Advertisement

ಕಾಲಮಿತಿಯಲ್ಲಿ ಗುರಿ ತಲುಪಲು ಸೂಚನೆ

12:42 PM Jan 24, 2017 | |

ಕಲಬುರಗಿ: ರಾಜ್ಯದಲ್ಲಿ ಮುಂದಿನ 13 ತಿಂಗಳಲ್ಲಿ ಚುನಾವಣೆ ಬರುತ್ತದೆ. ಆದಷ್ಟು ಬೇಗ ಎಲ್ಲ ಕೆಲಸ ಮುಗಿಸಿ. ಸಿದ್ದರಾಮಯ್ಯ ಸರಕಾರ ಅಂದುಕೊಂಡಿದ್ದನ್ನು ಮಾಡಿ ತೋರಿಸಿ. ಕಾಲಮಿತಿಯಲ್ಲಿ ಅಧಿಕಾರಿಗಳೇ ಜನರಿಗೆ ಯೋಜನೆ ಲಾಭ ತಲುಪಿಸಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಎಚ್‌. ಆಂಜನೇಯ ಹೇಳಿದರು. 

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಸ್‌ಸಿಪಿ ಮತ್ತು ಇಎಸ್‌ಪಿ ಯೋಜನೆ ಅಡಿ ಕೈಗೊಂಡಿರುವ ಕಾಮಗಾರಿ ಹಾಗೂ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿ ಅವರು ಮಾತನಾಡಿದರು. ಇಲಾಖೆಯಿಂದ ಕೈಗೊಂಡಿರುವ ಮತ್ತು ಕೈಗೊಳ್ಳಲು ಸಿದ್ಧ ಮಾಡಿರುವ ಕ್ರಿಯಾ ಯೋಜನೆಗಳನ್ನು ಕಾಲಮಿತಿಯಲ್ಲಿ ಮುಗಿಸಬೇಕು.

ಅದಕ್ಕೆ ಬೇಕಾಗಿರುವ ಅನುಮೋದನೆ ಎಲ್ಲವನ್ನು ಈ ಸಭೆಯಲ್ಲಿಯೇ ನೀಡಲಾಗುವುದು. ಅದಕ್ಕಾಗಿ ಯುದೊœàಪಾದಿಯಲ್ಲಿ ಕೆಲಸ ಮಾಡಿ ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿನ 77 ವಿವಿಧ ವಸತಿ ನಿಲಯಗಳ ಸ್ವಂತ ಕಟ್ಟಡ ನವೀಕರಣ, ದುರಸ್ತಿಗಾಗಿ ಒಟ್ಟು 24 ಕೋಟಿ ರೂ. ಕ್ರಿಯಾ ಯೋಜನೆ ಸಿದ್ದ ಮಾಡಲಾಗಿದೆ. ಈಗಾಗಲೇ 11 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನೂ 13 ಕೋಟಿ ರೂ. ಅವಶ್ಯಕತೆ ಇದೆ.

ಅದನ್ನು ಇವತ್ತಿನ ಸಭೆಯಲ್ಲಿಯೇ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗುತ್ತಿದೆ. ಟೆಂಡರ್‌ ಕರೆಯದೇ ಇರುವ ಕಾಮಗಾರಿಗಾಗಿ ಕಿರು ಅವಧಿ ಟೆಂಡರ್‌ ಕರೆದು, ಮಾರ್ಚ್‌ನಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ಕೆಲಸ ಆರಂಭಿಸಬೇಕು ಎಂದು ಸಚಿವರು ಸೂಚಿಸಿದರು. ಮೊರಾರ್ಜಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳ 22 ವಸತಿ ನಿಲಯಗಳ ಕಟ್ಟಡ ನಿರ್ಮಾಣಕ್ಕಾಗಿ ಒಟು 125 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದೆ. 

ಈಗಾಗಲೇ 8 ವಸತಿ ನಿಲಯ ಕಟ್ಟಡಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ 40 ಕೋಟಿ ರೂ.ಗಳ ಅನುಮೋದನೆ ಸಿಕ್ಕಿದೆ. ಇನ್ನುಳಿದ 14 ನಿಲಯಗಳಿಗಾಗಿ ಅಂದಾಜು ವೆಚ್ಚ ತಯಾರಿಸಿ ಸಲ್ಲಿಸಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಸೂಚಿಸಲಾಗಿದ್ದು. ಪ್ರಗತಿಯಲ್ಲಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜಣ್ಣ ಹೇಳಿದರು. ಸಂಸದ ಖರ್ಗೆ ಆವರು, ಬೇಗ ಮುಗಿಸಿ. ಅದಕ್ಕಾಕೆ ತಡವಾಗುತ್ತಿದೆ.

