Advertisement
ಮೇ 29ರಂದು ಬಿದ್ದ ಮಳೆಯಿಂದಾಗಿ ಮಂಗಳೂರು ವಿಮಾನ ನಿಲ್ದಾಣದ ರನ್ ವೇಯ ನೀರು ಒಂದೆಡೆ ಧುಮುಕಿ ಹರಿದ ಕಾರಣ ಮಣ್ಣು ಕೊರೆದು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಅಪಾರ ಹಾನಿ ಉಂಟಾಗಿದೆ. ಈ ಹಾನಿಯಿಂದ ಈ ಪ್ರದೇಶದ ಮನೆಗಳು ಇನ್ನೂ ಕೂಡ ಯಥಾಸ್ಥಿತಿಗೆ ಮರಳಲು ಸಾಧ್ಯವಾಗಿಲ್ಲ. ಈಗ ಮಳೆ ಬಂದರೆ ಮಳೆಯ ನೀರು ಈ ಮನೆಗಳಿಗೆ ಹರಿದು ಕೊಚ್ಚಿ ಹೋಗುವ ಸಾಧ್ಯತೆ ಇದೆ. ಇದರಿಂದ ಮನೆಯವರು ಈಗ ನಿದ್ದೆ ಗೆಟ್ಟು ದಿನರಾತ್ರಿ ಕಳೆಯುವ ಪರಿಸ್ಥಿತಿ ಇದೆ.
Related Articles
ವಿಟ್ಲಬೆಟ್ಟು ನಿವಾಸಿ ಶಿವರಾಮ್ ಕುಲಾಲ್, ವಾಸು ಮೂಲ್ಯ ಹಾಗೂ ದೇವಪ್ಪ ಮೂಲ್ಯ ಎಂಬವರ ಮನೆಗಳು ಈಗ ಅಪಾಯದಲ್ಲಿದೆ. ಈಗಾಗಲೇ ಈ ಮನೆಗಳು ಹಾನಿಗೀಡಾಗಿದೆ. ಈಗ ಮಳೆ ಬಂದರೆ ವಿಮಾನ ನಿಲ್ದಾಣದನೀರು ಕೆಳಕ್ಕೆ ಧುಮುಕಿ ಹರಿದು ಕೆಳಗಡೆ ಇರುವ ಅವರ ಮನೆಗಳಿಗೆ ಹರಿಯುವ ಸಾಧ್ಯತೆಗಳಿವೆ. ಮೊನ್ನೆಯ ಮಳೆನೀರು ಹೋಗಿ ಈ ಪ್ರದೇಶದಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ಇದನ್ನು ದುರಸ್ತಿಗೊಳಿಸಿದಿದ್ದರೆ ಈ ಪ್ರದೇಶದಲ್ಲಿ
ಮಳೆನೀರು ಹರಿದು ಮುಂದೆ ಇರುವ ಈ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
Advertisement
ಜೀವ ಉಳಿದದ್ದೆ ದೊಡ್ಡದುಪಕ್ಕದ ತೋಡಿನಲ್ಲಿ ಮಳೆಗಾಲದಲ್ಲಿ ನೀರು ಹರಿಯುತ್ತದೆ. ಆದರೆ ಹೀಗೆ ಮಳೆಯ ನೀರು ಹರಿದದ್ದು ನಾನೆಂದು ಕಂಡಿಲ್ಲ. ದೊಡ್ಡದೊಡ್ಡ ಕಲ್ಲುಗಳು ಉರುಳಿ ಮನೆಯ ಅಂಗಳಕ್ಕೆ ಬಂತು. ನೀರು ಹೊಳೆಯಾಗಿ ಹರಿಯಿತು. ಗೋಡೆಗಳಲ್ಲಿ ಬಿರುಕು ಬಿದ್ದಿವೆ. ಯಾವಾಗ ಬೀಳುತ್ತದೋ ಎಂಬ ಹೆದರಿಕೆ ಇದೆ. ನಿದ್ದೆಯೇ ಬರುವುದಿಲ್ಲ. ಮಳೆ ಬಂದರೆ ಇನ್ನೂ ಅಪಾಯ, ಮನೆಯ ಅಡಿಪಾಯಕ್ಕೆ ಹಾನಿಯಾಗಿದೆ. ಮರ ಬಿದ್ದು ಮನೆ ಛಾವಣಿಗೆ ಹಾನಿಯಾಗಿದೆ. ಮಳೆ ಬೆಳ ಗ್ಗೆ ಬಂದದ್ದು ದೊಡ್ಡ ಪುಣ್ಯ, ನಮ್ಮ ಜೀವ ಉಳಿದದ್ದೇ ದೊಡ್ಡದು ಎಂದು 75 ಹರೆಯದ ಜಾನಕಿ ಹೇಳಿದ್ದಾರೆ. ಈಗ ಬಾವಿಯ ನೀರು ಕುಡಿಯುವಂತಿಲ್ಲ. ಮಳೆಯ ನೀರು, ಮಣ್ಣು, ಕಲ್ಲುಗಳು ಬಿದ್ದು ಬಾವಿ ತುಂಬಿದೆ. ಇದರಿಂದ 300 ಮೀಟರ್ ದೂರದಿಂದ ಕುಡಿಯಲು ನೀರು ತರಬೇಕಾಗಿದೆ. ಪೇಟೆ ಹೋಗಲು ಸುತ್ತ ದಾರಿ ಬಳಸಿ ಹೋಗಬೇಕಾಗಿದೆ. ದೇವರೇ ನಮ್ಮನ್ನು ಕಾಪಾಡಿದರು ಎಂದು ಶಿವರಾಮ ಕುಲಾಲ್ ಅವರ ಪತ್ನಿ ಪಾರ್ವತಿ ತಿಳಿಸಿದ್ದಾರೆ. ಈ ಪ್ರದೇಶದ ಮನೆಗಳಿಗೆ ಇನ್ನೂ ಅಪಾಯ ತಪ್ಪಿಲ್ಲ. ಲೋಕೋಪಯೋಗಿ ಇಲಾಖೆ ರಸ್ತೆಯ ಚರಂಡಿಯ ಮಣ್ಣು ಜೇಸಿಬಿಯ ಮೂಲಕ ತೆಗೆದು ಇನ್ನೂ ಅಳಮಾಡುತ್ತಿದೆ. ಮೋರಿಯ ಬದಿಯಲ್ಲಿ ಬಿದ್ದ ದೊಡ್ಡ ಹೊಂಡಗಳನ್ನು ತುಂಬುತ್ತಿದೆ. ಆದರೆ ಅದರ ಜತೆಗೆ ವಿಟ್ಲಬೆಟ್ಟು ಮನೆಗಳಿಗೆ ಹೋಗುವ ರಸ್ತೆ ಹಾಗೂ ಮೋರಿಯಲ್ಲಿ ಹರಿಯುವ ನೀರಿಗೆ ಏನೂ ಪರಿಹಾರ ಕಂಡುಕೊಳ್ಳುತ್ತದೆ ಎಂಬುವುದು ಮುಖ್ಯ ರಸ್ತೆ ತೋಡಾಯಿತು
ವಿಟ್ಲಬೆಟ್ಟು ನಲ್ಲಿರುವ ಈ ಪ್ರದೇಶದ ಮನೆಗಳಿಗೆ ಹೋಗಲು ರಸ್ತೆ ಇತ್ತು. ಇದು ಬಜಪೆ, ಉಣಿಲೆ, ಆದ್ಯಪಾಡಿಗೆ ಕೂಡ ರಸ್ತೆಯಾಗಿತ್ತು. ಮೊನ್ನೆಯ ಮಳೆಯ ನೀರಿನ ರಭಸಕ್ಕೆ ತೋಡಿನಲ್ಲಿ ಹರಿಯುವ ನೀರು ಈ ರಸ್ತೆಯ ಮಣ್ಣುನ್ನು ಕೊರೆದು ಕೆಳಗಡೆ ಇರುವ ಈ ಮನೆಗಳ ಸಮೀಪವಾಗಿ ಬಯಲು ಪ್ರದೇಶಕ್ಕೆ ಹೋಗಿತ್ತು. ಇದರಿಂದ ಈ ಪ್ರದೇಶಕ್ಕೆ ಈಗ ಸಂಪರ್ಕ ರಸ್ತೆ ಇಲ್ಲವಾಗಿದೆ. ನಿತ್ಯ ನೀರು ಹರಿಯುವ ತೋಡಿನಲ್ಲಿ ನೀರು ಹರಿಯುದಿಲ್ಲ. ರಸ್ತೆ ಇದ್ದಲ್ಲಿ ಹೊಂಡಗಳು ಬಿದ್ದಿವೆ. ರಸ್ತೆ ಇಲ್ಲದೇ ಕಂಗೆಟ್ಟ ಕುಟುಂಬ
ಶಿವರಾಮ ಕುಲಾಲ್ ಮತ್ತು ಪಾರ್ವತಿ ದಂಪತಿ ಮಗಳಿಗೆ ಜೂ. 25ರಂದು ಮದುವೆ ಸಮಾರಂಭವಿದೆ. ಅ ಮನೆಗೆ ಬರಲು ಹೋಗಲು ರಸ್ತೆಯೇ ಇಲ್ಲವಾಗಿದೆ. ಕುಟುಂಬ ಈಗ ಕಂಗೆಟ್ಟಿದೆ. ಸಮಾರಂಭಕ್ಕೆ ಬರುವವರು, ಹೋಗುವವರು ಹೇಗೆ ಕೆರೆತರುವುದು ಎಂಬ ಚಿಂತೆಯಲ್ಲಿದ್ದಾರೆ. ಬೇರೆಡೆಯಿಂದ
ಬಂದ ಅತಿಥಿಗಳಿಗೆ ಈ ಮನೆಗೆ ಬರಲು ದಾರಿಯೇ ಕಾಣದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಪ್ರದೇಶ ಇತರರು ಇದ್ದಾರೆ.