Advertisement

ಶೌಚಾಲಯ ಇದ್ರೆ ಜೈಕಾರ.. ಇಲ್ಲಾಂದ್ರೆ ಧಿಕ್ಕಾರ!

12:13 PM Aug 02, 2017 | |

ಧಾರವಾಡ: ಶೌಚಾಲಯ ನಿರ್ಮಿಸಿ ಬಳಸುವವರ ಮನೆ ಮುಂದೆ ಜೈಕಾರ, ಶೌಚಾಲಯ ಕಟ್ಟಿಸದಿರುವವರ ಮನೆ ಮುಂದೆ ಧಿಕ್ಕಾರ ಕೂಗುವ ಅಭಿಯಾನ ಆರಂಭಿಸಿರುವುದಾಗಿ ಜಿಪಂ ಸಿಇಒ ಸ್ನೇಹಲ್‌ ರಾಯಮಾನೆ ಹೇಳಿದರು. ತಾಲೂಕಿನ ಅಮ್ಮಿನಬಾವಿಯಲ್ಲಿ ಮಂಗಳವಾರ ರಾತ್ರಿ ಶೌಚಾಲಯ ನಿರ್ಮಾಣ ಜಾಗೃತಿಗಾಗಿ ಗ್ರಾಮವ್ಯಾಸ್ತವ್ಯ ಮಾಡಿರುವ ಅವರು ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದರು. 

Advertisement

ಈ ಅಭಿಯಾನದಿಂದ ಸ್ವಾಭಿಮಾನಕ್ಕಾದರೂ ಶೌಚಾಲಯ ಕಟ್ಟಿಸುವ ಭರವಸೆ ಇದೆ ಎಂದರು. ಜಿಲ್ಲೆಯನ್ನು ಅ. 2ರೊಳಗಾಗಿ ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಿದ್ದೇವೆ. ಅದಕ್ಕಾಗಿ ಎಲ್ಲರೂ ಶ್ರಮಿಸುತ್ತೇವೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಗ್ರಾಮವ್ಯಾಸ್ತವ್ಯ ಆರಂಭಿಸಿದ್ದು, ಅಮ್ಮಿನಬಾವಿ ಗ್ರಾಮವನ್ನು ಆ. 31 ರೊಳಗಾಗಿ ಬಯಲು ಶೌಚ ಮುಕ್ತ ಗ್ರಾಮವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು. 

ಆ. 31ರೊಳಗಾಗಿ ಅಮ್ಮಿನಭಾವಿ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಲು ಮಂಗಳವಾರವೇ ಪಣತೊಡಲಾಗಿದೆ. ಗ್ರಾಮದಲ್ಲಿ ಸುಮಾರು 1700 ಮನೆಗಳಿವೆ. ಈವರೆಗೂ ಶೌಚಾಲಯ ಕಟ್ಟಿಸದ ಸುಮಾರು 200 ಮನೆಗಳಿವೆ. ಅವರಲ್ಲಿ ಹಲವರಿಗೆ ಜಾಗದ ಸಮಸ್ಯೆ ಇದೆ.

ಇನ್ನೂ ಕೆಲವರಿಗೆ ಹಣವಿಲ್ಲ. ಉಳಿದ ಒಂದಷ್ಟು ಜನರಿಗೆ ಶೌಚಾಲಯ ಇದ್ದರೂ ಬಳಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವರ ಮನವೊಲಿಸುವ ಕೆಲಸವಾಗಬೇಕಿದೆ. ಹೀಗಾಗಿ ಜನರೊಂದಿಗೆ ಬೆರೆತು ಅವರ ಮನವೊಲಿಸಲು ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ ಎಂದು ವಿವರಿಸಿದರು. 

ಬೀದಿ ನಾಟಕ, ಹಾಸ್ಯದ ಮೂಲಕ ಜಾಗೃತಿ: ಜಿಪಂ ಸಿಇಒ ಅವರ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಗ್ರಾಪಂ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಶಂಭಯ್ಯ ಹಿರೇಮಠ ಹಾಗೂ ತಂಡದವರು ಶೌಚಾಲಯ ಜಾಗೃತಿ ಕುರಿತು ಬೀದಿ ನಾಟಕ, ಜನಪದ ಹಾಡುಗಳ ಮೂಲಕ ಗಮನ ಸೆಳೆಯಲಾಯಿತು.

Advertisement

ಮಹಾದೇವಿ ಸತ್ತಿಗೇರಿ ಅವರು ಹಾಸ್ಯದ ಮೂಲಕ ಶೌಚಾಲಯದ ಅಗತ್ಯ ತಿಳಿಸಿದರು. ಸರ್ಕಾರದ ಕಾರ್ಯಕ್ರಮಗಳ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು. ಜಿಪಂ ಸದಸ್ಯ ಚನ್ನಬಸಪ್ಪ ಮಟ್ಟಿ ಮಾತನಾಡಿ, ಶೌಚಾಲಯ ಇರುವ ಅಭಿಮಾನ ಎಲ್ಲರಿಗೂ ಇರಬೇಕು. ಶೌಚಾಲಯ ಕಟ್ಟಿಸುವವರನ್ನು ಅಭಿನಂದಿಸಲಾಗುವುದು ಎಂದರು. 

ಇದೇ ಸಂದರ್ಭದಲ್ಲಿ ಕೆಲ ಗ್ರಾಮಸ್ಥರು ಬಿಪಿಎಲ್‌ ಪಡಿತರ ಚೀಟಿದಾರರಿಗೆ ಮಾತ್ರವಲ್ಲ, ಎಪಿಎಲ್‌ ಕಾರ್ಡ್‌ ಹೊಂದಿರುವವರಿಗೂ ಶೌಚಾಲಯ ಕಟ್ಟಿಸಲು ಅನುದಾನ ನೀಡಬೇಕು ಎಂಬ ಬೇಡಿಕೆ ಇಟ್ಟರು. ಇವರನ್ನು ಸಮಾಧಾನ ಪಡಿಸಿದ ಅ ಧಿಕಾರಿಗಳು ಇದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. 

ಗ್ರಾಪಂ ಅಧ್ಯಕ್ಷೆ ನೀಲವ್ವಾ ಗಾಡದ್‌, ತಾಪಂ ಅಧ್ಯಕ್ಷ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ, ತಾಪಂ ಸದಸ್ಯ ಸುಭಾಸ ದೇಸಾಯಿ, ಉಪ ಕಾರ್ಯದರ್ಶಿ ಎಸ್‌.ಜಿ. ಕೊರವರ, ತಾಪಂ ಇಒ ಎಸ್‌.ಎಂ. ರುದ್ರಸ್ವಾಮಿ, ಯೋಜನಾಧಿ ಕಾರಿ ಭೀಮಪ್ಪ, ಎಇಇ ಎಸ್‌.ಎನ್‌. ಗೌಡರ್‌, ಬಿಇಒ ಶ್ರೀಶೈಲ ಕರೀಕಟ್ಟಿ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next