Advertisement

ಜವಳಿ ಕ್ಷೇತ್ರ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲು ಆಗ್ರಹ

03:18 PM Jul 07, 2017 | Team Udayavani |

ಕಲಬುರಗಿ: ಜವಳಿ ವ್ಯಾಪಾರದ ಮೇಲೆ ಶೇಕಡಾ 5ರಷ್ಟು ಸರಕು ಸೇವಾ ತೆರಿಗೆ ವಿಧಿಸುವುದನ್ನು ವಿರೋಧಿಸಿ ಗುರುವಾರ ಸ್ಥಳೀಯ ಬಟ್ಟೆ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವರ್ತಕರು ಸೂಪರ್‌ ಮಾರ್ಕೆಟ್‌ ಕಿರಣಾ ಬಜಾರ್‌ ಚೌಕ್‌ ಠಾಣೆ ವೃತ್ತದಿಂದ ಜಿಲ್ಲಾ ಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಕೇಂದ್ರ ಸರ್ಕಾರವು ದೇಶದಲ್ಲಿ ಏಕರೂಪದ ಸರಕು ಸೇವಾ ತೆರಿಗೆಯನ್ನು ಜವಳಿ ಕ್ಷೇತ್ರದ ವ್ಯಾಪ್ತಿಗೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಒಂದೇ ದೇಶ, ಒಂದೇ ತೆರಿಗೆ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ಆದಾಗ್ಯೂ, ಜವಳಿ ಕ್ಷೇತ್ರವು ಈಗಾಗಲೇ ಸಾಕಷ್ಟು
ಸಂಕಷ್ಟ ಸ್ಥಿತಿಯಲ್ಲಿದೆ. ಏಕರೂಪ ಸೇವಾ ತೆರಿಗೆಯಿಂದ ಶೇಕಡಾ 5ರಷ್ಟು ಸೇವಾ ತೆರಿಗೆಯ ಭಾರ ಜವಳಿ ಕ್ಷೇತ್ರಕ್ಕೆ ಬೀಳಲಿದೆ. ಈ ಹೊರೆ ಜನ ಸಾಮಾನ್ಯರ ಮೇಲೆ ಆಗಲಿದೆ. ಆದ್ದರಿಂದ ಕೂಡಲೇ ಜವಳಿ ಕ್ಷೇತ್ರವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು
ಒತ್ತಾಯಿಸಿದರು.

ಜಿಡಿಪಿಗೆ ಜವಳಿ ವಲಯದಿಂದ ಶೇಕಡಾ 4ರಷ್ಟು ಕೊಡುಗೆ ಇದೆ. ಆದಾಗ್ಯೂ, ಉದ್ಯಮದ ಹಿತ ಕಾಪಾಡಲು ಮತ್ತು ಗ್ರಾಹಕರ
ಅನುಕೂಲಕ್ಕಾಗಿ ಈ ಕ್ಷೇತ್ರಕ್ಕೆ ತೆರಿಗೆ ಬೇಡ ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಅರವಿಂದ ಮೈಲಾಪೂರ, ಕಾರ್ಯಾಧ್ಯಕ್ಷ ಗಂಗಾಭಿಷಣ ಸೋಮಾಣಿ, ಮಾಜಿ ಅಧ್ಯಕ್ಷ ನಾಗುಸಾ ಚವ್ಹಾಣ, ಉಪಾಧ್ಯಕ್ಷ ಸೂರ್ಯಪ್ರಕಾಶ ಸಾಂಘಿ, ಕಾರ್ಯದರ್ಶಿ ಆನಂದ ದಂಡೋತಿ, ಜಂಟಿ ಕಾರ್ಯದರ್ಶಿ ವಿಶ್ವನಾಥ ಚಿಂಚಪೂರ್‌, ಖಜಾಂಚಿ ಇಕಬಾಲ್‌ ಮುಚಾಲೆ, ವ್ಯವಸ್ಥಾಪಕ
ಮಂಡಳಿಯ ಸದಸ್ಯರಾದ ದಶರಥ ರಂಗದಾಳೆ, ಫಾರೂಕ್‌ ಅಹ್ಮದ್‌ ಮುಲ್ಲಾನ್‌, ಜಗಮೋಹನ ಬಾಸುಡೆ ಮುಂತಾದವರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next