Advertisement

ಕೊಂಕಣಿ ರಂಗಭೂಮಿಯ  ಪ್ರತಿಭಾವಂತ ಕಲಾವಿದೆ

02:18 PM Dec 01, 2017 | Team Udayavani |

ಮೂಲತಃ ಕುಂದಾಪುರ ತಾಲೂಕಿನ ಹಾಲಾಡಿಯಿಂದ ಮುಂಬೈಗೆ ಆಗಮಿಸಿದ ಅದ್ವಿತೀಯ ಕಲಾವಿದೆ ವಸುಧಾ ಪ್ರಭು ಅವರು ಮುಂಬಯಿಯ ಕೊಂಕಣಿ ನಾಟಕ ರಂಗದಲ್ಲಿ  ಹಲವು ವರ್ಷಗಳಿಂದ ಅಭಿನಯಿಸುತ್ತಾ ತಾನೋರ್ವ ಪ್ರಬುದ್ಧ ಕಲಾವಿದೆ ಎಂಬುದನ್ನು  ಸಾಬೀತುಪಡಿಸಿದ್ದಾರೆ.

Advertisement

ಮುಂಬಯಿ -ವಡಾಲಾದ ಸುಪ್ರಸಿದ್ಧ ಶ್ರೀ ರಾಮಮಂದಿರದ ಮಹಿಳಾ ವಿಭಾಗದ ಪ್ರತಿಭಾವಂತ ಕಲಾವಿದೆಯರನ್ನು ಗುರುತಿಸಿ, ಅವರ ರಂಗ ಪ್ರತಿಭೆಯನ್ನು ಅರಳಿಸಿ, ತರಬೇತುಗೊಳಿಸಿ, ಸ್ವತಃ ಕಿರು ನಾಟಕಗಳನ್ನು  ರಚಿಸಿ, ನಿರ್ದೇಶಿಸಿ, ಪ್ರದರ್ಶಿಸಿದ ಹೆಗ್ಗಳಿಕೆಗೆ ವಸುಧಾ ಪ್ರಭು ಅವರದು. “”ಅಬಲಾ ನ್ಹಯಿ ಸಬಲಾ”, “”ಜಾವುಟ್‌ ಪೂರಾ ಬರೇಕ”, “”ಮಾಕ್ಕಾ ವ್ಹಾರ್ಡಿಕ ಜಾವಾ” ಮೊದಲಾದ ನಾಟಕಗಳನ್ನು  ವಿರಚಿಸಿ, ನಿರ್ದೇಶಿಸಿ, ಶ್ರೀರಾಮ ಮಂದಿರದ ಪ್ರಾಂಗಣದಲ್ಲಿ ಪ್ರತಿ ವರ್ಷ ನೆರವೇರುವ ಜಿ.ಎಸ್‌.ಬಿ. ಸಾರ್ವಜನಿಕ ಗಣೇಶೋತ್ಸವದ ಸಂದರ್ಭ ಹಾಗೂ ಇತರೆಡೆಯಲ್ಲಿ ಪ್ರದರ್ಶಿಸಿ, ಕೊಂಕಣಿ ಕಲಾಭಿಮಾನಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಲಿಮ್ಕಾ ದಾಖಲೆಯ ದಿಗªರ್ಶಕ ಡಾ| ಚಂದ್ರಶೇಖರ್‌ ಶೆಣೈಯವರ ಅತಿ ಪ್ರಶಂಸಿಸಲ್ಪಟ್ಟ “”ಸತ್ಯಂ ವದ ಧರ್ಮ ಚರ” ನಾಟಕದಲ್ಲಿ  “ಗಂಗಾ’ ಪಾತ್ರವನ್ನು ಅಚ್ಚುಕಟ್ಟಾಗಿ ಮೇರು ನಟ ಕಮಲಾಕ್ಷ  ಸರಾಫ‌ ಅವರೊಡನೆ ಅಭಿನಯಿಸಿದ್ದಾರೆ.

ಅಂತೆಯೇ ಕಾಸರಗೋಡು ಬಾಲಕೃಷ್ಣ ಪುರಾಣಿಕ ಅವರ “ಲಗ್ನಾ ಪಿಶೆÏ’, ಎ. ಜಿ. ಕಾಮತರ  “ಸರ್ವೇ ಜನಃ ಚನಮಾಶ್ರಯಂತೇ’, ಹರಿ ಮಾಮ್ಲಿ ಅವರ “ಫ‌ಜೀತಿ’, ಡಾ| ಶೆಣೈಯವರ “ಏಕ ಆಶ್ಶಿಲೊ ರಾಮು’ ನಾಟಕಗಳಲ್ಲಿ ಪಾತ್ರಗಳನ್ನು ಮನಃಪೂರ್ವಕ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಿ ಪಾತ್ರಗಳಿಗೆ ಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 

ಸರಳ, ಸಜ್ಜನ ಸ್ವಭಾವದ ವಸುಧಾ ಪ್ರಭು ಅವರು ವಸುಧೆಯಷ್ಟೇ ಪ್ರತಿಭಾವಂತರಾಗಿದ್ದು, ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಜನಿಸಿದವರು. ಕಾವ್ಯ – ಕವನ ರಚನೆಯಲ್ಲಿಯೂ ತೊಡಗಿದ್ದಾರೆ. ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರ ಪ್ರಾಯೋಜಿತ ಹಾಗೂ ಇತರ ಕವಿಗೋಷ್ಠಿ, ಕೊಂಕಣಿ ಸಾಹಿತ್ಯ ಸಮ್ಮೇಳನ, ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಭಾಗಿಯಾಗಿ ತಾನೊಬ್ಬ ಲೇಖಕಿ, ಕವಿ ಎಂಬುದನ್ನು ಸಾಬೀತುಪಡಿಸಿದ್ದಾರೆ. “ಆವೈಜಾಸಾ’ ಮಕ್ಕಳ ಕೊಂಕಣಿ ಚಲನಚಿತ್ರದ ಪಾತ್ರವೊಂದ ರಲ್ಲಿ ಅಭಿನಯಿಸಿದ್ದಾರೆ. ಮುಂಬಯಿಯ ಹಲವು ಸಂಘ-ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ತಮ್ಮನ್ನು ತಾವು ಸಮಾಜ ಸೇವೆ, ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ನಾಟಕ ಪ್ರಿಯ

Advertisement
Advertisement

Udayavani is now on Telegram. Click here to join our channel and stay updated with the latest news.

Next