Advertisement

ಮೂರನೇ ದಿನ ಮಳೆಯದೇ ಆಟ

12:30 PM Jan 08, 2018 | |

ಕೇಪ್‌ಟೌನ್‌: ರವಿವಾರ ಕೇಪ್‌ಟೌನ್‌ನಲ್ಲಿ ಸುರಿದ ಸತತ ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್‌ ಪಂದ್ಯದ 3ನೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಇದು ಆತಿಥೇಯರ ಮೇಲುಗೈಗೆ ತಡೆಯಾಗಿ ಪರಿಣಮಿಸೀತೇ ಎಂಬುದು ಭಾರತದ ಕ್ರಿಕೆಟ್‌ ಅಭಿಮಾಗಳ ಕುತೂಹಲ!

Advertisement

ಬೆಳಗ್ಗಿನಿಂದಲೇ ಸುರಿಯಲಾರಂಭಿಸಿದ ಮಳೆ ಯಿಂದ ಆಟ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣ ವಾಗುತ್ತ ಹೋಯಿತು. ಅಂತಿಮವಾಗಿ ಮಧ್ಯಾಹ್ನ 3.30ಕ್ಕೆ ದಿನದಾಟವನ್ನು ರದ್ದುಗೊಳಿಸಲು ನಿರ್ಧ ರಿಸಲಾಯಿತು. ಇದರಿಂದ ಉಳಿದೆರಡು ದಿನಗಳಲ್ಲಿ ತಲಾ 98 ಓವರ್‌ಗಳ ಆಟ ನಡೆಯಲಿದೆ. ಪಂದ್ಯ ಸ್ಥಳೀಯ ಕಾಲಮಾನದಂತೆ 10.30ಕ್ಕೆ ಆರಂಭ ವಾಗಲಿದ್ದು, ಕೊನೆಯ 2 ಅವಧಿಗಳ ಆಟವನ್ನು ತಲಾ 15 ನಿಮಿಷ ವಿಸ್ತರಿಸಲಾಗುವುದು. ಸೋಮ, ಮಂಗಳ ವಾರ ಕೇಪ್‌ಟೌನ್‌ನಲ್ಲಿ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಟ ಆರಂಭಗೊಳ್ಳದಿದ್ದುದರಿಂದ ರೊಚ್ಚಿಗೆದ್ದ ಕೆಲವು ಪಾನಮತ್ತ ವೀಕ್ಷಕರು 3 ಸಲ ಅಂಗಳಕ್ಕಿಳಿದು ದಾಂಧಲೆ ಮಾಡಿದ ಘಟನೆಯೂ ಸಂಭವಿಸಿತು. ಪಿಚ್‌ ಮೇಲೆ ಓಡಾಡಿದ ಇವರನ್ನು ಬಳಿಕ ಭದ್ರತಾ ಸಿಬಂದಿಗಳು ವಶಕ್ಕೆ ತೆಗೆದುಕೊಂಡರು.

ಒಟ್ಟು 142 ರನ್‌ ಮುನ್ನಡೆಯಲ್ಲಿರುವ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಮುನ್ನಡೆಯನ್ನು 300 ರನ್ನಿಗೆ ವಿಸ್ತರಿಸಿದರೂ ಭಾರತಕ್ಕೆ ಚೇಸಿಂಗ್‌ ಕಷ್ಟವಾಗುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದ 286ಕ್ಕೆ ಉತ್ತರವಾಗಿ ತೀವ್ರ ಕುಸಿತ ಕಂಡ ಭಾರತ, ಹಾರ್ದಿಕ್‌ ಪಾಂಡ್ಯ ಅವರ ದಿಟ್ಟ ಆಟದ ನೆರವಿನಿಂದ 209 ರನ್‌ ಗಳಿಸಿತ್ತು. ದ್ವಿತೀಯ ದಿನದಾಟದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ 2 ವಿಕೆಟ್‌ ಕಳೆದುಕೊಂಡು 65 ರನ್‌ ಗಳಿಸಿದೆ. 

