Advertisement

ಕೆಆರ್‌ಎಸ್‌ ಹಿನ್ನೀರಿನಲ್ಲಿ ದೇಗುಲಗಳು ಗೋಚರ

11:12 AM May 02, 2019 | Suhan S |

ಶ್ರೀರಂಗಪಟ್ಟಣ: ನೂರಾರು ವರ್ಷಗಳ ಹಿಂದೆ ಜಲಾಶಯ ನಿರ್ಮಾಣ ಹಂತದ ಹಿನ್ನೀರಿನಲ್ಲಿ ಮುಳುಗಿದ್ದ ದೇವಾಲಯಗಳು ಈಗ ನೀರು ಕಡಿಮೆಯಾದಂತೆ ಒಂದೊಂದಾಗಿ ಗೋಚರಿಸುತ್ತಿದ್ದು, ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿವೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಸಿಲ ಬೇಗೆ ಹೆಚ್ಚಾಗಿ ನೀರು ಆವಿಯಾಗುತ್ತಿದ್ದು, ದಿನೇ ದಿನೆ ಕೆಆರ್‌ಎಸ್‌ ಜಲಾಶಯದ ಲ್ಲಿ ನೀರು ಕುಸಿಯುತ್ತಿದಂತೆ ಹಿನ್ನೀರಿನಲ್ಲಿ ಮುಳುಗಿದ್ದ ದೇವಾಲಯ ಸೇರಿದಂತೆ ಇತರ ದ್ವೀಪಗಳು ಗೋಚರಿಸುವುದು ಸಾಮಾನ್ಯವಾಗಿದ್ದರೂ, ಜಲಾಶಯ ವೀಕ್ಷಣೆಗೆ ಬಂದ ಪ್ರವಾಸಿ ಗರಿಗೆ ಈ ಪಾಳು ಬಿದ್ದ ದೇವಾಲಯಗಳ ಮಂಟಪ, ಮುರಿದ ವಿಗ್ರಹ, ಕಲ್ಲಿನ ಚಿತ್ರಕಲೆ, ಕೆತ್ತನೆಗಳ‌ ಬಳಿ ಕುಳಿತುಕೊಳ್ಳಲು ಹಾಗೂ ವೀಕ್ಷಣೆ ಖುಷಿ ನೀಡಿದೆ.

ಮರುಕಳಿಸಿದ ಇತಿಹಾಸ: ಜಲಾಶಯದ ಒಟ್ಟು ನೀರಿನ ಮಟ್ಟ 124.80 ಅಡಿಗಳು ತುಂಬಿದ ಸಂದರ್ಭದಲ್ಲಿ ಈ ಭಾಗದ ಹಿನ್ನೀರಿನಲ್ಲಿ ಯಾವುದೇ ದ್ವೀಪಗಳು, ದೇವಾಲಯಗಳಿದ್ದರೂ ಯಾವುದೂ ಗೋಚರವಾಗುವುದಿಲ್ಲ. ಹಿನ್ನೀರಿನ ಭಾಗ ಒಂದು ಸಮತಟ್ಟಾಗಿ ಸಮುದ್ರದಂತೆ ಕಾಣುತ್ತದೆ. 100 ಅಡಿಗಿಂತ ಕಡಿಮೆಯಾದಂತೆ ಈ ಹಿಂದೆ ಕೆಆರ್‌ಎಸ್‌ ಜಲಾಶಯದ ನಿರ್ಮಾಣ ಮಾಡುವಾಗ ಕೆಲವು ಗ್ರಾಮಗಳು, ಪ್ರಸಿದ್ಧ ದೇವಾಲಯಗಳು ಮುಳುಗಿರುವ ಹಿಂದಿನ ಇತಿಹಾಸ ಕಂಡು ಬಂದಿವೆ.

