Advertisement

ಕಿಷ್ಕಿಂಧೆ ಬಳಿಯ ಅತೀ ಎತ್ತರದ ಹನುಮಾನ್ ಮೂರ್ತಿ ಶಿಲೆಗಳಿಗೆ ಪೇಜಾವರ ಶ್ರೀಗಳಿಂದ ಪೂಜೆ !

08:26 PM Nov 20, 2020 | Mithun PG |

ಗಂಗಾವತಿ: ಐತಿಹಾಸಿಕ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಹತ್ತಿರ ಚಿಕ್ಕರಾಂಪೂರ ಬಳಿ ನೂತನ ಹನುಮದ್ ಜನ್ಮಭೂಮಿ ಟ್ರಸ್ಟ್‌ ಸ್ಥಾಪಿಸಲುದ್ದೇಶಿಸಿರುವ 215 ಅಡಿ ಎತ್ತರದ ಹನುಮಾನ್ ಮೂರ್ತಿಯ ಶಿಲೆಗಳಿಗೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಶುಕ್ರವಾರ ಪೂಜೆ ನೆರವೇರಿಸಿದರು.

Advertisement

ಈ ವೇಳೆ ಅವರು ಮಾತನಾಡಿ, ಕಿಷ್ಕಿಂದಾ ಪ್ರದೇಶ ಪವಿತ್ರ ಭೂಮಿಯಾಗಿದೆ. ಪ್ರಭು ಶ್ರೀರಾಮ, ಲಕ್ಷ್ಮಣ, ಆಂಜನೇಯ ನಡೆದಾಡಿದ ಸ್ಥಳವಾಗಿದೆ. ಪ್ರತಿಯೊಬ್ಬರು ಇಲ್ಲಿಗೆ ಆಗಮಿಸಬೇಕು. ಶ್ರೀ ಹನುಮದ್ ಜನ್ಮಭೂಮಿ ಟ್ರಸ್ಟ್ 215 ಅಡಿ ಎತ್ತರ ಆಂಜನೇಯ ನ ಮೂರ್ತಿ ಸ್ಥಾಪನೆ ಯೋಜನೆ ರೂಪಿಸಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನು ರೀತಿ ಅವಕಾಶ ಕಲ್ಪಿಸಿ ಸಹಕರಿಸುವಂತೆ ಪೂಜ್ಯರು ಹೇಳಿದರು.

ಹನುಮದ್ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಗೋವಿಂದ ಸರಸ್ವತಿ ಸ್ವಾಮೀಜಿ ಸೇರಿದಂತೆ  ಸ್ಥಳೀಯರು ಈ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ: ತುಂಗಭದ್ರಾ ಪುಷ್ಕರಣೋತ್ಸವ: ಪಂಡಿತರ ಆಗಮನ; ಯಶಸ್ವಿ ತುಂಗಭದ್ರಾರತಿ !

Advertisement

Advertisement

Udayavani is now on Telegram. Click here to join our channel and stay updated with the latest news.

Next