Advertisement

ಟೋಯಿಂಗ್‌ ವ್ಯವಸ್ಥೆ ಘನ ವಾಹನಕ್ಕೂ ಅನ್ವಯವಾಗಲಿ

12:42 AM Apr 14, 2019 | Team Udayavani |

ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನಗಳನ್ನು ಅನಧಿಕೃತ ಸ್ಥಳಗಳಲ್ಲಿ ಪಾರ್ಕಿಂಗ್‌ ಮಾಡಿದರೆ ಅಂತಹ ವಾಹನಗಳನ್ನು ಕೊಂಡೊಯ್ದು ಮಾಲಕರಿಂದ ದಂಡ ವಸೂಲಿ ಮಾಡುತ್ತಿರುವ ಕ್ರಮ ನಗರದಲ್ಲಿ ಕಳೆದೊಂದು ತಿಂಗಳಿನಿಂದ ಜಾರಿಗೆ ಬಂದಿದೆ.

Advertisement

ಎಲ್ಲೆಂದರಲ್ಲಿ ಪಾರ್ಕ್‌ ಮಾಡುವ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದೊಂದು ಉತ್ತಮ ಕ್ರಮವೇ. ಆದರೆ, ನಗರದ ಮುಖ್ಯರಸ್ತೆ, ಇತರ ಸಣ್ಣ ಪುಟ್ಟ ರಸ್ತೆಗಳಲ್ಲಿ ಖಾಸಗಿ ಬಸ್‌ಗಳು, ಲಾರಿ, ಟೆಂಪೋ, ಟಿಪ್ಪರ್‌ನಂತಹ ವಾಹನಗಳನ್ನೂ ದಿನನಿತ್ಯ ಪಾರ್ಕ್‌ ಮಾಡಲಾಗುತ್ತಿದೆ. ರಸ್ತೆಯಲ್ಲೇ ಇಂತಹ ಘನ ವಾಹನಗಳನ್ನು ಪಾರ್ಕ್‌ ಮಾಡುವುದರಿಂದ ಆ ರಸ್ತೆಯಾಗಿ ಸಂಚರಿಸುವವರಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ.

ಹಾಗೆ ನೋಡಿದರೆ, ದ್ವಿಚಕ್ರ ವಾಹನಗಳನ್ನು ಎರ್ರಾಬಿರ್ರಿಯಾಗಿ ಪಾರ್ಕ್‌ ಮಾಡಿದರೆ ಆಗುವ ದುಪ್ಪಟ್ಟು ಸಮಸ್ಯೆ ಇಂಥ ಘನ ವಾಹನಗಳಿಂದಲೇ ಆಗುತ್ತಿವೆ. ಮುಖ್ಯ ರಸ್ತೆಗಳಲ್ಲಿ ವಾಹನ ದಟ್ಟಣೆ ಇದ್ದಾಗ ಹೀಗೆ ಪಾರ್ಕ್‌ ಮಾಡಿದರೆ, ಅತಿ ವೇಗದಲ್ಲಿ ಬರುವ ವಾಹನಗಳಿಗೆ ಸೈಡ್‌ ನೀಡಲಾಗದೆ, ಅಪಘಾತ ಸಂಭವಿಸುವ ಸಾಧ್ಯತೆಯೂ ಅಧಿಕ ವಾಗಿದೆ. ಈ ನಿಟ್ಟಿನಲ್ಲಿ ಟೋಯಿಂಗ್‌ ವ್ಯವಸ್ಥೆಯನ್ನು ಕೇವಲ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಸೀಮಿತಗೊಳಿಸದೆ, ಘನ ವಾಹನಗಳಿಗೂ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕಿದೆ.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next