Advertisement

ನನ್ನನ್ನು ಸೋಲಿಸುವ ಷಡ್ಯಂತ್ರ ಫ‌ಲಿಸಲಿಲ್ಲ

08:50 PM Jan 31, 2020 | Lakshmi GovindaRaj |

ಕೆ.ಆರ್‌.ನಗರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲ ಸ್ವ-ಪಕ್ಷಿಯರೇ ದೂರವಾಗಿ ನನ್ನನ್ನು ಸೋಲಿಸಲು ಹಲವು ಷಡ್ಯಂತ್ರ ನಡೆಸಿದರು. ಆದರೂ ದೇವರು ಮತ್ತು ಮತದಾರ ಪ್ರಭುಗಳು ನನ್ನನ್ನು ಕೈಬಿಡದೆ 3ನೇ ಬಾರಿ ಗೆಲ್ಲಿಸಿದರು ಎಂದು ಶಾಸಕ ಸಾ.ರಾ.ಮಹೇಶ್‌ ಸ್ಮರಿಸಿದರು.

Advertisement

ತಾಲೂಕಿನ ಗೊಲ್ಲರಕೊಪ್ಪಲು ಗ್ರಾಮದಲ್ಲಿ ಚೌಡೇಶ್ವರಿ-ಚಲುವರಾಯಸ್ವಾಮಿ ದೇವಸ್ಥಾನದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ ಮಾಡುವವರನ್ನು ಮತದಾರರು ಬೆಂಬಲಿಸಿದರೆ ಅದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಸಲ್ಲಿಸುವ ದೊಡ್ಡ ಗೌರವ. ನನ್ನ ಅಧಿಕಾರದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ ಎಂದರು.

ಚುಂಚನಕಟ್ಟೆ ಹೋಬಳಿಯ ಸಕ್ಕರೆ ಗ್ರಾಮದ ಬಳಿ 18.5 ಕೋಟಿ ರೂ.ವೆಚ್ಚದಲ್ಲಿ ಮೊರಾರ್ಜಿ ಶಾಲಾ ಕಟ್ಟಡ ನಿರ್ಮಿಸಲು ಹಣ ಮಂಜೂರಾಗಿದ್ದು, ಈ ತಿಂಗಳ ಅಂತ್ಯದೊಳಗೆ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಚೌಡೇಶ್ವರಿ ತಾಯಿ ಸೇವಾ ಸಮಿತಿ ಅಧ್ಯಕ್ಷ ಶಿವಣ್ಣನಾಯಕ, ಉಪಾಧ್ಯಕ್ಷ ಚಲುವನಾಯಕ, ಖಜಾಂಚಿ ರಾಜನಾಯಕ, ಮುಖ್ಯ ಕಾರ್ಯದರ್ಶಿ ಎಚ್‌.ಎಸ್‌.ಹರೀಶ್‌, ಕೆ.ಆರ್‌.ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್‌.ಸಿ.ಕುಮಾರ್‌,

ಹಳಿಯೂರು ಗ್ರಾಪಂ ಉಪಾಧ್ಯಕ್ಷ ಎಚ್‌.ಆರ್‌.ಕೃಷ್ಣಮೂರ್ತಿ, ತಾಲೂಕು ಯುವ ಜೆಡಿಎಸ್‌ ಅಧ್ಯಕ್ಷ ಎಚ್‌.ಆರ್‌.ಮಧುಚಂದ್ರ, ಜೆಡಿಎಸ್‌ ಮುಖಂಡರಾದ ಬಿ.ರಮೇಶ್‌, ಕೆ.ಜೆ.ಕುಚೇಲ, ಎಚ್‌.ಕೆ.ಕೀರ್ತಿ, ಎಚ್‌.ಎನ್‌.ರಾಘವೇಂದ್ರ, ಹಾಡ್ಯಮಹೇಶ್‌, ತಹಶೀಲ್ದಾರ್‌ ಎಂ.ಮಂಜುಳಾ, ತಾಪಂ ಇಒ ಎಂ.ಎಸ್‌.ರಮೇಶ್‌, ಎಇಇ ಮಂಜುನಾಥ್‌, ಎಇ ಮಲ್ಲಿಕಾರ್ಜುನ, ಪಿಡಿಒ ವಾಮನರಾವ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next