ಬಳಗಾನೂರು: ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕ್ಷೇತ್ರಾದ್ಯಂತ ಗೂಂಡಾಗಿರಿಯಲ್ಲಿ ತೊಡಗಿದ್ದಾರೆ. ಅಧಿಕಾರಿಗಳು ಹಾಗೂ ಜನಸಾಮಾನ್ಯರ ಮೇಲೆ ದೌರ್ಜನ್ಯ ಮಾಡಿ ವಾಮಮಾರ್ಗದಿಂದ ಚುನಾವಣೆ ಗೆಲ್ಲುವ ಕುತಂತ್ರ ನಡೆಸಿದ್ದಾರೆ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಆರೋಪಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು, ಕಾಂಗ್ರೆಸ್ ಜನಪರ ಕಾರ್ಯ, ತತ್ವ-ಸಿದ್ಧಾಂತ ಒಪ್ಪಿಕೊಳ್ಳುವ ಮೂಲಕ ಪಟ್ಟಣದಲ್ಲಿ ವಿವಿಧ ಪಕ್ಷ ತೊರೆದ ಮುಖಂಡರು, ಯುವಕರು ಪಕ್ಷ ಸೇರ್ಪಡೆಯಾಗಿ ಕಾಂಗ್ರೆಸ್ ಬಲಪಡಿಸಿದ್ದಾರೆ. ಮಸ್ಕಿ ಪುರಸಭೆ, ತುರ್ವಿಹಾಳ ಪಪಂ, ಬಳಗಾನೂರು ಪಪಂ ಚುನಾವಣೆಯಲ್ಲಿ ಭರ್ಜರಿ ಜಯಗಳಿಸುವ ಮೂಲಕ ಸ್ಥಳೀಯ ಸಂಸ್ಥೆಗಳ ಅಧಿಕಾರ ಕಾಂಗ್ರೆಸ್ ವಹಿಸಿಕೊಳ್ಳಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಮುಖಂಡರಾದ ನಿರುಪಾದೆಪ್ಪ, ಯೂತ್ ಅಧ್ಯಕ್ಷ ಹನುಮೇಶ ಬಾಗೋಡಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಹುಲುಗಪ್ಪ, ತಾಪಂ ಮಾಜಿ ಸದಸ್ಯ ಬಸನಗೌಡ ಮುದೇಗೌಡರು, ಸಂಜಯಕುಮಾರ ಜೈನ್ ಮಾತನಾಡಿದರು.
ಡಿಎಸ್‌ಎಸ್‌ಕೆ ರಾಜ್ಯ ಉಪಾಧ್ಯಕ್ಷ ಭೀಮರಾಯ, ಜಿಲ್ಲಾ ಉಪಾಧ್ಯಕ್ಷ ಬಿ. ಮೌನೇಶ, ಪಪಂ ಮಾಜಿ ಅಧ್ಯಕ್ಷ ಹನುಮಂತಪ್ಪ, ಕರಿಯಪ್ಪ, ದುರುಗಪ್ಪ ಜಾನೇಕಲ್, ಕರೆಕಲ್ಲಪ್ಪ ಭಜಂತ್ರಿ, ಹುಲುಗಪ್ಪ, ತಿಮ್ಮಣ್ಣ, ಮಾನಪ್ಪ, ಹನುಮಂತ, ಮೌನೇಶ, ನಿಂಗಪ್ಪ, ರಾಜಾಸಾಬ್, ಭೀಮಪ್ಪ ಲಡ್ಡೀನ್, ಎಸ್‌ಎಸ್ ಕ್ಯಾಂಪ್ ವಿ. ಸತ್ಯನಾರಾಯಣ, ಪಿ. ಶ್ರೀನಿವಾಸ, ಬಿ. ಸುಬ್ಬರಾವ್, ಕೆ.ಶ್ರೀನಿವಾಸ, ರಾಮಮೂರ್ತಿ, ಎಸ್. ರಂಗರಾವ್ ಸೇರಿದಂತೆ 50ಕ್ಕೂ ಹೆಚ್ಚು ಯುವಕರು ವಿವಿಧ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಈ ವೇಳೆ ಕಿಸಾನ್ ಘಟಕದ ಅಧ್ಯಕ್ಷ ಮೆಹಬೂಬ್‌ಸಾಬ್, ಮುಖಂಡರಾದ ಬಸವರಾಜಪ್ಪಗೌಡ ಗುಂಜಳ್ಳಿ, ಮಲ್ಲನಗೌಡ ಸುಂಕನೂರು, ಅಮರಪ್ಪ ಲಕೋಜಿ, ಶರಣೇಗೌಡ ಶಂಕರಬಂಡಿ, ಸಿದ್ದನಗೌಡ ಮಾಲಿಪಾಟೀಲ್, ವೀರನಗೌಡ ಗದ್ದಿಗೌಡ್ರು, ಶಿವಪುತ್ರ ವಿಶ್ವಕರ್ಮ ಶೇಖರಗೌಡ ಮಾಲಿಪಾಟೀಲ್, ಶಿವರೆಡ್ಡೆಪ್ಪ ವಾಲೇಕಾರ, ಮರಿಯಪ್ಪ ಮೂಲಿಮನಿ ಸೇರಿದಂತೆ ಇತರರಿದ್ದರು.