Advertisement
ಇದನ್ನೂ ಓದಿ:- ‘ಫಸ್ಟ್ ನೈಟ್’ ಹೇಳಿಕೆ: ರಚಿತಾ ರಾಮ್ ಮೇಲೆ ನಿಷೇಧ ಹೇರಲು ಕ್ರಾಂತಿ ದಳ ಕೋರಿಕೆ
Related Articles
Advertisement
ಅರ್ಥ ಮಾಡಿಸಬೇಕು:ರೈತ ಮುಖಂಡ ಲಕ್ಷ್ಮೀ ನಾರಾಯಣ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ತನಕ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಪ್ರತಿಭಟನೆ ಸಮಯದಲ್ಲಿ 750 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಆದರೂ, ಮೃತಪಟ್ಟ ರೈತರಿಗೆ ಕೇಂದ್ರ ಸರ್ಕಾರ ಕನಿಷ್ಠ ಸಂತಾಪ ಹೇಳಿಲ್ಲ.
ನಾವು ಸರ್ಕಾರದ ರೈತ ವಿರೋಧಿ ನೀತಿಗೆ ತಕ್ಕ ಪಾಠ ಕಲಿಸಬೇಕು, ರೈತರು ತಿರುಗಿಬಿದ್ದರೆ ಪರಿಣಾಮ ಹೇಗಿರಲಿದೆ ಎನ್ನುವುದನ್ನು ಅವರಿಗೆ ಅರ್ಥ ಮಾಡಿಸಬೇಕು ಎಂದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿÇÉಾ ಅಧ್ಯಕ್ಷ ವೀರಣ್ಣ ಮಾತನಾಡಿ, ಕೃಷಿಗೆ ಪೂರಕ ಕಾಯಿದೆ ಒಪ್ಪಿಕೊಳ್ಳಬೇಕಾಗಿರುವುದು ರೈತರು, ಭೂಮಿಯಲ್ಲಿ ಕಷ್ಟಪಟ್ಟು ಬೆಳೆಯುವ ರೈತರ ಶ್ರಮವನ್ನು ಸರ್ಕಾ ರಗಳು ಗೌರವಿಸುತ್ತಿಲ್ಲ, ರೈತರ ಬೆವರಿನ ಹನಿಗಳಿಗೆ ಬೆಲೆ ಸಿಗುತ್ತಿಲ್ಲ, ರೈತರ ಬೆವರಿನ ಹನಿಗಳಲ್ಲಿ ಕೇಂದ್ರ ಸರ್ಕಾರದ ನಾಯಕರು ಹೋಳಿ ಆಡುತ್ತಾರೆ.
ರೈತರು ಇಂದು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರೂ ಪ್ರಧಾನಿ ನರೇಂದ್ರಮೋದಿ ಅವರಿಗೆ ರೈತರೊಂದಿಗೆ ಮಾತನಾಡಲಿಕ್ಕೂ ಬಿಡುವಿಲ್ಲ. ಇಂತಹ ರೈತ ವಿರೋಧಿ ಪ್ರಧಾನಿ ವಿರುದ್ಧ ಎಲ್ಲರೂ ಧ್ವನಿಯೆತ್ತಬೇಕು ಎಂದರು. ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಪ್ರಗತಿ ಪರ ಸಂಘಟನೆಗಳ ತಾಲೂಕು ಅಧ್ಯಕ್ಷ ಬಿ.ಕೆ.ಶಿವಪ್ಪ, ಜಿಲ್ಲೆಯ ವಿವಿಧ ರೈತಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.