Advertisement
ಕ್ಷೇತ್ರದ ರಾಂಪುರ ಸಮೀಪ 108 ಎಕರೆ ವಿಸ್ತೀರ್ಣವುಳ್ಳ ಕೆರೆಯ ದುಸ್ಥಿತಿ ಇದು. 2 ದಶಕಗಳ ಹಿಂದೆ ರೈತರ ಜೀವನಾಡಿಯಾಗಿದ್ದ ಕೆರೆಯು ಇಂದು ಕಲುಷಿತ ನೀರಿನಿಂದ ಅವ್ಯವಸ್ಥೆಯ ಅಗರವಾಗಿದೆ.
Related Articles
Advertisement
ಸಾಂಕ್ರಾಮಿಕ ರೋಗ ಭೀತಿ: ಕಲುಷಿತ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳ ಭೀತಿಯಿಂದ ದಿನ ಕಳೆಯುವಂತಾಗಿದೆ. ಸಂಜೆ 5 ಗಂಟೆಯ ನಂತರ ಮನೆಬಾಗಿಲು ತೆರೆಯುವಂತಿಲ್ಲ. ರಾಂಪುರ, ಅದೂರು, ಚನ್ನಸಂದ್ರ, ಕನಕನಗರ, ಮಾರುಗೊಂಡನಹಳ್ಳಿ, ಬಿಳಿಶಿವಾಲೆ, ಸೇರಿದಂತೆ ಕೆರೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೊಳೆಗಳ ಕಾಟ ಹೆಚ್ಚಾಗಿದೆ. ಕೆರೆಯ ಪಕ್ಕದಲ್ಲಿಯೇ ಇರುವ ರಾಂಪುರ ಗ್ರಾಮದ ನಿವಾಸಿಗಳು ಡೆಂಘೀ ಜ್ವರಕ್ಕೆ ಮೃತಪಟ್ಟಿರುವ ನಿದರ್ಶನವಿದೆ.
ನಿರ್ವಹಣೆ ಮರೀಚಿಕೆ: ಈ ಕೆರೆಯು ಬಿಬಿಎಂಪಿ ವ್ಯಾಪ್ತಿಗೆ ಒಳಪಡುತ್ತದೆ. ಕಂದಾಯ ಇಲಾಖೆಯ ಅಧೀನದಲ್ಲಿದ್ದ ಕೆರೆಯನ್ನು ಬಿಡಿಎಗೆ ಹಸ್ತಾಂತರಿಸಲಾಗಿದ್ದು, ನಿರ್ವಹಣೆ ಇಲ್ಲದೆ ಸೂರಗಿದೆ. ಕೆರೆಗೆ ರಾತ್ರೋರಾತ್ರಿ ಕೋಳಿ ತ್ಯಾಜ್ಯ ಸುರಿಯಲಾಗುತ್ತಿದ್ದು ಕಲುಷಿತಗೊಳ್ಳಲು ಕಾರಣವಾಗುತ್ತಿದೆ. ಕೆಲವೊಮ್ಮೆ ಬಿಬಿಎಂಪಿ ತ್ಯಾಜ್ಯವನ್ನು ಸುರಿದಿರುವ ನಿದರ್ಶನಗಳು ಇವೆ. ಕೆರೆಗೆ ತಂತಿಬೇಲಿ ಅಳವಡಿಸಲಾಗಿದ್ದರೂ ಕೆಲವೆಡೆ ಬೇಲಿಯನ್ನು ಕಿತ್ತು ಹಾಕಲಾಗಿದೆ.
ಒತ್ತವರಿ ಸಮಸ್ಯೆ: ಕೆರೆಗೆ ಸಂರ್ಪಕ ಕಲ್ಪಿಸುವ ರಾಜಕಾಲುವೆಗಳು ಭೂಗಳ್ಳರಿಂದ ಒತ್ತುವರಿಯಾಗುತ್ತಿವೆ. 15 ವರ್ಷಗಳ ಹಿಂದೆ ಕೃಷಿ ಚಟುವಟಿಕೆಗೆ ನೇರವಾಗಿದ್ದ ಕೆರೆಯ ನೀರು ಇಂದು ರಾಸಯಾನಿಕ ಮಿಶ್ರಿತ ಕಲುಷಿತ ನೀರಿನಿಂದ ಕೂಡಿದೆ.
ಇದ್ದರಿಂದ ಬೇಸಾಯ ಮಾಡುತ್ತಿದ್ದ ಭೂಮಿಯಲ್ಲಿ ಜೊಂಡು ಸಸ್ಯ ಹಾಗೂ ಹುಲ್ಲು ಬೆಳೆದು ಬಂಜಾರು ಪ್ರದೇಶವಾಗಿ ಪರಿವರ್ತಿತವಾಗಿದೆ, ಕೃಷಿಯನ್ನು ಅವಲಂಬಿಸಿದವರು ನಗರ ಪ್ರದೇಶದತ್ತ ಉದ್ಯೋಗಹರಸಿ ಬರುತ್ತಿದ್ದಾರೆ. ಕೆರೆಯು ಕಲುಷಿತವಾಗಿರುವುದರಿಂದ ಕೊಳವೆ ಬಾವಿಗಳ ನೀರು ಸಹ ಮಿಶ್ರಣಗೊಂಡಿದ್ದು. ಕುಡಿವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ಕೆರೆಯಿಂದ ಆಗುತ್ತಿರುವ ದುಷ್ಪರಿಣಾಗಳ ಬಗ್ಗೆ ಹಲವುಬಾರಿ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮಾನವಿ ನೀಡಲಾಗಿದೆ. ಅದರೆ ಇಲ್ಲಿಯವರಗೆ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.
ಕೆರೆ ಅಭಿವೃದ್ಧಿಗೆ 5 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ನಂತರ ಕೆರೆ ತಂತಿ ಬೇಲಿ. ಹೂಳು ತೆಗೆಯಲು, ಕೆರೆ ಮಧ್ಯದಲ್ಲಿ ಐ ಲ್ಯಾಂಡ್ ನಿರ್ಮಾಣ, ವಾಯುವಿಹಾರಿಗಳಿಗೆ ನಡಿಗೆ ಪಥ ನಿರ್ಮಿಸಲು ಸುಮಾರು 20 ಕೋಟಿಗೂ ಹೆಚ್ಚು ಅನುದಾನ ಅವಶ್ಯಕತೆಯಿದೆ ಇದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. -ಜಗನಾಥ್, ಉಪ ವನಪಾಲಕ