ಆತ್ಮಾಹುತಿ ದಾಳಿ ನಡೆಯಲು ಮುಫ್ತಿ ಮಹಮ್ಮದ್ ನಂತಹ ಜನಪ್ರತಿನಿಧಿಗಳ ವರ್ತನೆಯೇ ಕಾರಣ ಎಂದು ಬೊಟ್ಟು ಮಾಡಿದ ಕಾರ್ಯಪ್ಪ ಅವರು, ಹಿಂದೆ ಮುಫ್ತಿ ಮಹಮ್ಮದ್ ಅವರ ಕಾರನ್ನು ಸೈನಿಕರು ತಡೆದ ಕಾರಣಕ್ಕೆ ಮುಫ್ತಿ ಅವರು ಸೈನಿಕರಿಗೇ ಗುಂಡಿಕ್ಕುವ ಮಾತನ್ನಾಡಿದ್ದರು. ಇಂದು ದೇಶದ ಹೊರಗಿನವರಿಗಿಂತಲೂ ದೇಶದ ಒಳಗಿರುವ ದೇಶದ್ರೋಹಿಗಳೇ ಅಪಾಯಕಾರಿ ಎಂದು ಹೇಳಿದರು. ಪಾಕಿಸ್ಥಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೈನಿಕರು ನಡೆಸಿದ ದಾಳಿಯನ್ನು ಸಂಶಯದಿಂದ ನೋಡುವ ಕಾಂಗ್ರೆಸ್‌ನ ಕೆಲವು ಪ್ರಮುಖರು, ಲಾಲೂ ಪ್ರಸಾದ್, ಮಮತಾ ಬ್ಯಾನರ್ಜಿ, ಮಾಯಾವತಿ ಮುಂತಾದ ರಾಜಕೀಯ ನಾಯಕರು ಪಾಕಿಸ್ಥಾನದ ಪರ ವಕಾಲತ್ತು ವಹಿಸುತ್ತಿರುವುದು ವಿಷಾದನೀಯ ಎಂದು ಹೇಳಿದ ಅವರು, ಮೋದಿಯರವನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿರುವ ಇಂತಹ ನಾಯಕರ ವಿರುದ್ಧ ದೇಶದ್ರೋಹದ ಆರೋಪದಡಿ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದರು.
Advertisement
ಶ್ರೀನಗರದ ಜನತೆ ಅತ್ಯಂತ ಒಳ್ಳೆಯವರು. ಆದರೆ ಅಲ್ಲಿ ಸೇರಿಕೊಂಡಿರುವ ಆತಂಕವಾದಿಗಳು, ಪ್ರತ್ಯೇಕತಾವಾದಿಗಳಿಂದಾಗಿ ಭಾರತೀಯ ಸೈನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಮ್ಮ ಸೇನೆಯಲ್ಲಿನ ಸೇವೆಯ ಸಂದರ್ಭದ ಕ್ಷಣಗಳನ್ನು ನೆನಪಿಸಿಕೊಂಡ ಕಾರ್ಯಪ್ಪ ಅವರು, ನಾವಿಂದು ಜೀವಂತವಾಗಿ ಬದುಕಿ ಬಂದಿದ್ದರೆ ಅದು ನಮ್ಮ ಪುಣ್ಯವೆಂದರು.