Advertisement
– ಹೀಗೆ ಹೇಳಿ ಹಾಗೊಂದು ಸಮಾಧಾನದ ನಿಟ್ಟುಸಿರು ಬಿಟ್ಟರು “ರಾಮಾ ರಾಮ ರೇ’ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್.“ರಾಮಾ ರಾಮ ರೇ’ ಬಳಿಕ ಸತ್ಯಪ್ರಕಾಶ್ ಕಮರ್ಷಿಯಲ್ ಚಿತ್ರವನ್ನು ಮಾಡಬಹುದು ಎಂಬ ನಿರೀಕ್ಷೆ ಹಲವರಲ್ಲಿತ್ತು. ಆದರೆ, ಸತ್ಯಪ್ರಕಾಶ್ ಮಾತ್ರ ಹಾಗೆ ಮಾಡಲಿಲ್ಲ. ಕಾರಣ, ಅವರಿಗೆ “ರಾಮಾ ರಾಮ ರೇ’ ಚಿತ್ರವನ್ನು ಬ್ರೇಕ್ ಮಾಡಬೇಕೆಂಬ ಹಪಾಹಪಿ. ಆ ಕಾರಣಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ಕಂಟೆಂಟ್ ಇರುವ ಚಿತ್ರ. ಅದಕ್ಕೆಂದೇ ಎರಡು ವರ್ಷಗಳ ಕಾಲ ಕಥೆ ಬರೆಯೋಕೆ ಕುಳಿತರು. ಹಾಗೆ ಹುಟ್ಟಿಕೊಂಡಿದ್ದೇ, “ಒಂದಲ್ಲಾ ಎರಡಲ್ಲಾ’.
Related Articles
“ಇದೊಂದು ಮುಗ್ಧತೆ ವಿಷಯ ಇಟ್ಟುಕೊಂಡು ಮಾಡಿರುವ ಕಥೆ. ಮನುಷ್ಯ ತನ್ನೊಳಗೆ ಮುಗ್ಧತೆ ಇಟ್ಟುಕೊಂಡೇ ಬೆಳೆಯುತ್ತಾನೆ. ಹಂತ ಹಂತವಾಗಿ ಬೆಳೆಯುತ್ತಲೇ ಆ ಮುಗ್ಧತೆ ಮರೆತು ಓಡಾಡುತ್ತಾನೆ. ಆ ಅಂಶಕ್ಕೆ ಒಂದಷ್ಟು ವಿಷಯಗಳನ್ನು ಹೆಕ್ಕಿ ಪೋಣಿಸುತ್ತಾ ಹೋದೆ. ಕಥೆಗೊಂದು ಚೌಕಟ್ಟು ಸಿಕು¤. ಮೊದಲೇ ಹೇಳಿದಂತೆ ಇದು ಶಾಲೆ ಕುರಿತ ಚಿತ್ರವಲ್ಲ, ಮಕ್ಕಳ ಸಿನಿಮಾನೂ ಅಲ್ಲ. ಇಲ್ಲೊಬ್ಬ ಹುಡುಗನಿದ್ದಾನೆ. ಅವನ ಸುತ್ತವೇ ಕಥೆ ಸುತ್ತುತ್ತದೆ. ಮುಗ್ಧತೆಯ ರೂಪ ಅವನು. ಆ ಹುಡುಗನನ್ನು ಹೊರತುಪಡಿಸಿದರೆ, ಮಿಕ್ಕವರೆಲ್ಲಾ ಹಿರಿಯ ಕಲಾವಿದರೇ ಇರಲಿದ್ದಾರೆ. ಒಬ್ಬ ಮುಗ್ಧ ಹುಡುಗ ಪೇಟೆ ಎಂಬ ಊರಿಗೆ ಹೋದಾಗ, ಅವನ ಎದುರು ಸಿಗುವ ಜನ ಇವನಿಂದ ಹೇಗೆ ಬದಲಾಗುತ್ತಾರೆ. ಅವನಿಗೆ ಆ ಜನರಿಂದ ಏನೆಲ್ಲಾ ಆಗುತ್ತೆ ಅನ್ನೋದು ಕಥೆ. ಇದೊಂದು ಸೋಷಿಯಲ್ ಡ್ರಾಮ. ಸ್ವಲ್ಪ ಹ್ಯೂಮರ್ ಮಿಕ್ಸ್ ಇದೆ. ನನ್ನಿಷ್ಟದ ಕಥೆ ಆಗಿರುವುದರಿಂದ ಎಲ್ಲಾ ಮಕ್ಕಳೂ ಈ ಚಿತ್ರ ನೋಡಬೇಕೆಂಬ ಆಸೆ ಇದೆ. ಪ್ರತಿಯೊಬ್ಬರಿಗೂ ಒಂದು ವಸ್ತು ಬೇಕಾಗಿರುತ್ತೆ. ಅದನ್ನ ಜೀವನ ಪರ್ಯಂತ ಹುಡುಕ್ತಾನೇ ಇರಿ¤àವಿ. ಅದನ್ನೇ ಆ ಮುಗ್ಧ ಹುಡುಗ ಹುಡುಕಲು ಹೋದಾಗ, ನೇಚರ್ ಮತ್ತು ಸಮಾಜ ಅವನಿಗೆ ಸಹಕರಿಸುತ್ತೆ. ಅದೇ ಬಲವಾದ ಕಾನ್ಸೆಪ್ಟ್. ಇಡೀ ಚಿತ್ರ ನೋಡಿದವರಿಗೆ ತನ್ನೊಳಗಿರುವ ಮುಗ್ಧತೆ ಆಚೆ ಬರುತ್ತೆ’ ಎನ್ನುತ್ತಾರೆ ಸತ್ಯಪ್ರಕಾಶ್.
