Advertisement

ಸರ್ಕಾರಿ ಜಾಬ್‌ ಗೆ 2 ಮಕ್ಕಳ ಮಿತಿ

10:37 AM Apr 10, 2017 | Harsha Rao |

ಗುವಾಹಟಿ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವ ಅಭ್ಯರ್ಥಿಗಳು ಯಾವುದೇ ಸ್ಥಳೀಯ ಹಾಗೂ ಸ್ವಾಯತ್ತ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವಂತಿಲ್ಲ! ಇದು ಅಸ್ಸಾಂ ಸರ್ಕಾರದ ಹೊಸ ನೀತಿ. 

Advertisement

ಈಗಾಗಲೇ ಈ ವಿಷಯವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದ ಅಸ್ಸಾಂ ಸರ್ಕಾರ, ಭಾನು ವಾರ ಈ ಕುರಿತ ಕರಡು ಜನಸಂಖ್ಯಾ ನೀತಿಯೊಂದನ್ನು ಘೋಷಿಸಿದೆ. ಅದರಂತೆ ಎರಡಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳು ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಕಳೆದುಕೊಳ್ಳುತ್ತಾರೆ. ಇದರೊಂದಿಗೆ 2ಕ್ಕಿಂತ ಹೆಚ್ಚು ಮಕ್ಕಳಿರುವ ದಂಪತಿಗೆ ಸರ್ಕಾರಿ ಕೆಲಸ ಕೂಡ ಸಿಗಲ್ಲ! 

ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ, “2 ಕ್ಕಿಂತ ಹೆಚ್ಚು ಮಕ್ಕಳಿರುವ ದಂಪತಿ, ಚುನಾವಣೆ ಆಯೋಗದ ಅಡಿ ನಡೆಯುವ  ಸ್ಥಳೀಯ  ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಸರ್ಕಾರಿ ಕೆಲಸ ಪಡೆಯಲೂ ಅವರು ಅನರ್ಹರು,’ ಎಂದು ತಿಳಿಸಿದ್ದಾರೆ.

“ಈ ಮಕ್ಕಳ ಮಿತಿ ಕರಾರಿನ ಅಡಿ, ಕೆಲಸ ಪಡೆಯುವ ಯಾವುದೇ ಸರ್ಕಾರಿ ನೌಕರ ತನ್ನ ಸೇವಾವಧಿ ಮುಗಿವವರೆಗೂ ಕರಾರಿಗೆ ಬದ್ಧನಾಗಿರಬೇಕು. ಟ್ರ್ಯಾಕ್ಟರ್‌ ವಿತರಣೆ, ಮನೆಗಳ ಕೊಡುಗೆ ಸೇರಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಯಾವುದೇ ಯೋಜನೆಯಡಿ ಅರ್ಹತೆ ಗಿಟ್ಟಿಸಲು ಈ “ಎರಡು ಮಕ್ಕಳ’ ಮಿತಿ ಅನ್ವಯವಾಗುತ್ತದೆ,’ ಎಂದಿದ್ದಾರೆ. ಅಲ್ಲದೆ ರಾಜ್ಯದ ಎಲ್ಲ ಹೆಣ್ಣುಮಕ್ಕಳಿಗೆ ವಿವಿ ಹಂತದವರೆಗೆ ಉಚಿತ ಶಿಕ್ಷಣ ನೀಡಲು ಈ ಕರಡಿನಲ್ಲಿ ಸಲಹೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next