ಪ್ರವಾಸಿಗರಿಗೆ ಖುಷಿ; ಕೆಆರ್‌ ಎಸ್‌ ಜಲಾಶಯ ವೀಕ್ಷಣೆಗೆ ಬಂದ ಪ್ರವಾಸಿಗರೂ ಹಿನ್ನೀರಿನ ಪ್ರದೇಶಕ್ಕೆ ಪ್ರತಿ ದಿನ ಆಗಮಿಸುತ್ತಿದ್ದಾರೆ. ಹಿನ್ನೀರಿನಲ್ಲಿ ಆಟವಾಡುವುದು, ಜಲಾಶಯದಿಂದ ಹೊರ ಕಾಣಿಸುವ ದೇವಾಲಯದ ಮಂಟಪದ ಬಳಿ ಕುಳಿತುಕೊಳ್ಳುತ್ತಿದ್ದಾರೆ. ಅಲ್ಲದೇ, ಊಟ ಮಾಡಿ ಸೊಬಗನ್ನು ಸವಿಯುತ್ತಾ ಮೊಬೈಲ್ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಸ್ಥಳಾಂತರ: ಜಲಾಶಯದಲ್ಲಿ 70 ಅಡಿಗಿಂತ ಕಡಿಮೆ ನೀರು ಇದ್ದ ಸಂದರ್ಭದಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಕಂಡು ಬಂದಿತ್ತು. ಆ ದೇವಾಲಯ ದೊಡ್ಡದಾಗಿ ವಿಶೇಷವಾಗಿತ್ತು.

Advertisement

ಅದನ್ನು ಕಳೆದ 8 ವರ್ಷಗಳ ಹಿಂದೆ ಕಡಿಮೆ ನೀರಿದ್ದ ವೇಳೆ ಭಕ್ತರೊಬ್ಬರು ದೇವಾಲಯದ ಅವ ಶೇಷಗಳನ್ನು ಹಿನ್ನೀರಿನಿಂದ ಹೊರ ತಂದು ಕಟ್ಟೇರಿ ಗ್ರಾಮದ ಬಳಿ ಪ್ರಸ್ತುತ ಸ್ಥಾಪಿಸಿದ್ದಾರೆ. ಈಗಲೂ ಈ ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಒಂದು ವೇಳೆ ಮಳೆಗಾಲ ಪ್ರಾರಂಭ ವಾಗದೆ ಇದೇ ಬಿಸಿಲ ಝಳಕ್ಕೆ ನೀರು ಇನ್ನು ಕಡಿಮೆಯಾದರೆ ಇನ್ನು ಹಲವು ದೇವಾಲಯಗಳು ಗೋಚರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಕೆಆರ್‌ಎಸ್‌ನಲ್ಲಿ 87.22 ಅಡಿ ನೀರು:

ಪ್ರಸ್ತುತ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 87.22 ಅಡಿ ನೀರಿದ್ದು ಈಗ ಕೆಲವು ದೇವಾಲಯಗಳು ಗೋಚರಿಸುತ್ತಿವೆ. ಶ್ರಿಲಕ್ಷ್ಮಿ ನಾರಾಯಣ ದೇವಾಲಯ, ಶ್ರೀಸುಬ್ರಮಣ್ಯ ಸ್ವಾಮಿ ದೇವಾಲಯ, ವೇಣುಗೋಪಾಲ ಸ್ವಾಮಿ ದೇವಾಲಯ ಹೀಗೆ ಹಲವು ದೇವಾಲಯಗಳು ಕಾಣಿಸಿಕೊಳ್ಳುತ್ತಿವೆ. ಪ್ರಸ್ತುತ ಬೇಸಿಗೆ ಕಾಲವಾದ್ದ ರಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕುಸಿದಿದೆ. ನೀರಿನ ಮಟ್ಟ ಕುಸಿಯಲಾರಂಭಿಸಿದ್ದ ರಿಂದ ದೇವಾಲಯಗಳು ಗೋಚರಿಸುತ್ತಿವೆ.
Advertisement

Udayavani is now on Telegram. Click here to join our channel and stay updated with the latest news.

Next