Advertisement
ಸವಾಲು ಹೆಚ್ಚು: ಇಂತಹ ಸಿನಿಮಾ ಮಾಡುವಾಗ ಸಾಕಷ್ಟು ಸವಾಲುಗಳು ಎದುರಾಗುವುದು ಸಹಜ. ಅಂತಹ ಸವಾಲುಗಳನ್ನು ಎದುರಿಸಿರುವ ಸತ್ಯ, “ಮೊದಲನೆ ಚಾಲೆಂಜ್ ಅಂದರೆ ಕಥೆ. ಇಲ್ಲಿ ರೆಗ್ಯುಲರ್ ಫಾರ್ಮೆಟ್ ಇಲ್ಲ. ದ್ವೇಷ, ಪ್ರೀತಿ, ಪುನರ್ಜನ್ಮ, ಆ್ಯಕ್ಷನ್, ಸೆಂಟಿಮೆಂಟ್ ಇತ್ಯಾದಿ ಏನೂ ಇರಲ್ಲ. ಗಟ್ಟಿ ಕಥೆ ಕಟ್ಟೋದೇ ದೊಡ್ಡ ಚಾಲೆಂಜ್.
ನಾವು ಹೊಸದಾಗಿ ಕಥೆ ಹೆಣೆಯುವಾಗ ಅದು ವಕೌìಟ್ ಆಗುತ್ತೋ, ಇಲ್ಲವೋ ಅದೂ ಗೊತ್ತಿರಲ್ಲ. ಈ ರೀತಿಯ ಕಥೆಗಳಿಗೆ ಬರವಣಿಗೆ ಚಾಲೆಂಜ್ ಆಗಿರುತ್ತೆ. ಅದರಲ್ಲೂ ಅದನ್ನು ಜನರಿಗೆ ಕನ್ವಿನ್ಸ್ ಮಾಡೋದು ಇನ್ನೂ ದೊಡ್ಡ ಚಾಲೆಂಜ್. ಇಂಥದ್ದೇ ಸೀನ್‌ಗಳಿಗೆ ಜನ ನಗ್ತಾರೆ, ನಗಲ್ಲ ಎಂಬುದೂ ಗೊತ್ತಾಗಲ್ಲ. ಅದು ವರ್ಕ್ ಆಗಬಹುದಷ್ಟೇ ಅಂದುಕೊಂಡು ಕಥೆ ನಂಬಿ ಕೆಲಸ ಮಾಡಬೇಕು. ನಮಗೆ ಆ ಕಥೆ ಇಟ್ಟುಕೊಂಡು, ಪಾತ್ರ ಕಟ್ಟಿಕೊಂಡು ಚಿತ್ರೀಕರಿಸಿ ನೋಡೋವರೆಗೆ ನಮಗೂ ಅದರ ಜಡ್ಜ್ಮೆಂಟ್ ಸಿಗೋದಿಲ್ಲ. “ರಾಮಾ ರಾಮ ರೇ’ ಮಾಡುವಾಗಲೂ ಇಂಥದ್ದೇ ಸವಾಲಿತ್ತು. ಹಾಗಾಗಿ ಈ ರೀತಿಯ ಸಬೆjಕ್ಟ್ ಗಳು ತುಂಬಾ ಕಷ್ಟ. ಅದು ವರ್ಕೌಟ್ ಆದಾಗಲಷ್ಟೇ ಗೊತ್ತಾಗೋದು’ ಎನ್ನುತ್ತಾರೆ ಸತ್ಯಪ್ರಕಾಶ್.
