಹಳ್ಳ ಗ್ರಾಮದ ತೋಟದ ಜಮೀನಿನಲ್ಲಿ ಪ್ರತ್ಯಕ್ಷಗೊಂಡಿದ್ದ ಚಿರತೆ ಕಾರ್ಯಾಚರಣೆ ಸ್ಥಗಿತಗೊಂಡಿದೆ.

Advertisement

ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ 9 ದಿನದಲ್ಲಿ ಆರಂಭದ ಎರಡು ದಿನ ಮಾತ್ರ ಸಿಸಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡು ಬೋನಿಗೆ ಬೀಳದ ಚಿರತೆ ಚಲನವಲನ ಕಳೆದ 7 ದಿನಗಳಿಂದ ಸಿಸಿ ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿಲ್ಲ.

ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ ಕಬ್ಬಿನ ಗದ್ದೆಯನ್ನು ಕಟಾವು ಮಾಡಿದರೂ ಚಿರತೆ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಗುರುವಾರ ಬೆಳಗ್ಗೆ ಚಿರತೆ ಕಾಣಿಸಿಕೊಂಡಿದ್ದ ಕಬ್ಬಿನ ಗದ್ದೆಗೆ ನಗರದ ಚೌಡಯ್ಯನಗರದ ಹಂದಿ ಹಿಡಿಯುವ ಬೇಟೆಗಾರರ ಬಲೆಗಳಿಂದ ಗದ್ದೆಗೆ ಸುತ್ತಮುತ್ತ ಬಲೆ ಹಾಕಿ ಒಂದು ಪ್ರಮುಖ ದ್ವಾರದಲ್ಲಿ ಅರಣ್ಯ ರಕ್ಷಕರ ತಂಡ ಶಸ್ತ್ರದೊಂದಿಗೆ ಚಿರತೆ ಬಂಧನ ಕಾರ್ಯಾಚರಣೆ ನಡೆಸಿತು. ಆದರೂ ಕೂಡ ಚಿರತೆ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಲಿಲ್ಲ. ಗ್ರಾಮಸ್ಥರ ಒತ್ತಾಯ ಮತ್ತು ಹಿರಿಯ ಅರಣ್ಯ ಅ ಧಿಕಾರಿಗಳ ನಿರ್ದೇಶನದಂತೆ ಅರಣ್ಯ ಇಲಾಖೆ ವಿಶೇಷ ರಕ್ಷಕರು ಸಹಿತ ಅಂದಾಜು 50 ಜನರ ತಂಡದೊಂದಿಗೆ ಅಂದಾಜು 4ರಿಂದ 5 ಕಿ.ಮೀ.ವರೆಗೆ ಕೋಬಿಂಗ್‌ ನಡೆಸಲಾಗಿದೆ. ಅಲ್ಲಿಯೂ ಚಿರತೆಯು ಕಾಣಿಸಿಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next