Advertisement

ಬಲೆಗೆ ಬಿದ್ದ ಹುಚ್ಚು ಮಂಗ

01:11 PM Feb 02, 2018 | Team Udayavani |

ಬಸವಕಲ್ಯಾಣ: ಬೇಟಬಾಲಕುಂದಾ ಗ್ರಾಮದಲ್ಲಿ ಎರಡು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಹುಚ್ಚು ಮಂಗ ಹಿಡಿಯುವಲ್ಲಿ
ಆರಣ್ಯ ಇಲಾಖೆ ಯಶಸ್ವಿಯಾಗಿದೆ. ಗ್ರಾಮದ ಸುಮಾರು 20ಕ್ಕೂ ಹೆಚ್ಚು ಜನರಿಗೆ ಕಚ್ಚಿ, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಮಂಗವನ್ನು ಹಿಡಿದು, ನಗರದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಲಬುರಗಿ ಪ್ರಾಣಿ ಸಂಗ್ರಹಾಲಯಕ್ಕೆ ಸಾಗಿಸಲಾಗಿದೆ.

Advertisement

ಆರ್‌ಎಫ್‌ಒ ಅಲಿಯೋದ್ದಿನ್‌ ಅವರ ನೇತೃತ್ವದಲ್ಲಿ ಇಲಾಖೆಯ ಇಲಾಖೆಯ ಪರಿಣಿತ ಸಿಬ್ಬಂದಿ, ಬೀದರ್‌ ನಿಂದ ಆಗಮಿಸಿರುವ 10 ಜನರ ತಂಡ ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಚರಣೆ ನಡೆಸಿ ಮಂಗ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಗ್ರಾಮದ ಮರ ಮೇಲಿದ್ದ ಮಂಗವನ್ನು ಮರದ ಬಳಿಯ ಛಾವಣಿಗಳ ಮೇಲಿಂದ ಅಳವಡಿಸಲಾಗಿದ್ದ ಬಲಿ ಕಡೆಗೆ ಓಡಿಸಿ ಬಲಿಗೆ ಬೀಳಿಸಲಾಯಿತು. ಎರಡು ದಿನದಿಂದ ಭೀತಿಗೊಳಗಾಗಿ ನೆಮ್ಮದಿ ಕಳೆದುಕೊಂಡಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಬೇಟಬಾಲಕುಂದಾ ಗ್ರಾಮದಲ್ಲಿ ಹಿಡಿಯಲಾಗಿರುವ ಮಂಗಕ್ಕೆ ರೇಬಿಸ್‌ ಇರುವ ಸಾಧ್ಯತೆ ಇದೆ. ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಒಂದು ವಾರದ ವರೆಗೆ ಪ್ರತ್ಯೇಕ ಸ್ಥಳದಲ್ಲಿಟ್ಟು ನೀಗಾ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ| ರವೀಂದ್ರನಾಥ ತಿಳಿಸಿದ್ದಾರೆ.

ಹುಮನಾಬಾದ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ, ತಹಶೀಲ್ದಾರ ಜಗನ್ನಾಥರೆಡ್ಡಿ, ತಾಪಂ ಇಒ ವಿಜಯಕುಮಾರ ಮಡ್ಡೆ, ಪಿಡಿಒ ಬಸವರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next