ಇದು ತಮ್ಮ ಮೊದಲ ಚಿತ್ರಕ್ಕಿಂತ ವಿಭಿನ್ನವಾಗಿದೆ ಎನ್ನುವ ಸತ್ಯ, “ಸಾಮಾನ್ಯವಾಗಿ ಅದೇ ರೀತಿಯ ಚಿತ್ರ ಮಾಡಿದರೆ “ಬ್ರಾಂಡ್’ ನಿರ್ದೇಶಕನೆಂಬ ಹೆಸರಾಗುತ್ತೆ. ಇದು “ರಾಮಾ ರಾಮ ರೇ’ ಜಾತಿಗೆ ಸೇರಿಲ್ಲ. “ಒಂದಲ್ಲಾ ಎರಡಲ್ಲಾ’ ಚಿತ್ರ ನೋಡಿದವರಿಗೆ ಆ ಚಿತ್ರ ಮಾಡಿದ್ದ ನಿರ್ದೇಶಕರ ಸಿನಿಮಾನಾ ಇದು ಅನಿಸುವಷ್ಟರ ಮಟ್ಟಿಗೆ ವಿಭಿನ್ನವಾಗಿದೆ ಎಂಬ ಗ್ಯಾರಂಟಿ ಕೊಡ್ತೀನಿ. ನನಗೆ ಕಂಟೆಂಟ್ ಇಷ್ಟ. ಹೊಸ ಪ್ರಯೋಗ ಇಷ್ಟ. ದೊಡ್ಡ ವಿಷಯವನ್ನು ತುಂಬಾ ಸರಳವಾಗಿ ಹೇಳಲು ಬಯಸುತ್ತೇನೆ. ಪ್ರತಿಯೊಬ್ಬ ನೋಡುಗನಿಗೂ ಅರ್ಥ ಆಗಬೇಕು. ಅವನು ಹಳ್ಳಿಯವನಿರಲಿ, ಅನಕ್ಷರಸ್ಥನಿರಲಿ, ಸಿನಿಮಾದ ಆಸಕ್ತಿ ಇಲ್ಲದ ವ್ಯಕ್ತಿಯೇ ಇರಲಿ, ಚಿತ್ರ ನೋಡಿದಾಗ ನಗ್ತಾ ನಗ್ತಾ ನೊಡಬೇಕು, ಹೇಳಿದ್ದು ಆರ್ಥ ಆಗಬೇಕು. ಅದು ಅವರಿಗೆ ಕನೆಕ್ಟ್ ಆಗಬೇಕು. ಅಂಥದ್ದೊಂದು ಕಥೆ ಇಲ್ಲಿದೆ. “ರಾಮಾ ರಾಮ ರೇ’ ಚಿತ್ರವನ್ನು ಯಾವುದೇ ಕಾರಣಕ್ಕೂ ಜನ ನೆನಪಿಸಬಾರದು ಎಂಬ ಉದ್ದೇಶದಿಂದ ಈ ಚಿತ್ರ ಮಾಡಿದ್ದೇನೆ’ ಎಂದು ಹೇಳುವ ಸತ್ಯಪ್ರಕಾಶ್, “ಒಂದು ಸಮಸ್ಯೆ ಏನೆಂದರೆ, ಹೊಸ ಆರ್ಟಿಸ್ಟ್ ಇಟ್ಟುಕೊಂಡರೆ “ಬ್ರಾಂಡ್ ಫೀಲ್’ ಆಗಬಹುದೇನೋ. ನನಗೆ ಬ್ರಾಂಡ್ ಆಗ್ತಿàನಿ ಎಂಬ ಭಯವಿಲ್ಲ. ಕಂಟೆಂಟ್ ಸಿನಿಮಾ ಮೂಲಕ ಹೊಸದೇನನ್ನೋ ಕೊಡಬೇಕೆಂಬ ಛಲವಿದೆ. ಖುಷಿ ಅಂದರೆ, ಕಮರ್ಷಿಯಲ್ ಸಿನಿಮಾ ಮಾಡಿದ್ದ ಉಮಾಪತಿ ಅಂತಹ ನಿರ್ಮಾಪಕರು ಇಂತಹ ಸಬೆjಕ್ಟ್ ಒಪ್ಪಿ, ಸಹಕರಿಸಿದ್ದು ವಿಶೇಷ’ ಎನ್ನುತ್ತಾರೆ ಸತ್ಯ.