Advertisement

ಜಾಗೆ ಇಲ್ಲವೇ ಎಂದು ಕೇಳಿದಾಗ ಜಾಗೆ ಇದೆ. ಆದರೆ ಡಿಪಿಆರ್‌ ರೆಡಿಯಾಗಬೇಕು ಎಂದಾಗ ಕ್ರೈಸ್‌ ಇಂಜಿನಿಯರ್‌ ಹಿರೇಮಠ, ಮುಂದಿನ 15 ದಿನಗಳಲ್ಲಿ ಟೆಂಡರ್‌ ಕರೆದು ಗುತ್ತಿಗೆದಾರರನ್ನು ಅಂತಿಮ ಮಾಡುವುದಾಗಿ ಹೇಳಿದರು. ತಾಲೂಕುವಾರು ವಿಂಗಡಣೆ ಮಾಡಿ ಪ್ರತ್ಯೇಕ ಗುತ್ತಿಗೆದಾರರಿಗೆ ಕೊಡಿ, ಒಬ್ಬರೆ ಗುತ್ತಿಗೆದಾರರಿಗೆ ಕೊಡುವುದು ಬೇಡ ಎಂದು ಸೂಚಿಸಿದರು. 

ನಗರದಲ್ಲಿರುವ ಬಂಜಾರ ಭವನ,ಜೇವರ್ಗಿಯ ಬಾಬು ಜಗಜೀವನರಾಂ ಭವನದ ಪರಿಸ್ಥಿತಿ ತಿಳಿದ ಸಚಿವರು, ಜೇವರ್ಗಿಯಲ್ಲಿನ ಭವನಕ್ಕೆ ಹೆಚ್ಚುವರಿಯಾಗಿ 77 ಲಕ್ಷರೂ.ಗಳ ಅವಶ್ಯಕತೆ ಇದೆ. ಅದನ್ನು ಕೂಡಲೇ ಮಂಜೂರು ಮಾಡಲು ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದರು. ನಗರದ ಬಂಜಾರ ಭವನದ ಇನ್ನೂ ಯಾಕೆ ಬಳಕೆ ಮಾಡುತ್ತಿಲ್ಲ ಎಂದಾಗ ಜಾಗೆ ವಿವಾದ ಇದೆ.

ಅದನ್ನು ಬಂಜಾರ ಸಂಘದವರು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಕೇಳುತ್ತಿದ್ದಾರೆ ಎಂದು ಅಧಿಕಾರಿ ರಾಜಣ್ಣ ಹೇಳಿದಾಗ, ಇಡೀ ಪ್ರಕರಣವನ್ನು ಮಲ್ಲಿಕಾರ್ಜುನ ಖರ್ಗೆ ಅವರು, ಮತ್ತೂಮ್ಮೆ ನೆನಪಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸ್ಮಶಾನ ಭೂಮಿ ಖರೀದಿಗೆ ಹಣವಿದೆ. ಕೂಡಲೇ ಜಿಲ್ಲೆಯಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಭೂಮಿ ಖರೀದಿ ಮಾಡುವಂತೆ ಮತ್ತು ಅನುದಾನದಲ್ಲಿ ಬೇಲಿ ಹಾಕಿಸುವುದು,

ಗಿಡಗಂಟಿ ಕತ್ತಿರುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಯಿತು. ಸಚಿವ ಡಾ| ಶರಣ ಪ್ರಕಾಶ ಪಾಟೀಲ, ಶಾಸಕರಾದ ಅಜಯಸಿಂಗ್‌, ಉಮೇಶ ಜಾಧವ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೊಹಮ್ಮದ್‌ ಮೋಹಿಸಿನ್‌, ಸಲಹೆಗಾರ ವೆಂಕಯ್ಯ, ಆಯುಕ್ತ ವಿಕಾಸ, ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌,ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಂಗಿ ಹಾಗೂ ಉಭಯ ಇಲಾಖೆಗೆ ಜಿಲ್ಲಾ ಮತ್ತು ವಿಭಾಗ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next