Advertisement

ಸ್ವೀಪ್‌ ಸಮಿತಿ ಬದ್ಧತೆಯಿಂದ ಕಾರ್ಯ ನಿರ್ವಹಿಸಲಿ

03:37 PM Apr 07, 2018 | Team Udayavani |

ಸುರಪುರ: ಸ್ವೀಪ್‌ ಸಮಿತಿ ಸದಸ್ಯರು ಸರಿಯಾಗಿ ಕೆಲಸ ಮಾಡಿದ್ದಲ್ಲಿ ಖಂಡಿತವಾಗಿ ಮತದಾನ ಹೆಚ್ಚಳ ಆಗುತ್ತದೆ. ಕಾರಣ ಸ್ವೀಪ್‌ ಸಮಿತಿ ಸದಸ್ಯರು ಮತ್ತು ಬಿಎಲ್‌ಒಗಳು ಬದ್ಧತೆಯಿಂದ ಕೆಲಸ ನಿರ್ವಹಿಸುವಂತೆ ಚುನಾವಣಾ ಅಧಿಕಾರಿ ಪ್ರವೀಣ ಪ್ರಿಯಾ ಎನ್‌. ಡೇವಿಡ್‌ ಸಲಹೆ ನೀಡಿದರು.

Advertisement

ನಗರದ ತಹಶೀಲ್ದಾರ್‌ ಕಚೇರಿಯ ಸಭಾಂಗಣದಲ್ಲಿ ಸ್ವೀಪ್‌ ಸಮಿತಿ ಸದಸ್ಯರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಮತದಾನ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಅಂಗವಿಕಲರಿಗೆ ರ್‍ಯಾಂಪ್‌, ಗಾಲಿ ಕುರ್ಚಿ ಅಳವಡಿಸುವುದು, ದೃಷ್ಟಿ ಹೀನರಿಗೆ ಕಿವುಡ ಮೂಗರ ಮತ ಚಲಾವಣೆಗೆ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿಗಳಿಂದ ನೆರವು ನೀಡುವ ಕುರಿತು ಮನವರಿಕೆ ಮಾಡಿಕೊಡವ ಮೂಲಕ ಜನರಲ್ಲಿ ಮತದಾನ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು. 

ಬಿಎಲ್‌ಒಗಳು ಮನೆ ಮನೆಗೆ ತೆರಳಿ ವಿವಿ ಪ್ಯಾಟ್‌ ಬಳಕೆ ಮತ್ತು ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎನ್ನುವುದರ ಕುರಿತು ತಿಳುವಳಿಕೆ ಮೂಡಿಸಬೇಕು. ಮತದಾನ ಮಾಡುವ ವಿಧಾನವನ್ನು ಕಲಿಸಿಕೊಡಬೇಕು. ಬಿಎಲ್‌ಒ, ಅಂಗನವಾಡಿ, ಆಶಾ ಕಾರ್ಯೆಕರ್ತೆಯರು ಆಯಾ ಮತಗಟ್ಟೆಯಲ್ಲಿದ್ದು, ತಮ್ಮ ಪಾಲಿನ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸಿದಲ್ಲಿ ಸಹಜವಾಗಿ ಮತದಾನ
ಹೆಚ್ಚಳವಾಗಲಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಹೆಚ್ಚು ಜನರು ಅನಕ್ಷರಸ್ಥರಿದ್ದಾರೆ. ಸಾಮಾಜಿಕ ಜಾಲ ತಾಣಗಳ ಮೂಲಕ ಅರಿವು ಮೂಡಿಸುವುದು ಕಷ್ಟ ಸಾಧ್ಯ. ಕಾರಣ ಮತದಾರರು ಸ್ವಹ ಇಚ್ಛೆಯಿಂದ ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡುವಂತೆ ತಿಳಿಸಬೇಕು. ಮತದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಕಳೆದ ಬಾರಿ ಕಡಿಮೆ ಮತದಾನ ಆಗಿರುವ ಕಡೆ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಬೇಕು ಎಂದು ತಾಕೀತು ಮಾಡಿದರು. 

ಮಿಂಚಿನ ಮತಗಟ್ಟೆ ಅಭಿಯಾನ: ಏ. 8ರಂದು ಪ್ರತಿ ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿ ಅಭಿಯಾನ ಏರ್ಪಡಿಸಲಾಗಿದೆ. ಬಿಎಲ್‌ಒ ಮತ್ತು ಅಂಗನವಾಡಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಹೆಸರು ಕೈ ಬಿಟ್ಟವರನ್ನು, ಹೊಸದಾಗಿ ಸೇರ್ಪಡೆ ಮಾಡಿಕೊಳ್ಳುವರರನ್ನು ಕರೆ ತಂದು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಹೆಸರು ನೋಂದಣಿ ಮಾಡಿಸಬೇಕು. ಸ್ಥಳೀಯ ಮುಖಂಡರ ಒತ್ತಾಯಕ್ಕೆ ಅಥವಾ ಇನ್ನಾರದೋ ಒತ್ತಡಕ್ಕೆ ಮಣಿದಾಗಲಿ ಮತಪಟ್ಟಿಯಿಂದ ಹೆಸರು ತೆಗೆದು ಹಾಕಿ ಅನಾವಶ್ಯಕ ವಿವಾದ
ಸೃಷ್ಟಿಸಿಕೊಳ್ಳಬೇಡಿ ಎಂದು ಮಾರ್ಗದರ್ಶನ ನೀಡಿದರು.

Advertisement

ರಜೆ ಇಲ್ಲಾ: ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳಿಗೆ ಯಾವುದೇ ಕಾರಣಕ್ಕೆ ರಜೆ ನೀಡುವುದಿಲ್ಲ. ಚುನಾವಣಾ ಆಯೋಗದಂತೆ ನನ್ನನ್ನು ಹಿಡಿದು ಎಲ್ಲರು ಸೇರಿ ಬದ್ಧತೆಯಿಂದ ಕೆಲಸ ನಿರ್ವಹಿಸೋಣ ಎಂದು ತಿಳಿಸಿದರು. ರಾಜ್ಯ ಹಂತದ ತರಬೇತಿದಾರ ಹಣಮಂತ ಪೂಜಾರಿ ಸ್ವೀಪ್‌ ಸಮಿತಿ ಕೈಗೊಳ್ಳಬೇಕಾದ ಕಾರ್ಯಕ್ರಮ ಮತ್ತು ಅನುಷ್ಠಾನ ಕುರಿತು ಮಾಹಿತಿ ನೀಡಿದರು. ಪ್ರೋಬೇಷನರಿ ತಹಶೀಲ್ದಾರ್‌ ನಿಂಗಣ್ಣ ಬಿರೇದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next