Advertisement

Kalladka: ಹೊಟೇಲ್‌ಗೆ ನುಗ್ಗಿದ ಕಳ್ಳ: ವೀಡಿಯೋ ವೈರಲ್‌

01:17 AM Oct 26, 2024 | Team Udayavani |

ಬಂಟ್ವಾಳ: ಕಲ್ಲಡ್ಕದ ಹೋಟೆಲೊಂದಕ್ಕೆ ಕಳ್ಳನೋರ್ವ ನುಗ್ಗಿ ಸೊತ್ತುಗಳ ಕಳವಿಗಾಗಿ ತಡಕಾಡುತ್ತಿರುವ ಸಿಸಿ ಕೆಮರಾದ ವೀಡಿಯೋ ದೃಶ್ಯ ವೈರಲ್‌ ಆಗಿದ್ದು, ಆದರೆ ಯಾವುದೇ ದೊಡ್ಡ ಮೊತ್ತದ ಸೊತ್ತುಗಳು ಕಳವಾಗಿಲ್ಲ ಎನ್ನಲಾಗಿದೆ.

Advertisement

ಪರಿಚಯ ಸಿಗದಂತೆ ಹೆಲ್ಮೆಟ್‌ ಹಾಕಿಕೊಂಡು ರಾತ್ರಿ ವೇಳೆ ಹೊಟೇಲ್‌ ಒಳಗೆ ನುಗ್ಗಿರುವ ಕಳ್ಳ ಕ್ಯಾಶ್‌ ಕೌಂಟರ್‌ ಬಳಿ ಡ್ರಾಯರ್‌ಗಳನ್ನು ತೆರೆದು ಹುಡುಕಾಡುತ್ತಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಪ್ರಸ್ತುತ ವೀಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ದೊಡ್ಡ ಮೊತ್ತದ ಕಳವು ನಡೆಯದೇ ಇರುವುದರಿಂದ ಈ ಕುರಿತು ದೂರು ದಾಖಲಾಗಿಲ್ಲ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next