Advertisement

ರಾಜ್ಯ ಪೊಲೀಸರ ಆದೇಶ ಎತ್ತಿ ಹಿಡಿದ ಸುಪ್ರೀಂ

12:42 PM Jan 27, 2018 | Team Udayavani |

ನವದೆಹಲಿ: ಯಾವುದೇ ಪಬ್‌, ಕ್ಲಬ್‌, ಲೈವ್‌ ಬ್ಯಾಂಡ್‌, ಡಿಸ್ಕೋ ಥೆಕ್‌ಗಳುಳ್ಳ ರೆಸ್ಟೋರೆಂಟ್‌ಗಳು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು 2005ರಲ್ಲಿ ಕರ್ನಾಟಕ ಪೊಲೀಸ್‌ ಇಲಾಖೆ ನೀಡಿರುವ ಆದೇಶವನ್ನು ಪ್ರಶ್ನಿಸಿ, ಕರ್ನಾಟಕ ಹೋಟೆಲ್‌ ಮಾಲೀಕರ ಸಂಘ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ. 

Advertisement

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಆರ್‌.ಕೆ. ಅಗರ್ವಾಲ್‌ ಹಾಗೂ ಎ.ಎಂ. ಸಪ್ರ ಅವರುಳ್ಳ ನ್ಯಾಯಪೀಠ, “ಇತ್ತೀಚೆಗೆ ಮುಂಬೈನ ಕಮಲಾ ಮಿಲ್ಸ್‌ ಅಗ್ನಿ ದುರಂತ, ವರ್ಷಗಳ ಹಿಂದೆ ದೆಹಲಿಯ ಉಪಾಹಾರ್‌ ಚಿತ್ರಮಂದಿರದ ಅಗ್ನಿ ದುರಂತದ ಘಟನೆಗಳು ಸುರಕ್ಷತಾ ಕ್ರಮಗಳ ಲೋಪಗಳನ್ನು ತೋರುತ್ತವೆ. ಇಂಥ ಘಟನೆಗಳು ನಡೆಯಬಾರದೆಂದರೆ ಸುರûಾ ನಿಯಮಗಳನ್ನು ಅಳವಡಿಸಿಕೊಳ್ಳುವುದೇ ಸರಿಯಾದ ಕ್ರಮ” ಎಂದಿದೆ. 

ಅಲ್ಲದೆ, “ಕಾನೂನು, ಸಂವಿಧಾನಗಳು ಹೇಳುವುದಕ್ಕಿಂತ ಮುಂಚೆ ಜನರ ಯೋಗ ಕ್ಷೇಮ ಹಾಗೂ ಅವರ ಸುರಕ್ಷೆ ನಮ್ಮ ಮೊದಲ ಆದ್ಯತೆಯಾಗಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡೇ ಕರ್ನಾಟಕ ಪೊಲೀಸ್‌ ಇಲಾಖೆ 2005ರಲ್ಲಿ ರೆಸ್ಟೋರೆಂಟ್‌ಗಳಿಗೆ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳುವುದನ್ನು ಕಡ್ಡಾಯವಾಗಿಸಿದೆ. ಸಮುದಾಯದ ಒಳಿತಿಗಾಗಿ ಇಂಥ ಆದೇಶ ನೀಡಿರುವುದು ಔಚಿತ್ಯಪೂರ್ಣವಾಗಿದೆ” ಎಂದು ಪೀಠ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next