ಶಿರಸಿ : ಗುರುಕುಲ ಶಿಕ್ಷಣ ಪದ್ಧತಿ ದಾಟಿ ವಿಶೇಷ ಸಂಸ್ಕಾರ ಭರಿತ ಶಿಕ್ಷಣ ಪಡೆಯುತ್ತಿದ್ದ ಕಾಲ ದಾಟಿ ಔಪಚಾರಿಕ ಶಿಕ್ಷಣ ಪರೀಕ್ಷೆ, ಓದು, ಬರಹ, ಉದ್ಯೋಗ ವಿಷಯಗಳು ಆ ಓಟದಲ್ಲಿ ನಮ್ಮತನವನ್ನು ಕಳೆದುಕೊಳ್ಳುವ ಕಾಲ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.
ಅವರು ರವಿವಾರ ತಾಲೂಕಿನ ಕಾನಮುಸ್ಕಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಕ್ಷೇತ್ರ ಎಷ್ಟು ಗಂಭೀರ ಎನ್ನುವುದು ಇಲ್ಲಿಯ ಸಭೆ ನೋಡಿದರೆ ತಿಳಿಯುತ್ತದೆ. ಅಂದಿನ ಶಿಕ್ಷಕರ ನಡೆನುಡಿ ಇಲ್ಲಿ ಎಲ್ಲರಲ್ಲೂ ಇರುವಂತಿದೆ.
ಪ್ರಾಥಮಿಕ ಶಾಲೆ ಎಲ್ಲ ರಂಗದ ಎಲ್ಲ ವ್ಯಕ್ತಿಗಳು ಆ ಮಾರ್ಗದಲ್ಲಿಯೇ ಬರಬೇಕು. ನಮಗೆಲ್ಲರಿಗೂ ಶೃಧ್ಧಾಕೇಂದ್ರ ಪ್ರಾಥಮಿಕ ಶಾಲೆ. ಅದರಲ್ಲೂ ಕಿರಿಯ ಪ್ರಾಥಮಿಕ ಶಾಲೆ. ಹೆಚ್ಚು ವಿಧ್ಯಾರ್ಥಿಗಳು ಗುರುವಿನಂತೆ ಆಗುತ್ತಾರೆ. ಅಂತರಾಳದ ಶಿಕ್ಷಣ ಪ್ರಾಥಮಿಕ ಶಿಕ್ಷಣ ಎಂದರು.
ಧರ್ಮ ರಕ್ಷಣೆ ಮಾಡಿದರೆ ನಮ್ಮ ಮಕ್ಕಳು ಧರ್ಮ ಪಾರಾಯಣರಾಗುತ್ತಾರೆ. ಸಂಸ್ಕಾರವನ್ನು ನಾವು ಉಳಿಸಿ ಬೆಳೆಸಿದರೆ ಮಕ್ಕಳಲ್ಲಿ ಸಂಸ್ಕಾರ ಇರಲು ಸಾಧ್ಯ ಎಂದರು.
ನಿವೃತ್ತ ಪ್ರಾದ್ಯಾಪಕರಾದ ಡಾ. ವಿಜಯನಳಿನಿ ರಮೇಶ ಸ್ಮರಣಸಂಚಿಕೆ ಬಿಡುಗಡೆ ಗೊಳಿಸಿದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಡಿ.ಎಮ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ವಾನಳ್ಳಿ ಮೆಣಸಿ ಸೊಸೈಟಿ ಅಧ್ಯಕ್ಷ ಎನ್.ಎಸ್.ಹೆಗಡೆ, ಶಿರಸಿ ಸಾ.ಶಿ.ಇ. ಉಪನಿರ್ದೇಶಕ ಪಿ.ಬಸವರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಎಸ್.ಹೆಗಡೆ, ವಾನಳ್ಳಿ ಗ್ರಾ.ಪಂ.ಅಧ್ಯಕ್ಷ ಜಯರಾಮ ಹೆಗಡೆ, ವಾನಳ್ಳಿ ಗ್ರಾ.ಪಂ.ಸದಸ್ಯ ಮಂಜಿ ಭೋವಿ ವಡ್ಡರ್, ಚೈತನ್ಯ ಮಹಾವಿದ್ಯಾಲಯ ಪ್ರಾಧ್ಯಾಪಕ ಅನಂತಮೂರ್ತೀ ಭಟ್ಟ ಉಪಸ್ಥಿತರಿದ್ದರು. ನಾಗರಾಜ ಹೆಗಡೆ ನಿರೂಪಿಸಿದರು.