Advertisement

ದೇಶದ ಒಳಿತಿಗಾಗಿ ಮೌನವಾಗಿರುವೆ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌

08:41 PM Oct 29, 2022 | Team Udayavani |

ಇಸ್ಲಾಮಾಬಾದ್‌: “ಮೌನವಾಗಿರುತ್ತೇನೆ. ಪಾಕಿಸ್ತಾನ ಮತ್ತು ಸರ್ಕಾರಿ ಸಂಸ್ಥೆಗಳನ್ನು ಹಾಳು ಮಾಡಲು ಬಯಸುವುದಿಲ್ಲ,’ ಎಂದು ಪಾಕ್‌ ಮಾಜಿ ಪ್ರಧಾನಿ, ತೆಹ್ರೀಕ್‌-ಎ-ಇನ್ಸಾಫ್(ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಹೇಳಿದರು.

Advertisement

ಈ ವರ್ಷದ ಮಾರ್ಚ್‌ನಲ್ಲಿ ರಾಜಕೀಯ ಪ್ರಕ್ಷುಬ್ಧತೆ ವೇಳೆ ತಮ್ಮ ಸರ್ಕಾರವನ್ನು ಬೆಂಬಲಿಸುವಂತೆ ಕೋರಿ ಇಮ್ರಾನ್‌ ಖಾನ್‌ ತಮಗೆ ಲಾಭದಾಯಕ ಕೊಡುಗೆಯ ಪ್ರಸ್ತಾಪ ನೀಡಿದ್ದರು ಎಂದು ಪಾಕಿಸ್ತಾನದ ಐಎಸ್‌ಐ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಾಜ್ವಾ ಅವರ ಹೇಳಿಕೆಗೆ ಪ್ರತಿಯಾಗಿ ಇಮ್ರಾನ್‌ ಈ ಮಾತುಗಳನ್ನಾಡಿದ್ದಾರೆ.

ಅವಧಿ ಪೂರ್ವ ಚುನಾವಣೆಗೆ ಆಗ್ರಹಿಸಿ ಲಾಹೋರ್‌ನಿಂದ ಇಸ್ಲಾಮಾಬಾದ್‌ವರೆಗೆ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆ ಅಂಗವಾಗಿ ಲಾಹೋರ್‌ನ ಪ್ರಸಿದ್ಧ ಲಿಬರ್ಟಿ ಚೌಕದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ಈ ರ್‍ಯಾಲಿಯು ರಾಜಕೀಯ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ. ಬದಲಾಗಿ ನಿಜವಾದ ಸ್ವಾತಂತ್ರ್ಯ ಪಡೆಯಲು. ಎಲ್ಲಾ ನಿರ್ಧಾರಗಳನ್ನು ಪಾಕಿಸ್ತಾನದಲ್ಲಿ ಮಾಡಲಾಗಿದೆ ಹೊರತು ಲಂಡನ್‌ ಅಥವಾ ವಾಷಿಂಗ್ಟನ್‌ನಲ್ಲಿ ಅಲ್ಲ ಎಂದು ಖಚಿತಪಡಿಸಲು,’ ಎಂದರು.

“ಪಾಕಿಸ್ತಾನವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡುವುದೇ ನನ್ನ ಏಕೈಕ ಗುರಿ,’ ಎಂದೂ ಹೇಳಿದರು.

ವಸತಿಗೆ ನಿರ್ಬಂಧ:
ಖಾನ್‌ ನೇತೃತ್ವದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ವಸತಿ ಸೌಕರ್ಯ ಒದಗಿಸದಂತೆ ಹೋಟೆಲ್‌ ಮತ್ತು ಅತಿಥಿ ಗೃಹಗಳನ್ನು ಇಸ್ಲಾಮಾಬಾದ್‌ ಪೊಲೀಸರು ಶನಿವಾರ ನಿರ್ಬಂಧಿಸಿದ್ದಾರೆ. ಇನ್ನೊಂದೆಡೆ, ಪಿಟಿಐ ಪಕ್ಷದ ನಾಯಕರ ಭಾಷಣ ಮತ್ತು ಮೆರವಣಿಗೆಯನ್ನು ನೇರಪ್ರಸಾರ ಮಾಡದಂತೆ ಅಲ್ಲಿನ ದೂರದರ್ಶನ ವಾಹಿನಿಗಳಿಗೆ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು (ಪಿಇಎಂಆರ್‌ಎ)ನಿರ್ದೇಶನ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next