ಚೆನ್ನೈ: ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಕಳ್ಳರ ಸ್ಟೈಲ್ ಕೂಡ ಬದಲಾಗಿದೆ! ಹಾಂಗಂತ ನಾವು ಹೇಳುತ್ತಿಲ್ಲ. ಸ್ವತಃ ಕಸ್ಟಮ್ಸ್ ಅಧಿಕಾರಿಗಳೇ ಇಂಥದ್ದೊಂದು ಮಾಹಿತಿಯನ್ನು ನೀಡಿದ್ದಾರೆ. ಅವರೇ ನೀಡುವ ಪ್ರಕಾರ ಕಳೆದ ಕೆಲವು ತಿಂಗಳಿಂದ ಚಿನ್ನ ಕಳ್ಳತನ ಪ್ರಕರಣಗಳು ಜಾಸ್ತಿಯಾಗಿದ್ದು, ಬೇರೆ ಬೇರೆ ಮಾರ್ಗಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕಳ್ಳರು ಈಗ ಚಿನ್ನವನ್ನು ಪುಡಿ ಮಾಡಿ ಇನ್ನೊಂದು ವಸ್ತುವಿನ ಜತೆ ಬೆರೆಸಿ, ಬಳೆಗಳಲ್ಲಿಟ್ಟು, ತೈಲ ಕ್ಯಾನ್‌ಗಳಲ್ಲಿ ಬೆರೆಸಿ, ಲೋಹಗಳಿಂದ ತಯಾರಾಗುವ ಮಕ್ಕಳ ಆಟಿಕೆ ಸಾಮಾನುಗಳ ಇಟ್ಟು, ಬ್ಯಾಟರಿಗಳ ಮೂಲಕ ವಿದೇಶಗಳಿಂದ ಸಾಗಾಟ ನಡೆಸುತ್ತಿದ್ದಾರೆ ಎನ್ನುವ ಅಂಶವನ್ನು ಬೆಳಕಿಗೆ ತಂದಿದ್ದಾರೆ. ಅಷ್ಟೇ ಅಲ್ಲ, ತಪಾಸಣೆಯ ವಿಧಾನಗಳನ್ನೂ ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಇತ್ತೀಚೆಗೆ ತಮಿಳುನಾಡಿನ ವಿಮಾನ ನಿಲ್ದಾಣಗಳ ವ್ಯಾಪ್ತಿಯಲ್ಲಿ ದಾಖಲಾಗಿರುವ ಪ್ರಕರಣ ಗಳ ಆಧಾರದ ಪ್ರಕಾರ ಕಂದಾಯ ಗುಪ್ತಚರ ನಿರ್ದೇಶನಾಲಯ ಹಾಗೂ ಕಸ್ಟಮ್ಸ್ ಅಧಿಕಾರಿಗಳಿಗೇ ತಪಾಸಣೆಯೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಇಬ್ಬರು ಅಧಿಕಾರಿಗಳ ನಡುವಿನ ಸ್ಪರ್ಧೆಯಿಂದಾಗಿ ಕಳ್ಳರಿಗೂ ಸವಾಲಾಗಿ ಪರಿಣಮಿಸಿದೆ.