Advertisement

ಸ್ಪರ್ಧೆಯಲ್ಲಿ ಪ್ರತಿಭಾ ಅನಾವರಣ ಮುಖ್ಯ

02:43 PM Mar 05, 2017 | Team Udayavani |

ಕಲಬುರಗಿ: ಯಾವುದೇ ಸ್ಪರ್ಧೆಯಿರಲಿ ಸೋಲು, ಗೆಲುವು ಮುಖ್ಯವಲ್ಲ. ಸ್ಪರ್ಧಿಯ ಪ್ರತಿಭೆಯ ಅನಾವರಣವೇ ಮುಖ್ಯ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ಹೇಳಿದರು. 

Advertisement

ನಗರದ ಸಿದ್ದಾರ್ಥ ಕಾನೂನು ಕಾಲೇಜಿನಲ್ಲಿ ರಾಜ್ಯ ಕಾನೂನು ವಿವಿ ಹಾಗೂ ಕೆಪಿಇ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದ್ದ 5ನೇ ಅಂತರ ಕಾಲೇಜುಗಳ ವಲಯ ಮಟ್ಟದ ಯುವ ಜನೋತ್ಸವವನ್ನು ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.  

ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಅತ್ಯಂತ ಸಮರ್ಪಕವಾಗಿ ಹಾಗೂ ಸಮರ್ಥವಾಗಿ ಬಳಸಿಕೊಳ್ಳಬೇಕು. ಅಂಜಿಕೆ, ಭಯ, ಆತಂಕ, ಅವಮಾನಗಳನ್ನು ಸ್ಪರ್ಧಿಗಳು ಬಿಟ್ಟಾಗ ಏನಾದರೂ ಸಾಧಿಸಬಹುದು ಎಂದರು. 

ಕಲಿಕೆ ವಿದ್ಯಾರ್ಥಿಗಳಿಗೆ ಅಗತ್ಯವಾದರೂ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ಸಹ ಅಷ್ಟೇ ಮುಖ್ಯ. ಈ ಹಂತದಲ್ಲಿ ವ್ಯಕ್ತಿತ್ವ ವಿಕಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು. ಇತ್ತಿಚೆಗೆ ವರ್ಗಾವಣೆಯಾದ ಜಿ.ಪಂ.ಸಿಇಒ ಅನಿರುದ್ದ ಶ್ರವಣ ಅವರ ಆಡಳಿತ ಶ್ಲಾಘಿಸಿದರು.

ಈ  ಭಾಗದಿಂದ ಬರಗಾಲದ ಸಂದರ್ಭದಲ್ಲಿ ಕೃಷಿ ಕಾರ್ಮಿಕರು ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ  ಸಮರ್ಪಕವಾಗಿ ಜಾರಿಗೆ ತರುವ ಮೂಲಕ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದರು ಎಂದರು.

Advertisement

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಎಂಎಲ್‌ಸಿ ಮಾರುತಿರಾವ  ಮಾಲೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾನೂನು ವಿವಿ ನಿವೃತ್ತ ಕುಲಸಚಿವ ಪ್ರೊ| ಕೆ.ಎಸ್‌. ಬಗಾಲೆ ಭಾಗವಹಿಸಿದ್ದರು.

ಕಾನೂನು ಪದವಿಯನ್ನು ಕನ್ನಡ ಮಾಧ್ಯಮದಲ್ಲಿ ಪ್ರಥಮ  ರ್‍ಯಾಂಕ್‌ನಲ್ಲಿ ಪಾಸಾದ ಕಾಲೇಜಿನ ವಿದ್ಯಾರ್ಥಿನಿ ಆಶಾಲತಾ ನಾಗರೆಡ್ಡಿ, ಸ್ನಾತಕೋತ್ತರದಲ್ಲಿ ದ್ವಿತೀಯ ರ್‍ಯಾಂಕ್‌ ಪಡೆದ ಪ್ರಾಚಿ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಡಾ| ಚಂದ್ರಶೇಖರ ಸ್ವಾಗತಿಸಿದರು, ಎನ್‌. ತಿಪ್ಪೆಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next