Advertisement

ನಗರದ ರಸ್ತೆಯಲ್ಲಿ ಓಡಾಡಲಿವೆ ಹೈಟೆಕ್‌ ಬಸ್‌ಗಳು

12:34 PM Feb 07, 2017 | Team Udayavani |

ಬೆಂಗಳೂರು: ಜೆ-ನರ್ಮ್ ಯೋಜನೆಯ ಅಡಿಯಲ್ಲಿ ಬಿಎಂಟಿಸಿಗೆ ಲಭ್ಯವಾಗಿರುವ “ಅರ್ಬನ್‌ ಬಸ್‌ ಸ್ಪೆಸಿಫಿಕೇಷನ್‌’ ಮಾದರಿಯ ಹೊಸ ಹವಾನಿಯಂತ್ರಿತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಚಾಲನೆ ನೀಡಿದರು.

Advertisement

ಬಸ್‌ಗಳಿಗೆ ಚಾಲನೆ ನೀಡಿದ ಸಚಿವ ರೆಡ್ಡಿ, ಅದೇ ಬಸ್‌ನಲ್ಲಿ ಶಾಂತಿನಗರದಲ್ಲಿ ಒಂದು ಸುತ್ತು ಪ್ರಯಾಣ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಎಂ. ನಾಗರಾಜ್‌ ಯಾದವ್‌, ಉಪಾಧ್ಯಕ್ಷ ಡಿ. ಗೋವಿಂದರಾಜು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಬಿ. ಬಸವರಾಜು, ಬಿಎಂಟಿಸಿ ನಿರ್ದೇಶಕಿ ಡಾ.ಏಕರೂಪ್‌ ಕೌರ್‌ ಮತ್ತಿತರರು ಪಾಲ್ಗೊಂಡಿದ್ದರು. 

ಮಾರ್ಗಬದಲಾವಣೆ ಇಲ್ಲ: ಯಲಹಂಕದಲ್ಲಿ ಫೆ. 14ರಿಂದ 18ರವರೆಗೆ ನಡೆಯಲಿರುವ “ಏರೋ ಇಂಡಿಯಾ-2017′ ಪ್ರದರ್ಶನದ ವೇಳೆ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಎಂದಿನಂತೆ ಇರಲಿದೆ. ಸಾಮಾನ್ಯವಾಗಿ ವೈಮಾನಿಕ ಪ್ರದರ್ಶನದ ವೇಳೆ ಪ್ರತಿವರ್ಷ ಯಲಹಂಕ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ವಾಯುವಜ್ರ ಮತ್ತು ದೂರ ಮಾರ್ಗದ ಯಾವುದೇ ಅನುಸೂಚಿ ಅಥವಾ ಸುತ್ತುವಳಿಗಳಲ್ಲಿ ಯಾವುದೇ ಮಾರ್ಗ ಬದಲಾವಣೆ ಇರುವುದಿಲ್ಲ ಎಂದು ಬಿಎಂಟಿಸಿ ಪ್ರಕಟಣೆ ಸ್ಪಷ್ಟಪಡಿಸಿದೆ.

ಬಸ್‌ನ ವೈಶಿಷ್ಟವೇನು?
ಹೊಸ ಮಾದರಿಯ ಬಸ್‌ಗಳಲ್ಲಿ ಆರಾಮದಾಯ ಆಸನಗಳು, ಪ್ರತಿ ಆಸನಗಳ ಸಾಲಿನಲ್ಲಿ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ಚಾರ್ಜಿಂಗ್‌ ವ್ಯವಸ್ಥೆ, ವಾಹನಗಳ ಒಳಭಾಗದಲ್ಲಿರುವ ಪ್ರತಿ ಕಂಬಗಳಲ್ಲಿ ವಾಹನಗಳ ನಿಲುಗಡೆ ಕೋರಿಕೆಯ ಸ್ವಿಚ್‌ಗಳು, ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ವಾಹನಗಳನ್ನು ನಿಲ್ಲಿಸಲು ಅನುಕೂಲವಾಗುವಂತೆ ವಾಹನದ ಮಧ್ಯಭಾಗದಲ್ಲಿ ಸ್ವಿಚ್‌ ಇದೆ.

Advertisement

Udayavani is now on Telegram. Click here to join our channel and stay updated with the latest news.

Next