Advertisement

3ನೇ ಬಾರಿಯೂ ಜನಾಶೀರ್ವಾದ

02:22 AM Mar 25, 2019 | Team Udayavani |
  • ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದೀರಿ; ಪರಿಸ್ಥಿತಿ ಭಿನ್ನವಾಗಿದೆಯೇ ?
    ದ.ಕ. ಲೋಕಸಭಾ ಕ್ಷೇತ್ರದಿಂದ ಮತದಾರರು ಎರಡು ಬಾರಿ ನನಗೆ ಅಶೀರ್ವಾದ ಮಾಡಿ ಲೋಕಸಭೆಗೆ ಕಳುಹಿಸಿಕೊಟ್ಟಿದ್ದಾರೆ. ಮೊದಲ ಬಾರಿ ಆಯ್ಕೆಯಾದಾಗ ನಾನು ವಿಪಕ್ಷದ ಸಂಸದನಾಗಿದ್ದೆ. ಎರಡನೇ ಬಾರಿ ಆಯ್ಕೆಯಾಗಿ ಆಡಳಿತ ಪಕ್ಷದ ಸಂಸದನಾಗಿದ್ದೇನೆ. ಹಲವಾರು ಯೋಜನೆಗಳು ಪೂರ್ಣಗೊಂಡಿವೆ. ಇನ್ನು ಕೆಲವು ಪ್ರಗತಿಯಲ್ಲಿವೆ. ಈ ಎಲ್ಲವನ್ನು ಗಮನಿಸಿ ಮತದಾರರು ಆಶೀರ್ವಾದ ಮಾಡಲಿದ್ದಾರೆ.
  • ಕಾಂಗ್ರೆಸ್‌ನ ಯುವ ಅಭ್ಯರ್ಥಿಯಿಂದಾಗಿ ಸ್ಪರ್ಧಾಕಣದ ಮೇಲೆ ಪರಿಣಾಮ ಬೀರಲಿದೆಯೇ?
    ಇದೊಂದು ವೈಚಾರಿಕ ಹೋರಾಟ. ನಮ್ಮ ವಿಚಾರಧಾರೆ, ಅಭಿವೃದ್ಧಿ, ಸಾಧನೆಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿ
    ದ್ದೇವೆ. ನಮ್ಮ ಪ್ರತಿಸ್ಪರ್ಧಿ ಯಾರು, ಅವರ ಪ್ರಾಯ ಎಷ್ಟು ಎಂಬುದು ಮುಖ್ಯವಲ್ಲ.
  • ಪ್ರಚಾರ ಹೇಗಿದೆ
    ಪ್ರಚಾರ ಬಿರುಸಿನಿಂದ ಸಾಗಿದೆ. ಕಾರ್ಯಕರ್ತರು ಈಗಾಗಲೇ 1ನೇ
    ಸುತ್ತಿನ ಮನೆಮನೆ ಭೇಟಿ ಮುಗಿಸಿದ್ದಾರೆ. ನಾನು ಕ್ಷೇತ್ರದಲ್ಲಿ 2 ಸುತ್ತಿನ ಪ್ರವಾಸ ಮಾಡಿದ್ದೇನೆ. ಪೇಜ್‌ ಪ್ರಮುಖರು, ಶಕ್ತಿಕೇಂದ್ರಗಳ ಪ್ರಮುಖರು ಪ್ರಚಾರ ಕಣದಲ್ಲಿದ್ದಾರೆ. ಇದಲ್ಲದೆ ನರೇಂದ್ರ ಮೋದಿಯವರ ಸಾಧನೆ, ಆಡಳಿತವನ್ನು ನೋಡಿ ಆನೇಕ ಸೇವಾಸಂಸ್ಥೆಗಳೂ ಪ್ರಚಾರ ಕಾರ್ಯದಲ್ಲಿ ಸ್ವಯಂ ತೊಡಗಿಸಿಕೊಂಡಿವೆ.
  • ನಿಮ್ಮ ಸ್ಪರ್ಧೆಗೆ ಅತೃಪ್ತಿ ಇತ್ತೆ?
    ಅಲ್ಪಸ್ವಲ ಅಸಮಾಧಾನಗಳು ಎಲ್ಲ ಪಕ್ಷಗಳಲ್ಲೂ ಸಹಜ. 2 ಬಾರಿ ಸಂಸದನಾಗಿದ್ದೇನೆ. 3ನೇ ಬಾರಿಗೆ ಕಣದಲ್ಲಿದ್ದೇನೆ. ಆಕಾಂಕ್ಷಿಗಳು, ಅಪೇಕ್ಷಿತರು ಸಹಜ.
    ಅವೆಲ್ಲ ಈಗ ಬಗೆಹರಿದಿವೆ; ಎಲ್ಲರೂ ಒಗ್ಗಟ್ಟಿನಿಂದ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದೇವೆ.
Advertisement

Udayavani is now on Telegram. Click here to join our channel and stay updated with the latest news.

Next