ಚಿಕ್ಕನಾಯಕನಹಳ್ಳಿ: ಪಟ್ಟಣದ ಬಹುತೇಕ ನೀರಿನ ಸಮಸ್ಯೆಗಳನ್ನು ಖಾಸಗಿ ಟ್ಯಾಂಕರ್‌ಗಳು ನೀಗಿಸುತ್ತಿದೆ. ಟ್ಯಾಂಕ್‌ಗಳಿಗೆ ನೀರು ತುಂಬುತ್ತಿದ್ದ ಬೋರ್‌ವೇಲ್ಗಳಿಗೆ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಪಟ್ಟಣದ ಜನತೆ ನೀರಿಗಾಗಿ ಪರದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಟ್ಯಾಂಕರ್ ನೀರಿನ ಬೆಲೆ ಹೆಚ್ಚಾಗುವ ಜೊತೆಗೆ ಪಟ್ಟಣದಲ್ಲಿ ನೀರಿಗಾಗಿ ಮತ್ತೂಷ್ಟು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಪಟ್ಟಣದಲ್ಲಿ ಸುಮಾರು 25ರಿಂದ 30 ಟ್ಯಾಂಕರ್‌ಗಳು ದಿನನಿತ್ಯ ಮನೆ, ಹೋಟಲ್, ಕಟ್ಟಡ ಕಾಮಾಗಾರಿಗಳಿಗೆ ಹಾಗೂ ತೋಟಗಳಿಗೆ ನೀರನ್ನು ಸರಬರಾಜು ಮಾಡುತ್ತಿದೆ. ವಿದ್ಯುತ್ ಇಲಾಖೆಯಿಂದ ಬೋರ್‌ವೇಲ್ಗಳಿಗೆ 3ರಿಂದ 4 ಗಂಟೆಗಳು ಮಾತ್ರ ವಿದ್ಯುತ್ ಸಂಪರ್ಕ ನೀಡುತ್ತಿರುವುದು ಖಾಸಗಿ ಟ್ಯಾಂಕರ್‌ಗಳಿಗೆ ನೀರನ್ನು ತುಂಬಿಸಲು ಅಸಾಧ್ಯವಾಗಿದೆ. ಪಟ್ಟಣಕ್ಕೆ ನೀರಿನ ಪೂರೈಕೆ ಪ್ರಮಾಣ ಕುಸಿಯುತ್ತಿದ್ದು, ಟ್ಯಾಂಕರ್ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
ಒಂದು ಟ್ಯಾಂಕ್‌ಗೆ 300 ರಿಂದ 400: ಪಟ್ಟಣದಲ್ಲಿ ಖಾಸಗಿ ಟ್ಯಾಂಕರ್‌ಗಳಿಗೆ ಅಧಿಕೃತವಾಗಿ ಮೂರು- ನಾಲ್ಕು ಬೋರ್‌ವೇಲ್ಗಳಲ್ಲಿ ನೀರನ್ನು ತುಂಬಿಸುತ್ತಿದ್ದು, ಒಂದು ಟ್ಯಾಂಕರ್ ನೀರು ತುಂಬಲು 100ರಿಂದ 150 ರೂ.ಗಳನ್ನು ಪಡೆಯುತ್ತಿದೆ. ಅದೇ ಟ್ಯಾಂಕರ್‌ನ್ನು ಪಟ್ಟಣದಲ್ಲಿ 300- 400 ರೂ.ಗಳಿಗೆ ನೀಡಲಾಗುತ್ತಿದೆ.
ಮಳೆ ಬಾರದಿದ್ದರೆ ನೀರಿ ಪರದಾಟ: ಪಟ್ಟಣದಲ್ಲಿ 23ವಾರ್ಡ್ ಗಳಲ್ಲಿ ಸುಮಾರು 20 ಸಾವಿರ ಜನರಿದ್ದು, ಬಹುತೇಕ ವಾರ್ಡ್ ಗಳಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಪುರಸಭೆ ನಲ್ಲಿಗಳಲ್ಲಿ ತಿಂಗಳು ಕಳೆದರು ನೀರು ಬಾರದೆ ಹಾಹಾಕಾರ ಸೃಷ್ಟಿ ಯಾಗಿದೆ. ಕೊಳವೆ ಬಾವಿಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಳೆ ಬಾರದಿದ್ದರೆ ಪಟ್ಟಣದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
ಪಟ್ಟಣಕ್ಕೆ ಪುರಸಭೆ ನೀರು ಕಲ್ಪಿಸಲಿ: ಪುರಸಭೆ ವ್ಯಾಪ್ತಿಯಲ್ಲಿನ ಮನೆಗಳಿಗೆ 15ರಿಂದ 20 ದಿನಗಳು ಕಳೆದರು ನೀರು ಬಿಡುತ್ತಿಲ್ಲ. ಹನಿ ನೀರಿಗಾಗಿ ಬಹುತೇಕ ಜನರು ರಾತ್ರಿಯಾದರು ನೀರನ್ನು ಸಂಗ್ರಹಿಸುವುದು ಸಮಾನ್ಯವಾಗಿದೆ. ಪುರಸಭೆ ಅಧಿಕಾರಿಗಳು ಮುಂದೆ ಬರುವ ನೀರಿನ ಸಮಸ್ಯೆಗಳ ಬಗ್ಗೆ ಮುಂಜಾಗೃತ ಕ್ರಮ ವಹಿಸಬೇಕಾಗಿದೆ. ಇಲ್ಲವಾದರೇ ಕಳೆದ ವರ್ಷ ನಡೆದ ನೀರಿನ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ.
● ಚೇತನ್ ಪ್ರಸಾದ್