“ಇಂತಹ ಚಿತ್ರಗಳಿಗೆ ಕಥೆ ಬರೆಯುವಾಗ ಯಾವ ಹೀರೋಗಳು ತಲೆಯಲ್ಲಿರಲ್ಲ. ನಾನು ನಿತ್ಯ ನೋಡೋ ಪಾತ್ರ, ಲೈಫಲ್ಲಿ ಬಂದ ಪಾತ್ರಗಳೇ ಇಲ್ಲಿವೆ. ಅವನು ಹಂಗಾ, ಇವನು ಹಿಂಗಾ ಎಂಬ ಪಾತ್ರಗಳನ್ನೇ ಹುಡುಕ್ತೀನಿ. ಒಂದು ಭಯವೆಂದರೆ, ಸೀರಿಯಸ್ ನಟರನ್ನು ಕರೆತಂದು ಕಾಮಿಡಿ ಮಾಡಿದರೆ ಸರಿ ಇರುತ್ತಾ? ಅಷ್ಟಕ್ಕೂ ಇಂತಹ ಕಥೆಗಳನ್ನು ಒಪ್ಪಲು ಅವರು ರೆಡಿ ಇರಲ್ಲ. ತಮ್ಮ ಇಮೇಜ್ ಬಿಟ್ಟು ಬರಲ್ಲ. ಹಾಗೊಮ್ಮೆ ಬಂದರೂ ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯ. ಅದು ನಮ್ಮಂತಹ ನಿರ್ದೇಶಕರಿಗೂ ಇರುತ್ತೆ. ಅದೇ ಹೊಸ ಪಾತ್ರಧಾರಿಗಳಾದರೆ, ನಮಗೆ ಬೇಕಾದಂತೆ ನಗಿಸಿ, ಅಳಿಸಬಹುದು. ಏನೇ ಮಾಡಿದರೂ ಹೊಸದೆನಿಸುತ್ತೆ. ಜನರೂ ಒಪ್ತಾರೆ. ಈ ರೀತಿಯ ಚಿತ್ರಗಳು ಎಲ್ಲರಿಗೂ ತಲುಪಬೇಕು. ಕಂಟೆಂಟ್ ಬೇಸ್ಡ್ ಸಿನಿಮಾಗಳಿಗೆ ಹೆಚ್ಚು ಬಜೆಟ್ ಬೇಕಿಲ್ಲ. ಆದರೆ, ಒಂದು ಕಮರ್ಷಿಯಲ್ ಸಿನಿಮಾಗೆ ಹಾಕಿಸಿದಷ್ಟೇ ಶ್ರಮ ಹಾಕಬೇಕು. ಚಿತ್ರೀಕರಣ ಅಬ್ಬರವಿರಲ್ಲ, ರೆಗ್ಯುಲರ್ ಫಾರ್ಮೆಟ್ ಹೊರತಾಗಿರುತ್ತೆ, ದೊಡ್ಡ ಆರ್ಟಿಸ್ಟ್ ಇರಲ್ಲ, ಎಲ್ಲೆಂದರಲ್ಲಿ ಶೂಟಿಂಗ್ ವೇಳೆ ಜನ ಮುತ್ತಿಕೊಳ್ಳಲ್ಲ, ಕ್ಯಾರವಾನ್ ಬೇಕಿಲ್ಲ, ಫೈಟು, ಸಾಂಗು ಇತ್ಯಾದಿ ಇರಲ್ಲ. ಒಂದೇ ಒಂದು ದೊಡ್ಡ ಶ್ರಮ ಅಂದರೆ, ಬರವಣಿಗೆ ಮೂಲಕವೇ ಕನ್ವಿನ್ಸ್ ಮಾಡಬೇಕಷ್ಟೇ. ಅದೊಂದೇ ಇಂತಹ ಚಿತ್ರಗಳಿಗಿರುವ ಚಾಲೆಂಜ್. “ಒಂದಲ್ಲಾ ಎರಡಲ್ಲಾ’ ಎಂಬ ಚಿತ್ರದ ಆಶಯ ಟೈಟಲ್ ಕಾರ್ಡ್ ಸಾಂಗ್‌ನಲ್ಲಿದೆ. “ಒಗ್ಗಟ್ಟಿನಲ್ಲಿ ಬಲವೆಂದರು, ಬಲದಲ್ಲೇ ಇರುವನು ಆ ದೇವರು’ ಎಂಬ ಹಾಡು ಇಡೀ ಚಿತ್ರದ ತಾತ್ಪರ್ಯವನ್ನು ಹೇಳುತ್ತೆ’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಸತ್ಯಪ್ರಕಾಶ್.
ವಿಜಯ್ ಭರಮ ಸಾಗರ