Advertisement

ಉಗ್ರರು ದೈಹಿಕ ಹಿಂಸೆ ನೀಡಿರಲಿಲ್ಲ: ಪಾದ್ರಿ ಟಾಮ್‌

09:05 AM Sep 17, 2017 | Team Udayavani |

ವ್ಯಾಟಿಕನ್‌ ಸಿಟಿ: “ಒತ್ತೆಯ ಸಂದರ್ಭದಲ್ಲಿ ನನಗೆ ಯಾರೂ ಯಾವ ರೀತಿಯ ದೈಹಿಕ ಹಿಂಸೆಯನ್ನೂ ನೀಡಿಲ್ಲ’ ಎಂದು ಯೆಮೆನ್‌ನಲ್ಲಿ 18 ತಿಂಗಳ ಕಾಲ ಐಸಿಸ್‌ ಉಗ್ರರ ಒತ್ತೆಯಲ್ಲಿದ್ದು ಬಿಡುಗಡೆಯಾದ ಬೆಂಗಳೂರಿನ ಪಾದ್ರಿ ಟಾಮ್‌ ಉಳುನ್ನಲಿಲ್‌ ಹೇಳಿದ್ದಾರೆ. ಶನಿವಾರ ವ್ಯಾಟಿಕನ್‌ ಸಿಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫಾದರ್‌ ಟಾಮ್‌, “ಅವರು ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ನನ್ನನ್ನು ಹಿಂಸಿಸುತ್ತಿರುವಂತೆ ತೋರಿಸಿದ್ದರು. ಆದರೆ, ನನ್ನ ಮೇಲೆ ಯಾವುದೇ ದೈಹಿಕ ಹಿಂಸೆ ನಡೆದಿಲ್ಲ. ಅವರಿಗೆ ಹಣ ಬೇಕಾಗಿತ್ತು. ಸರ್ಕಾರಕ್ಕೆ ಒತ್ತಡ ತರಬೇಕೆಂದು ತಿರುಚಿದ ವಿಡಿಯೋ ಸಿದ್ಧಪಡಿಸುತ್ತಿ ದ್ದರು. ನನ್ನ ಮಧುಮೇಹ ರೋಗಕ್ಕೆ ಅಗತ್ಯವಾದ ಔಷಧಗಳನ್ನೂ ನೀಡು ತ್ತಿದ್ದರು. ನನ್ನ ಎಲ್ಲ ಮೂಲ ಅಗತ್ಯಗಳನ್ನು ಪೂರೈಸುತ್ತಿದ್ದರು. ಆದರೆ, ಅವರ್ಯಾರೂ ನನ್ನ ಮುಂದೆ ಮುಖ ತೋರಿಸುತ್ತಿರಲಿಲ್ಲ. ಯಾವಾಗಲೂ ಮುಖವನ್ನು ಬಟ್ಟೆಯಿಂದ ಮುಚ್ಚಿರುತ್ತಿದ್ದರು’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next