Advertisement

ಹುಲಿ ಹೆಜ್ಜೆ ಗುರುತು ಗ್ರಾಮಸ್ಥರು ಆತಂಕ

01:12 AM Oct 31, 2020 | mahesh |

ಮಡಿಕೇರಿ: ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿಯ ವೆಸ್ಟ್‌ ನೆಮ್ಮಲೆ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.

Advertisement

ಕಳೆದ ಒಂದು ತಿಂಗಳಿನಿಂದ ಚೊಟ್ಟೆಯಂಡಮಾಡ ಸಂಜು ಅವರ ಗದ್ದೆ, ಉಳುವಂಗಡ ಅಜಿತ್‌ ಅವರ ಮನೆ ಪಕ್ಕ, ಚೆಟ್ಟಂಗಡ ಗಪ್ಪು ಪೂವಯ್ಯ ಹಾಗೂ ಬಿಪಿನ್‌ ಅವರ ತೋಟದಲ್ಲಿ ನಿರಂತರವಾಗಿ ಹುಲಿ ಪ್ರತ್ಯಕ್ಷವಾಗಿದ್ದು, ಬಲ್ಯಾಂಡಮಾಡ ಧನು ಎಂಬವರ ತೋಟದಲ್ಲಿ ಘರ್ಜಿಸುವ ಶಬ್ದ ಕೇಳಿಬಂದಿದೆ.

ಅಲ್ಲದೇ ಚೊಟ್ಟೆಯಂಡಮಾಡ ವಿಶು ಎಂಬವರ ಕಾಫಿ ಕಣದ ಪಕ್ಕದಲ್ಲೇ ಹುಲಿ ಹಾದು ಹೋಗಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಗ್ರಾಮಸ್ಥರು ಎಚ್ಚರ ವಹಿಸುವಂತೆ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next