Advertisement

ಮಕ್ಕಳ ಮನಸ್ಸು ಅರಳಿಸುವ ಕಾರ್ಯ ಅಭಿನಂದನೀಯ 

12:27 PM Feb 25, 2017 | |

ಕುಂದಾಪುರ:  ನರ್ಸರಿ, ಪೂರ್ವ ಪ್ರಾಥಮಿಕ ಶಾಲೆಗಳು ಮಕ್ಕಳ ಮನಸ್ಸನ್ನು ಅರಳಿಸುವ ತಾಣವಾಗಬೇಕು. ಶಿಕ್ಷಣದ ಜಗತ್ತು ತೆರೆದುಕೊಳ್ಳುವ ಮೊದಲು ಮಗುವಿನ ಮನಸ್ಸು ತೆರೆದುಕೊಳ್ಳಬೇಕು. ಅಂತಹ ಪರಿಸರವನ್ನು  ಸೃಷ್ಟಿಸಿರುವ ಇಂತಹ ಶಾಲೆಗಳು ಅಭಿನಂದನೆಗೆ ಅರ್ಹ ಎಂದು ಶಿಕ್ಷಣ ತಜ್ಞ  ಶ್ರೀಪತಿ ಹೇಳೆì ಹೇಳಿದರು.

Advertisement

ಅವರು ಕೋಟೇಶ್ವರದ ಕೆನರಾ ಕಿಡ್ಸ್‌ ಶಾಲೆಯ ವಠಾರದಲ್ಲಿ ನಡೆದ ಕ್ಯಾನ್‌ ಕಿಡ್ಸ್‌ ಡೇ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಣ ಸಂಸ್ಥೆಯ ಸಂಚಾಲಕಿ ವಿನಂತಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು.

ಶಾಲಾ ಶಿಕ್ಷಣ ನಿರ್ದೇಶಕಿ ರಜನಿ ಉಪಾಧ್ಯ ವರದಿ ವಾಚಿಸಿದರು. ಸವಿತಾ ಆರ್‌ ಐತಾಳ್‌ ಉಪಸ್ಥಿತರಿದ್ದರು. ಶಿಕ್ಷಕಿ ಸುಜಾತಾ ಶೆಟ್ಟಿ ವಂದಿಸಿದರು.ಕಾರ್ಯಕ್ರಮದ ಅನಂತರ ಮುದ್ದು ಮಕ್ಕಳ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next