Advertisement
ಮಾತು ಬೆಳ್ಳಿ, ಮೌನ ಬಂಗಾರ, ಮಾತೇ ಮುತ್ತು..ಮಾತೇ ಮೃತ್ಯು, ನುಡಿದರೆ ಮುತ್ತಿನ ಹಾರದಂತಿರಬೇಕು.. ಹೀಗೆಯೇ ಮಾತಿನ ಬಗ್ಗೆಯೇ ಅದೆಷ್ಟೊಂದು ಮಾತುಗಳಿವೆ! ನಾವು ಹೆಣ್ಣುಮಕ್ಕಳು… ಮೊದಲೇ ಮಾತು ಜಾಸ್ತಿ. “ಮಾತು ಬೆಳ್ಳಿ…’, “ಮಾತೇ ಮೃತ್ಯು…’ ಎಂಬಂಥ ಹಿರಿಯರ ಕಿವಿಮಾತುಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಒಳ್ಳೆಯದು. ಎಷ್ಟೋ ಸಲ, ಗೊತ್ತಿದ್ದೂ ತಪ್ಪು ಮಾಡಿಬಿಡುತ್ತೇವೆ. ಕೊಂಚ ಯೋಚಿಸಿ…ಸಮಯ ಸಂದರ್ಭ ನೋಡಿಕೊಂಡು ಮಾತಾಡುವುದು ನಿಜಕ್ಕೂ ಒಳ್ಳೆಯದು. ಮಾತು ಆಡಿದರೆ ಹೋಯಿತು.. ಮುತ್ತು ಒಡೆದರೆ ಹೋಯಿತು..ಎಂಬಂತೆ ಕೊನೆಗೆ ಪಶ್ಚಾತ್ತಾಪಪಟ್ಟರೆ ಪ್ರಯೋಜನವಿಲ್ಲ.
Related Articles
Advertisement
ಇನ್ನೊಂದು ಸಂದರ್ಭದಲ್ಲಿ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗೆಳತಿಯನ್ನು ನೋಡಲು ಹೋಗಿದ್ದೆ. ಅವರಿಗೆ ಕೊನೆಯ ಹಂತದ ಕ್ಯಾನ್ಸರ್ ಇತ್ತು. ಹೆಚ್ಚು ದಿನ ಉಳಿಯಲಾರರೆಂದು ವೈದ್ಯರು ಹೇಳಿದ್ದರು. ಆಕೆಯ ಬಂಧುಗಳೊಬ್ಬರು ಅವರನ್ನು ನೋಡಲು ಬಂದವರು, “ಕ್ಯಾನ್ಸರ್‌ನಿಂದ ತೀರಿಕೊಂಡವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ. ಹಾಗಾಗಿ ಇಲ್ಲಿಗೆ ಬರುವುದು ತಡವಾಯಿತು’ ಎಂದುಬಿಟ್ಟರು!
ಈ ಮಾತು ಕೇಳಿದ್ದೇ ತಡ, ಆ ಗೆಳತಿಯ ಮುಖ ಕಂದಿಹೋಯಿತು! ಹೇಳಿದಾಕೆಗೂ, ಆನಂತರ ತಮ್ಮ ತಪ್ಪಿನ ಅರಿವಾಯಿತು. ಆದರೇನು ಮಾಡುವುದು, ಕಾಲ ಮಿಂಚಿ ಹೋಗಿತ್ತು. ಸಾವಿನ ನಿರೀಕ್ಷೆಯಲ್ಲಿ ಇರುವವರನ್ನು ಇಂಥ ಮಾತುಗಳು ಮತ್ತಷ್ಟು ಜರ್ಜರಿತಗೊಳಿಸುತ್ತವೆ. ಆದ್ದರಿಂದ, ನಾವು ಮಾತಾಡುವ ಸಂದರ್ಭ, ವ್ಯಕ್ತಿ ಎಲ್ಲವನ್ನೂ ಗಮನಿಸಿ ಹತ್ತು ಬಾರಿ ಯೋಚಿಸಿದ ನಂತರವೇ ಮಾತಾಡಬೇಕು.
“ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ’ ಎಂದಿ¨ªಾರೆ ನಮ್ಮ ಹಿರಿಯರು. ಅದು ಒಂದೇ ದಿನಕ್ಕೆ ಸೀಮಿತವಾಗಬಾರದು. ಅನವರತವೂ ಜಾರಿಯಲ್ಲಿದ್ದರೆ, ಎಲ್ಲರ ಆರೋಗ್ಯಕ್ಕೂ ಒಳ್ಳೆಯದು!
-ಸುಮನಾ ಮಂಜುನಾಥ್