Advertisement
ರಂಗ ತರಬೇತಿ ಎಂದ ಕೂಡಲೇ ಕೇವಲ ನಾಟಕವಾಡಲು ಕಲಿಸುವುದಲ್ಲ . ರಂಗಕ್ಕೆ ಬೇಕಾದ ಮನಸ್ಥಿತಿಯನ್ನು ನಿರ್ಮಾಣ ಮಾಡಬೇಕು. ಅದಕ್ಕಾಗಿ ರಂಗದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಪಳಗಿದ ತಜ್ಞರು ದಿನಕ್ಕೊಬ್ಬರಂತೆ ವಿಷಯ ಮಾಹಿತಿ ನೀಡಿದರು. ಸಂಗೀತದ ಬಗ್ಗೆ ಗುರುರಾಜ ಮಾರ್ಪಳ್ಳಿ , ಯಕ್ಷ ಹೆಜ್ಜೆಯ ಬಗ್ಗೆ ಗುರು ಬನ್ನಂಜೆ ಸಂಜೀವ ಸುವರ್ಣ, ಸಂಸ್ಕೃತ ನಾಟಕಗಳ ಬಗ್ಗೆ ಡಾ| ರಾಘವೇಂದ್ರ ರಾವ್, ರಂಗ ಪ್ರಯೋಗಗಳು ಒಳಗೆ -ಹೊರಗೆ ಕುರಿತು ಐ. ಕೆ. ಬೋಳುವಾರು, ಸ್ಯಾಂಸ್ಲವ್‌ಸ್ಕಿ ಮತ್ತು ಬ್ರೆಕ್ಟ್ ಸಿದ್ಧಾಂತದ ಬಗ್ಗೆ ಪಣಿರಾಜ್‌ರವರು , ಅಭಿನಯದ ಬಗ್ಗೆ ಮೇಘ ಸಮೀರರವರು, ಗಾಂಧಿ ಮತ್ತು ಕಾರಂತರ ಬಗ್ಗೆ ಜಿ. ರಾಜಶೇಖರ್ ಮಾತನಾಡಿದರು.
Related Articles
Advertisement
ಪ್ರಜ್ವಲ್ ಕೆ., ಅಭಿಷೇಕ್ ಉಪಾಧ್ಯ ಕೆ., ತ್ರಿವರ್ಣ, ನೇತ್ರಾವತಿ, ದೀಕ್ಷಿತ್ ಸುವರ್ಣ, ಸೊನಾಲಿ, ಕಾರ್ತಿಕ್ ಪ್ರಸಾದ್, ಗೌತಮ್, ಅಜಿತ್ ಭಟ್, ನಾಗೇಶ್ ಶೆಟ್ಟಿ ಮುಂತಾದವರ ನಟನೆ ಮೆಚ್ಚುವಂತಹದ್ದು . ಪುನರ್ವಸು ಉದ್ಯಾವರ ಸಹಕಾರ ನೀಡಿದರು. ಬೆಳಕು ಚೆನ್ನಾಗಿ ಮೂಡಿಬಂತು. ದಿವಾಕರ ಕಟೀಲ್‌ರ ಸಂಗೀತ ನಾಟಕದ ಓಘಕ್ಕೆ ಚೆನ್ನಾಗಿ ಹೊಂದಿಕೆಯಾಯಿತು. ಇಡೀ ನಾಟಕದಲ್ಲಿ ದೃಶ್ಯಗಳು ಬಂದು ಹೋಗುವಾಗ ಹಿನ್ನೆಲೆ ಸಂಗೀತ ಮತ್ತು ಬೆಳಕಿನ ಸಂಯೋಜನೆ ಪೂರಕವಾಗಿದ್ದು , ವಸ್ತ್ರ ವಿನ್ಯಾಸವೂ ತುಂಬಾ ಸರಳವಾಗಿತ್ತು. ಸಮರ್ಥ ನಿರ್ದೇಶನ ನಾಟಕ ಗೆಲುವಿನ ಮುಖ್ಯ ಕಾರಣವಾಗಿತ್ತು. ಅದಕ್ಕಾಗಿ ಸಂತೋಷ್ ನಾಯಕ್ ಪಟ್ಲ ಅವರನ್ನು ಅಭಿನಂದಿಸಬೇಕು.
ಯುವ ರಂಗ ತರಬೇತಿ ಶಿಬಿರದ ಗೆಲುವಿಗೆ ರಥಬೀದಿ ಗೆಳೆಯರಾದ ಪ್ರೊ| ಮುರಳೀಧರ ಉಪಾಧ್ಯಾಯ, ಪ್ರೊ| ಸುಬ್ರಹ್ಮಣ್ಯ ಜೋಷಿ, ಉದ್ಯಾವರ ನಾಗೇಶ್ ಕುಮಾರ್ ಮತ್ತು ಸಂತೋಷ್ ಕುಮಾರ್ ಶೆಟ್ಟಿ ಹಿರಿಯಡಕ ಸಹಕರಿಸಿದರು.
ಜಯರಾಂ ನೀಲಾವರ