ಗಾಯಾಳು ಡೇಲ್‌ ಸ್ಟೇನ್‌ ಸರಣಿಯಿಂದಲೇ  ಔಟ್‌
ಕೇಪ್‌ಟೌನ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್‌ ಪಂದ್ಯದ ದ್ವಿತೀಯ ದಿನದಾಟದ ವೇಳೆ ದಕ್ಷಿಣ ಆಫ್ರಿಕಾದ ವೇಗಿ ಡೇಲ್‌ ಸ್ಟೇನ್‌ ಗಂಭೀರ ಗಾಯಕ್ಕೆ ತುತ್ತಾಗಿದ್ದು, ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇದರೊಂದಿಗೆ ಸರಣಿ ಆರಂಭದಲ್ಲೇ ಆತಿಥೇಯ ತಂಡ ಭಾರೀ ಹೊಡೆತ ಅನುಭವಿಸಿದೆ.

Advertisement

ಸ್ಟೇನ್‌ 18ನೇ ಓವರ್‌ ಎಸೆಯುವ ವೇಳೆ ಎಡಗಾಲಿನ ಹಿಮ್ಮಡಿಗೆ ಗಾಯ ಮಾಡಿಕೊಂಡಿ ದ್ದಾರೆ. ಅನಂತರ ಮೈದಾನಕ್ಕೆ ಇಳಿದಿಲ್ಲ. ಪರೀಕ್ಷೆ ನಡೆಸಿದ ವೈದ್ಯರು 4ರಿಂದ 6 ವಾರ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ಸೂಚಿಸಿದ್ದಾರೆ. ಸುದೀರ್ಘ‌ ಕಾಲದ ಬಳಿಕ ಭಾರತದೆದುರಿನ ಸರಣಿಗಾಗಿ ಆಫ್ರಿಕಾ ತಂಡಕ್ಕೆ ಮರಳಿದ ಸ್ಟೇನ್‌, ಈ ಸರಣಿಯಲ್ಲಿ 2 ದಿನ ಆಡುವುದರೊಳಗಾಗಿ ಹೊರಬಿದ್ದಿರುವುದೊಂದು ವಿಪರ್ಯಾಸ.

ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೇನ್‌ 51 ರನ್ನಿಗೆ 2 ವಿಕೆಟ್‌ ಪಡೆದಿದ್ದರು.

ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌    286
ಭಾರತ ಪ್ರಥಮ ಇನ್ನಿಂಗ್ಸ್‌    209
ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್‌

ಐಡನ್‌ ಮಾರ್ಕ್‌ರಮ್‌    ಸಿ ಭುವಿ ಬಿ ಪಾಂಡ್ಯ    34
ಡೀನ್‌ ಎಲ್ಗರ್‌    ಸಿ ಸಾಹಾ ಬಿ ಪಾಂಡ್ಯ    25
ಕಾಗಿಸೊ ರಬಾಡ    ಬ್ಯಾಟಿಂಗ್‌    2
ಹಾಶಿಮ್‌ ಆಮ್ಲ    ಬ್ಯಾಟಿಂಗ್‌    4

ಇತರ        0
ಒಟ್ಟು  (2 ವಿಕೆಟಿಗೆ)        65
ವಿಕೆಟ್‌ ಪತನ: 1-52, 2-59.

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        6-3-16-0
ಜಸ್‌ಪ್ರೀತ್‌ ಬುಮ್ರಾ        4-0-14-0
ಮೊಹಮ್ಮದ್‌ ಶಮಿ        5-1-15-0
ಹಾರ್ದಿಕ್‌ ಪಾಂಡ್ಯ        4-0-17-2
ಆರ್‌. ಅಶ್ವಿ‌ನ್‌        1-0-3-0 
(ಎರಡನೇ ದಿನದ ಅಂತ್ಯಕ್ಕೆ)

Advertisement

Udayavani is now on Telegram. Click here to join our channel and stay updated with the latest news.

Next