ಆಗಿದ್ದರಿಂದ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ವಿವಿಧ ಬೆಳೆ ಬಿತ್ತನೆಯಲ್ಲಿ ತೊಡಗಿರುವ ರೈತರಿಗೆ ಕೃಷಿ ಕಾರ್ಮಿಕರ ಸಮಸ್ಯೆ ಎದುರಾಗಿದೆ.
Advertisement
ಮುದಗಲ್ಲ ಹೋಬಳಿ ವ್ಯಾಪ್ತಿಯ ನಾಗಲಾಪುರ, ಕನ್ನಾಳ, ತಿಮ್ಮಾಪುರ, ಜಕ್ಕರಮಡು, ಹಡಗಲಿ, ದೇಸಾಯಿ ಭೋಗಾಪುರ, ವ್ಯಾಸನಂದಿಹಾಳ, ಮಟ್ಟೂರ, ಬುದ್ದಿನ್ನಿ, ಆಶಿಹಾಳ, ಲೆಕ್ಕಿಹಾಳ, ಆಮದಿಹಾಳ, ನಾಗರಾಳ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ರೈತರು ವಿವಿಧ ಬೀಜಗಳ ಬಿತ್ತನೆಯಲ್ಲಿ ತೊಡಗಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಮೃಗಶಿರಾ ಮಳೆ ಆಗಿದ್ದಿಲ್ಲ. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆ ಸುರಿದಿದ್ದು, ಸಕಾಲದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಸಜ್ಜೆ, ಸೂರ್ಯಕಾಂತಿ, ಹೆಸರು, ತೊಗರಿ, ಹತ್ತಿ, ಅಲಸಂದಿ ಬೀಜಗಳ
ಬಿತ್ತನೆಗೆ ಭೂಮಿ ಹದವಾಗಿದೆ ಎಂದು ಕನ್ನಾಳ ಗ್ರಾಮದ ರೈತ ಹನುಮಂತ ತಿಳಿಸಿದ್ದಾರೆ.
ಎದುರಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ನಾಗರಹಾಳ, ನಾಗಲಾಪುರ, ಆಮದಿಹಾಳ, ಆಶಿಹಾಳ, ಖೈರವಾಡಗಿ, ಕನ್ನಾಳ, ಹಡಗಲಿ, ಛತ್ತರ, ಮರಳಿ, ಹುನೂರ ಸೇರಿದಂತೆ ಮುದಗಲ್ಲ ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಈರುಳ್ಳಿ ಸಸಿ ನಾಟಿ ಮಾಡಲು ಮುಂದಾಗಿರವ ರೈತರು ಮಹಿಳಾ ಕೂಲಿ ಆಳುಗಳಿಗಾಗಿ ಊರಿಂದೂರಿಗೆ ಹುಡುಕಾಟ ನಡೆಸಿದ್ದಾರೆ.
Related Articles
ಬೆಂಗಳೂರ, ಉಡುಪಿ, ಮಂಗಳೂರ, ಕಾರವಾರ ನಗರಗಳಿಗೆ ಗುಳೆ ಹೋಗಿದ್ದರಿಂದ ಕೂಲಿಕಾರರ ಸಮಸ್ಯೆ ಎದುರಾಗಿದೆ. ದಿನಕ್ಕೆ 100ರಿಂದ 150 ಮಹಿಳೆಯರಿಗೆ, 150ರಿಂದ 200 ರೂ. ಪುರುಷರಿಗೆ ಕೂಲಿ ನೀಡಿದರೂ ಈರುಳ್ಳಿ ಸಸಿ ನಾಟಿ ಮಾಡುವ ಕೆಲಸಕ್ಕೆ ಯಾರು ಸಿಗುತ್ತಿಲ್ಲ ಎಂದುಆಮದಿಹಾಳ ಗ್ರಾಮದ ರೈತರಾದ ಹುಲಿಗಪ್ಪ, ದುರುಗಪ್ಪ, ಗದ್ದೆಪ್ಪ ತಿಳಿಸಿದ್ದಾರೆ.
Advertisement
ಮುದಗಲ್ಲ ಹೋಬಳಿ ವ್ಯಾಪ್ತಿಯಲ್ಲಿ 50 ಹಳ್ಳಿಗಳು ಬರುತ್ತಿದ್ದು, ಒಟ್ಟು 17,171.82 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ರೈತರಿಗೆ ಬೇಕಾಗುವ ಸೂರ್ಯಕಾಂತಿ, ತೊಗರಿ, ಸಜ್ಜೆ, ಹೆಸರು, ಅಲಸಂದಿ ಬೀಜಸೇರಿದಂತೆ ರಸಗೊಬ್ಬರ, ಸಾವಯವ ಗೊಬ್ಬರ ಸಂಗ್ರಹವಿದೆ. ರೈತರು ರೈತ ಸಂಪರ್ಕ ಕೇಂದ್ರಗಳಿಂದ ಬೀಜ, ರಸಗೊಬ್ಬರ ಪಡೆಯಬಹುದು.
ವೆಂಕಟೇಶ ಕುಲಕರ್ಣಿ, ಕೃಷಿ ಅಧಿಕಾರಿ, ಮುದಗ