Advertisement

ಜಿಲ್ಲೆಯ ಜನರ ಗಮನ ಸೆಳೆದ ಎರಡು ದಿನಗಳ ಒಲಿಂಪಿಕ್ಸ್‌ ದಿನಾಚರಣೆ

12:00 AM Jun 25, 2019 | Sriram |

ಕಾಸರಗೋಡು: ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ನಡೆದ ಒಲಿಂಪಿಕ್ಸ್‌ ದಿನಾಚರಣೆ ಜನರ ಗಮನ ಸೆಳೆಯಿತು. ಮಾನವ ಸೌಹಾರ್ದಕ್ಕೆ ಪ್ರಾಧಾನ್ಯ ಒದಗಿಸಿ ಕ್ರೀಡೆಗೆ ಮಹತ್ವ ನೀಡಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿತ್ತು.

Advertisement

ತ್ರಿಕರಿಪುರದಲ್ಲಿ ಕ್ರೀಡಾ ಜ್ಯೋತಿ ಪರ್ಯಟನೆ ಆರಂಭಗೊಂಡಿತ್ತು. ಶಾಸಕ ಎಂ. ರಾಜಗೋಪಾಲ್ ಉದ್ಘಾಟಿಸಿದರು. ಭಾರತೀಯ ಫುಟ್ಬಾಲ್ ತಂಡದ ಮಾಜಿ ಸದಸ್ಯ ಎಂ. ಸುರೇಶ್‌ ಕ್ರೀಡಾಜ್ಯೋತಿ ಪಡೆದುಕೊಂಡರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್‌ ರೆಹಮಾನ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಮುಖ್ಯ ಅತಿಥಿಯಾಗಿದ್ದರು. ಕ್ರೀಡಾ ಮಂಡಳಿ ರಾಜ್ಯ ಸಮಿತಿ ಸದಸ್ಯ ಟಿ.ವಿ.ಬಾಲನ್‌, ಜಿಲ್ಲಾ ಕ್ರೀಡಾ ಮಂಡಳಿ ಉಪಾಧ್ಯಕ್ಷ ಪಿ.ಪಿ.ಅಶೋಕನ್‌, ಪದಾಧಿಕಾರಿಗಳಾದ ವಿಜಯಮೋಹನ್‌, ಪಳ್ಳಂ ನಾರಾಯಣನ್‌, ಅನಿಲ್ ಬಂಗಳಂ, ಟಿ.ವಿ.ಕೃಷ್ಣನ್‌, ಸುಲ್ಫೆಕ್ಸ್‌ ಸಂಸ್ಥೆಯ ಪ್ರತಿನಿಧಿ ಮಹಮ್ಮದ್‌ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.

ಕ್ರೀಡಾ ಜ್ಯೋತಿ ಪರ್ಯಟನೆಗೆ ನಡಕ್ಕಾವ್‌, ಕಾಲಿಕಡವು, ಚೆರುವತ್ತೂರು, ನೀಲೇಶ್ವರ, ಕಾಂಞಂಗಾಡ್‌, ಪಾಲಕುನ್ನು, ಮೇಲ್ಪರಂಬ, ಕಾಸರ ಗೋಡು ಪ್ರದೇಶಗಳಲ್ಲಿ ಕ್ರೀಡಾ ಜ್ಯೋತಿಗೆ ಸ್ವಾಗತ ನೀಡಲಾಯಿತು. ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿ ಕಾರಿಗಳು, ಸಾರ್ವಜನಿಕರು ನೇತೃತ್ವ ವಹಿಸಿದ್ದರು.

ಸಮಾರೋಪ ಸಮಾರಂಭ ಕಾಸರ ಗೋಡು ನಗರದ ನೂತನ ಬಸ್‌ ನಿಲ್ದಾಣ ಬಳಿ ಜರಗಿತು. ಶಾಸಕ ಎನ್‌.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಜನತೆಯನ್ನು ಒಂದಾಗಿಸಲು ಕ್ರೀಡೆಯೂ ಒಂದು ಮಾಧ್ಯಮ. ಜಾತಿ-ಮತ ಭೇದಗಳಿಲ್ಲದೆ ಜನ ಒಂದಾಗಿ ಬೆರೆಯಲು ಇದು ಸಹಕಾರಿ. ಕಾಸರಗೋಡಿನಂಥ ವಲಯದಲ್ಲಿ ಇದರ ಮಹತ್ವ ಅಧಿಕವಾಗಿದೆ ಎಂದವರು ತಿಳಿಸಿದರು.

ಹಗ್ಗಜಗ್ಗಾಟದ ರಾಷ್ಟ್ರೀಯ ಪಟು ಸಾಯಿಪ್ರಕಾಶ್‌ ಪ್ರತಿಜ್ಞೆ ನಡೆಸಿಕೊಟ್ಟರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್‌ ರಹಮಾನ್‌ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧಾ ವಿಜೇತರಿಗೆ ಎಂ. ಸುರೇಶ್‌ ಬಹುಮಾನ ವಿತರಿಸಿದರು. ಉಪಾಧ್ಯಕ್ಷ ಪಿ.ಪಿ.ಅಶೋಕನ್‌ ಮಾಸ್ಟರ್‌, ಅನಿಲ್ ಬಂಗರ, ಪ್ರೊ| ರಘುನಾಥ್‌, ಕಾರ್ಯದರ್ಶಿ ಕೆ.ವಿ. ರಾಘವನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next