ಕೆಜಿಎಫ್: ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿಕೋವಿಡ್ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿಮಂಗಳವಾರ ತಹಶೀಲ್ದಾರ್ ಕೆ.ಎನ್.ಸುಜಾತ ಭೇಟಿ ನೀಡಿ, ಅಧಿಕಾರಿಗಳಿಗೆಎಚ್ಚರಿಕೆ ನೀಡಿದರು.
ಕಚೇರಿಗೆ ಭೇಟಿ ನೀಡಿದ ಅವರು, ಹಣ ಪಾವತಿ ಸ್ಥಳಕ್ಕೆಹೋದಾಗ ನೂರಾರು ಮಂದಿ ಚಲನ್ ಹಿಡಿದು ಹಣ ಕಟ್ಟಲು ಸರದಿಯಲ್ಲಿ ನಿಂತಿದ್ದರು.
ಅವರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಹೇಳಿಲ್ಲ.ಸ್ಯಾನಿಟೈಸರ್ ನೀಡುವ ಕೆಲಸವನ್ನು ಸಿಬ್ಬಂದಿ ಮಾಡಿಲ್ಲ. ಸರ್ಕಾರ ಕೋವಿಡ್‌ನಿಯಂತ್ರಣಕ್ಕೆ ಮಾರ್ಗಸೂಚಿ ನೀಡಿದೆ. ಪ್ರತಿಯೊಂದು ಕಚೇರಿಯಲ್ಲೂಪಾಲಿಸಬೇಕು. ಇದೇ ರೀತಿ ಮುಂದುವರಿದರೆ ನಿಮ್ಮ ವಿರುದ್ಧ ಜಿಲ್ಲಾಧಿಕಾರಿಗಳಿಗೆವರದಿ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.