Advertisement

ದಿ|ಯು. ಶ್ರೀನಿವಾಸ್‌ ಮಲ್ಯರ ಅಂಚೆಚೀಟಿ, ಡಿವಿಡಿ ಬಿಡುಗಡೆ

12:43 PM Dec 21, 2017 | |

ಕದ್ರಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಾತೃ ಎಂದೇ ಖ್ಯಾತರಾದ ಮಾಜಿ ಸಂಸದ ದಿ| ಉಳ್ಳಾಲ ಶ್ರೀನಿವಾಸ್‌ ಮಲ್ಯರ 52ನೇ ಪುಣ್ಯತಿಥಿಯಂದು ಅವರ ಸಮಗ್ರ ಬದುಕಿನ ವಿವರಗಳು ಹಾಗೂ ಅಪೂರ್ವ ಛಾಯಾಚಿತ್ರವಿರುವ ಡಿವಿಡಿ ಹಾಗೂ ಅಂಚೆ ಇಲಾಖೆ ಸಹಯೋಗದಲ್ಲಿ ಹೊರತಂದ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು. ಮಲ್ಯರನ್ನು ಹತ್ತಿರದಿಂದ ಬಲ್ಲ 92ರ ಹರೆಯದ ನಿವೃತ್ತ ಸರಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ‌ ವಿ. ವೆಂಕಟ ರಮಣಯ್ಯ ಹಾಗೂ ಬಿ. ಲಲಿತಾ ಬಾಯಿ ಅವರು ಕದ್ರಿಯಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಡಿವಿಡಿ ಮತ್ತು ಅಂಚೆ ಚೀಟಿ ಮೈ ಸ್ಟ್ಯಾಂಪ್‌ ಅನ್ನು ಬಿಡುಗಡೆಗೊಳಿಸಿದರು.

Advertisement

ಮಲ್ಯರು ಜಿಲ್ಲೆಗೆ ನೀಡಿರುವ ಸುಮಾರು 12 ಸಾಧನೆಗಳ ಬಗ್ಗೆ ಹಾಗೂ ಕಾರ್ಯ ಸಾಧನೆಗಳ ಅಪರೂಪದ ದೃಶ್ಯಾವಳಿಗಳಿರುವ 30 ನಿಮಿಷಗಳ ಸಾಕ್ಷ್ಯಚಿತ್ರದೊಂದಿಗೆ ವಿವರಣೆ ಸಹಿತವಾಗಿ ಡಿವಿಡಿಯನ್ನು ಸಿದ್ಧಪಡಿಸಲಾಗಿದೆ. ಕಸ್ತೂರಿ ಬಾಲಕೃಷ್ಣ ಪೈ ಅವರ ಸಂಗ್ರಹದಲ್ಲಿದ್ದ ವಿರಳ ಛಾಯಾಚಿತ್ರಗಳನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ.

ಶ್ರೀನಿವಾಸ್‌ ಮಲ್ಯರವರ ಸಹೋದರನ ಪುತ್ರನಾದ ನರಹರಿ ಮಲ್ಯ, ಕಸ್ತೂರಿ ಬಾಲಕೃಷ್ಣ ಪೈ ದಂಪತಿ, ಮಂಗಳೂರು ಆಕಾಶವಾಣಿ ನಿಲಯ ನಿರ್ದೇಶಕಿ ಎಸ್‌. ಉಷಾಲತಾ ಹಾಗೂ ಬಿಎಸ್‌ಎನ್‌ಎಲ್‌ನ ಹಿರಿಯ ಉಪ ಮಂಡಲ ಅಭಿಯಂತರ ಆನೆಕಲ್ಲು ಗೋಪಾಲಕೃಷ್ಣ ಪ್ರಭು ಹಾಗೂ ಛಾಯಾಗ್ರಾಹಕ ಕೃಷ್ಣ ನಾಯಕ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next