ಬಂಟ್ವಾಳ: ಧಾರ್ಮಿಕ ಆಚರಣೆಯ ಜತೆಗೆ ಸಾಮಾಜಿಕ ಆರೋಗ್ಯದ ಚಿಂತನೆ ಇದ್ದಾಗ ಲೋಕ ಕಲ್ಯಾಣ ಸಾಧ್ಯ. ನಾವು ಮತ್ತು ನನ್ನವರು ಮಾತ್ರ ಸಮಾಜವಲ್ಲ. ಎಲ್ಲರೂ ಆರೋಗ್ಯವಾಗಿದ್ದಾಗ, ಸರ್ವರ ಒಳಿತು ಒಬ್ಬರ ಹಿತವನ್ನು ಕಾಯುತ್ತದೆ. ದೇಹದ ಒಂದು ಅಂಗಕ್ಕೆ ನೋವಾದಾಗ ಇತರ ಅಂಗಗಳು ಚಲಿಸಿ ಯೋಗಕ್ಷೇಮಕ್ಕೆ ಗಮನ ನೀಡಿ ನೋವು ನಿವಾರಿಸಲು ಪ್ರಯತ್ನಿಸುವಂತೆ ನಮ್ಮ ಸಮಾಜದ ನೋವು ನಿವಾರಿಸಲು ಎಲ್ಲರೂ ಒಂದಾಗಿ ದುಡಿಯಬೇಕು ಎಂದು ಶ್ರೀ ವಿಶ್ವಕರ್ಮ ಪೀಠ, ಅರೆಮಾದನಹಳ್ಳಿ ಮಹಾ ಸಂಸ್ಥಾನದ ಶ್ರೀ ಶಿವ ಸುಜ್ಞಾನ ತೀರ್ಥ ಶ್ರೀಗಳು ಹೇಳಿದರು.
ಅವರು ಫೆ. 19ರಂದು ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥ ನಡೆದ ಸಾಮೂಹಿಕ ಶ್ರೀ ಚಂಡಿಕಾ ಯಾಗದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಇದೇ ಸಂದರ್ಭ ಕಿಡ್ನಿ ವೈಫಲ್ಯದ ರೋಗದಿಂದ ಬಳಲುತ್ತಿರುವ ಕುರಿಯಾಳ ಗ್ರಾಮ ನೋರ್ನಡ್ಕ ನಿವಾಸಿ ಶಂಕರ ಆಚಾರ್ಯರಿಗೆ ಸೇವಾಂಜಲಿ ಪ್ರತಿಷ್ಠಾನ ನೀಡಿದ 10,000 ರೂ. ಸಹಾಯಧನವನ್ನು ಫಲಾನುಭವಿಗೆ ಹಸ್ತಾಂತರಿಸಿದರು. ಹಿರಿಯ ಸಾಹಿತಿ ಡಾ| ಏರ್ಯ ಲಕ್ಷಿ$¾àನಾರಾಯಣ ಆಳ್ವ, ಉದ್ಯಮಿ ಕೆ. ಸೇಸಪ್ಪ ಕೋಟ್ಯಾನ್, ಕೆ. ಸುಂದರ ಶೆಟ್ಟಿ ಕಲ್ಲತಡಮೆ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ್ ಪೂಂಜ, ಕೋಶಾಧಿಕಾರಿ ಗೋವಿಂದ ಶೆಣೈ, ತಾರಾನಾಥ ಕೊಟ್ಟಾರಿ ತೇವು ಮೊದಲಾದವರು ಉಪಸ್ಥಿತರಿದ್ದರು. ಕೆ.ಕೆ. ಪೂಂಜ ಸ್ವಾಗತಿಸಿ, ವಂದಿಸಿದರು.