Advertisement
ಇಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು ಬಸ್ ಹಿಡಿದು ಪ್ರಯಾಣ ಬೆಳೆಸುತ್ತಾರೆ. ದೂರದ ಊರಿಂದ ಬರುವವರು ಇಲ್ಲಿ ಇಳಿಯುತ್ತಾರೆ. ಬಸ್ಸೇರುವ ಮುನ್ನ ಅಥವಾ ಬಸ್ಸಿಂದ ಇಳಿದೊಡನೆ ಇಲ್ಲಿ ಶೌಚಾಲಯಕ್ಕಾಗಿ ಹುಡುಕಾಡುತ್ತಾರೆ. ಇಲ್ಲಿ ನಿರ್ಮಾಣವಾಗಬೇಕಿದ್ದ ಬಸ್ ನಿಲ್ದಾಣವೂ ವಿಳಂಬವಾಗಿದ್ದು, ಶೌಚಾಲಯ ನಿರ್ಮಾಣವಾಗುವ ಲಕ್ಷಣ ವೂ ಗೋಚರಿಸುತ್ತಿಲ್ಲ. ಬಸ್ ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಯಿದ್ದರೂ, ಶೌಚಾಲಯಕ್ಕೆ ತೊಂದರೆಯಿಲ್ಲ ಎಂಬುದು ನಾಗರಿಕರ ಅಭಿಪ್ರಾಯ.
ಪಂಪ್‌ವೆಲ್‌ನಿಂದ ಪುತ್ತೂರು, ಮಡಿಕೇರಿ, ಮೈಸೂರು, ಬೆಂಗಳೂರು, ಕಾಸರಗೋಡು, ಧರ್ಮಸ್ಥಳ ಮೊದಲಾದ ಪ್ರದೇಶಗಳಿಗೆ ನಿತ್ಯ ನೂರಾರು ಬಸ್ಸುಗಳು ಸಂಚರಿಸುತ್ತವೆ. ಈ ನಿಟ್ಟಿನಲ್ಲಿ ಪಂಪ್‌ವೆಲ್‌ನಲ್ಲಿ ಸಾರ್ವಜನಿಕ ಶೌಚಾಲಯ ಬೇಕು ಎಂದು ಪುತ್ತೂರಿನ ಸರ್ವೆಯ ಬಳಕೆದಾರರ ಹಿತರಕ್ಷಣ
ವೇದಿಕೆಯ ಬಾಲಚಂದ್ರ ಸೊರಕೆ ಅವರು 2013ರಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮನಪಾ ಆಯುಕ್ತರಿಗೆ ಮನವಿ ಮಾಡಿದ್ದರು. ಇವರಿಬ್ಬರೂ ಮನವಿಗೆ ಸ್ಪಂದಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ತಮ್ಮ ಅರ್ಜಿಯನ್ನು ಸೂಕ್ತ ಕ್ರಮಕ್ಕಾಗಿ ಸಹಾಯಕ ಎಂಜಿನಿಯರ್ ಅವರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದರು. ಆದರೆ 4 ವರ್ಷ ಕಳೆದರೂ ಶೌಚಾಲಯ ನಿರ್ಮಾಣವಾಗಿಲ್ಲ! ರಾಷ್ಟ್ರೀಯ ಹೆದ್ದಾರಿಯ ನೆಪ!
ಮನವಿ ನೀಡಿದ ಸಂದರ್ಭದಲ್ಲಿ ಪಾಲಿಕೆಯು ಅರ್ಜಿದಾರರಿಗೆ ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಅದು ಪೂರ್ಣಗೊಂಡ ಬಳಿಕ ಶೌಚಾಲಯದ ಪ್ರದೇಶವನ್ನು ಗುರುತಿಸಲು ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿತ್ತು.
Related Articles
ಪಂಪ್‌ವೆಲ್‌ನಲ್ಲಿ ಶೌಚಾಲಯದ ಪ್ರಸ್ತಾವನೆ ಇದ್ದರೂ ಸ್ಥಳದ ಅಭಾವವಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಬರೆದಿದ್ದೇವೆ. ಅವರು ಅವಕಾಶ ನೀಡಿದರೂ, ಫ್ಲೈಓವರ್ ಕಾಮಗಾರಿ ಮುಗಿಯದೆ ನಿರ್ಮಾಣ ಅಸಾಧ್ಯವಾಗಿದೆ. ಅದಕ್ಕಾಗಿ ಅನುದಾನವೂ ಸಿದ್ಧವಿದೆ.
– ಮಧು,
ಪರಿಸರ ಎಂಜಿನಿಯರ್, ಮನಪಾ
Advertisement
ಕಿರಣ್ ಸರಪಾಡಿ