ಬೆಂಗಳೂರು: ಕಲಾ ಪ್ರಪಂಚಕ್ಕೆ ಕಾಲಿಡುವ ಹೊಸ ಪ್ರತಿಭೆಗಳು ಪರಿಶ್ರಮದ ಮೆರುಗಿನಿಂದ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳಬೇಕು. ಈ ಪ್ರಗತಿ ನಿರಂತರವಾಗಿ ಮುಂದುವರಿಯಬೇಕು ಎಂದು ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ ಸಲಹೆ ನೀಡಿದ್ದಾರೆ.
ಶರಣ್Õ ಮ್ಯೂಸಿಕ್ ಅಕಾಡೆಮಿ ವತಿಯಿಂದ ಇತ್ತೀಚೆಗೆ ಮಲ್ಲೇಶ್ವರದ ಎವಿಆರ್ ಪ್ರಿವ್ಯೂ ಥಿಯೇಟರ್‌ನಲ್ಲಿ “ಗೆಳೆತನ-ದೋಸ್ತಿ’ ಎಂಬ ಎರಡು ಕನ್ನಡ ಹಾಗೂ ಹಿಂದಿ ವಿಡಿಯೋ ಆಲ್ಬಮ್‌ಗಳ ಯೂಟ್ಯೂಬ್ ಅಂತರ್ಜಾಲ ಆವೃತ್ತಿ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೆ ಸಂಗೀತ ಕಲೆಯನ್ನು ವ್ಯವಸ್ಥಿತವಾಗಿ, ಪ್ರಭಾವಶಾಲಿಯಾಗಿ ಜನರಿಗೆ ತಲುಪಿಸುವ ಚಟುವಟಿಕೆಗಳ ಬಗ್ಗೆ ಹೆಚ್ಚಾಗಿ ತಿಳಿದಿರಲಿಲ್ಲ. ಇಂದು ಪರಿಸ್ಥಿತಿ ಬದಲಾಗಿದೆ. ಒಂದು ಸಾಧಾರಣ ವಿಷಯವನ್ನೂ ಅತ್ಯಂತ ಸಮರ್ಥವಾಗಿ ಜನರ ಮುಂದೆ ಪ್ರಸ್ತುತಪಡಿಸುವ ಮಾಧ್ಯಮಗಳ ಸಂಖ್ಯೆಯೂ ಹೆಚ್ಚಾಗಿದೆ.
“ಪ್ರತಿಭಾವಂತ ಗಾಯಕ ರುಮಿತ್ ಎರಡೂ ಆಲ್ಬಮ್‌ಗಳಲ್ಲಿ ಚೆನ್ನಾಗಿ ಹಾಡಿದ್ದಾರೆ. ಅಭಿನಯವೂ ಹದವಾಗಿದೆ. ಅವರಿಗೆ ನನ್ನ ಆಶೀರ್ವಾದ ಸದಾ ಇರುತ್ತದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಕಿಗೆ ತರುವ ಪಂಡಿತ್ ಶರಣ್ ಚೌಧರಿ ಅವರ ಕಾಳಜಿ ಪ್ರಶಂಸನೀಯ. ಅವರಂಥ ಗುರುಗಳ ಸಂಖ್ಯೆ ಹೆಚ್ಚಾಗಬೇಕು.
ಉತ್ತರ ಕರ್ನಾಟಕದ ಅನೇಕ ಹಿಂದೂಸ್ಥಾನಿ ಗಾಯಕರು ಬೆಂಗಳೂರಿಗೆ ಬರುತ್ತಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಶರಣ್Õ ಮ್ಯೂಸಿಕ್ ಅಕಾಡೆಮಿ ತನ್ನ ಬದ್ಧತೆ, ಪ್ರಾಮಾಣಿಕತೆ ಹಾಗೂ ಸಂಗೀತ ಪ್ರೀತಿಯಿಂದ ಇತರ ಸಂಗೀತ ಸಂಸ್ಥೆಗಳಿಗೆ ಮಾದರಿಯಾಗಿದೆ,’ ಎಂದರು.
“ಗೆಳೆತನ-ದೋಸ್ತಿ ಆಲ್ಬನ್‌ನ ಹಾಡುಗಳನ್ನು www.youtube.comharansmusicacademy ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು,’ ಎಂದು ಗಾಯಕ ರುಮಿತ್ ಕೆ. ಹೇಳಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಪೊ›.ಬಿ.ಕೆ. ಕಣ್ಣೂರ, ರವಿ ಕಮಲಾಪುರಕರ್, ಹಿಂದೂಸ್ಥಾನಿ ಗಾಯಕರಾದ ಪಂ. ಬಸವರಾಜ ಮುಗಳಖೋಡ, ರಂಗಕರ್ಮಿ-ಸಾಹಿತಿ ಶ್ರೀ ಹರಿ ಧೂಪದ, ಗೀತ ರಚನಕಾರ ವಿಜಯ್ ವಿ., ನವೀನ್ ಚಂದ್ರ ಇತರರು ಉಪಸ್ಥಿತರಿದ್ದರು.